AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಌಂಬುಲೆನ್ಸ್​ ಸಿಬ್ಬಂದಿಗೆ ಊಟದ ಹೊತ್ತು.. ಮಗುವಿನ ಪ್ರಾಣಕ್ಕೇ ತಂದೊಡ್ಡಿತು ಕುತ್ತು!

ಭುವನೇಶ್ವರ್​: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಮಗುವನ್ನ 108 ಌಂಬುಲೆನ್ಸ್​ ಸಿಬ್ಬಂದಿ ತ್ವರಿತವಾಗಿ ಆಸ್ಪತ್ರೆಗೆ ತಲುಪಿಸದೆ ಕೊನೆಗೆ ಅದು ಸಾವನ್ನಪ್ಪಿದ ಘಟನೆ ಒಡಿಶಾದ ಮಯೂರ್​ಭಂಜ್​ ಜಿಲ್ಲೆಯಲ್ಲಿ ಬೆಳಿಕಿಗೆ ಬಂದಿದೆ. ನಿರಂಜನ್​ ಬೆಹೆರಾ ಹಾಗೂ ಗೀತಾ ದಂಪತಿಯ ಒಂದು ವರ್ಷದ ಮಗ ಕಳೆದ ಭಾನುವಾರ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಬರಿಪಾದ ಪಟ್ಟಣದ ಆಸ್ಪತ್ರೆಗೆ ದಾಖಲಿಸಿದ್ದರು. ಮಗುವಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದ ಕಾರಣ ಅವನನ್ನ ಕಟಕ್​ ನಗರದ ದೊಡ್ಡ ಆಸ್ಪತ್ರೆಗೆ ಕರೆದುಕೊಂಡು ಹೋಗಲು ವೈದ್ಯರು ಸೂಚಿಸಿದರು. ಅಲ್ಲಿಂದಲೇ ನೋಡಿ ದಂಪತಿಯ […]

ಌಂಬುಲೆನ್ಸ್​ ಸಿಬ್ಬಂದಿಗೆ ಊಟದ ಹೊತ್ತು.. ಮಗುವಿನ ಪ್ರಾಣಕ್ಕೇ ತಂದೊಡ್ಡಿತು ಕುತ್ತು!
ರಾಜಧಾನಿ ಬೆಂಗಳೂರಿನಲ್ಲಿ ಕ್ಷಣಕ್ಷಣಕ್ಕೂ ಹೊಸ ಸಮಸ್ಯೆಗಳು ಸೃಷ್ಟಿ, ಹಣ ಕೊಟ್ರೂ ಕೊರೊನಾ ಡೆಡ್‌ಬಾಡಿಗೆ ಸಿಗ್ತಿಲ್ಲ ಮುಕ್ತಿ
KUSHAL V
| Updated By: ಸಾಧು ಶ್ರೀನಾಥ್​|

Updated on: Aug 11, 2020 | 6:06 PM

Share

ಭುವನೇಶ್ವರ್​: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಮಗುವನ್ನ 108 ಌಂಬುಲೆನ್ಸ್​ ಸಿಬ್ಬಂದಿ ತ್ವರಿತವಾಗಿ ಆಸ್ಪತ್ರೆಗೆ ತಲುಪಿಸದೆ ಕೊನೆಗೆ ಅದು ಸಾವನ್ನಪ್ಪಿದ ಘಟನೆ ಒಡಿಶಾದ ಮಯೂರ್​ಭಂಜ್​ ಜಿಲ್ಲೆಯಲ್ಲಿ ಬೆಳಿಕಿಗೆ ಬಂದಿದೆ.

ನಿರಂಜನ್​ ಬೆಹೆರಾ ಹಾಗೂ ಗೀತಾ ದಂಪತಿಯ ಒಂದು ವರ್ಷದ ಮಗ ಕಳೆದ ಭಾನುವಾರ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಬರಿಪಾದ ಪಟ್ಟಣದ ಆಸ್ಪತ್ರೆಗೆ ದಾಖಲಿಸಿದ್ದರು. ಮಗುವಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದ ಕಾರಣ ಅವನನ್ನ ಕಟಕ್​ ನಗರದ ದೊಡ್ಡ ಆಸ್ಪತ್ರೆಗೆ ಕರೆದುಕೊಂಡು ಹೋಗಲು ವೈದ್ಯರು ಸೂಚಿಸಿದರು. ಅಲ್ಲಿಂದಲೇ ನೋಡಿ ದಂಪತಿಯ ಪರದಾಟ ಶುರುವಾಗಿದ್ದು.

ಮಗುವನ್ನ ಕರೆದೊಯ್ಯಲು ಬಂದ 108 ಌಂಬುಲೆನ್ಸ್​ನ ಸಿಬ್ಬಂದಿಗೆ ದಾರಿ ಮಧ್ಯೆ ಹಸಿವಾಗಿ ಊಟದ ವಿರಾಮ ತೆಗೆದುಕೊಳ್ಳೋಕೆ ಮುಂದಾದರಂತೆ. ಅಲ್ಲೇ ಇದ್ದ ಢಾಬಾದಲ್ಲಿ ಊಟ ಮುಗಿಸಿ ಆದಷ್ಟು ಬೇಗ ವಾಪಸ್​ ಬರ್ತಿವಿ ಅಂತಾ ಹೋದವರು ಒಂದು ಗಂಟೆ ಕಳೆದರು ಮರಳಲೇ ಇಲ್ಲ. ಚಿಂತೆಗೆ ಒಳಗಾದ ನಿರಂಜನ್​ ಸಿಬ್ಬಂದಿಯನ್ನ ಎಷ್ಟೇ ಬೇಡಿಕೊಂಡರೂ ಡೋಂಟ್​ ಕೇರ್ ಅಂದಿದ್ದಾರೆ​.

‘ಮಗು ಕೇವಲ 10 ನಿಮಿಷ ಮುಂಚೆ ಆಸ್ಪತ್ರೆ ತಲುಪಿದ್ದರೆ..’ ಅಂತೂ ತಿಂದು ತೇಗುತ್ತಾ ಹಿಂದಿರುಗಿದ ಸಿಬ್ಬಂದಿ ಪ್ರಯಾಣ ಮುಂದುವರೆಸಿದರು. ಮಗುವನ್ನ ಆಸ್ಪತ್ರೆಗೂ ಸಹ ತಲುಪಿಸಿದರು. ಆದರೆ, ಕಂದಮ್ಮನ ಬಾಳ ಪಯಣ ಮುಂಚೆಯೇ ಕೊನೆಗೊಂಡಿತ್ತು. ತೀವ್ರ ಅನಾರೋಗ್ಯ ಉಂಟಾದ ಮಗು ಆಸ್ಪತ್ರೆ ತಲುಪುವ ಮುನ್ನ ಮಾರ್ಗ ಮಧ್ಯೆಯೇ ಅಸುನೀಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಅವರ ಪ್ರಕಾರ ಮಗು ಕೇವಲ ಹತ್ತು ನಿಮಿಷಗಳ ಮುಂಚೆ ಆಸ್ಪತ್ರೆ ತಲುಪಿದ್ದರೆ ಅದರ ಜೀವ ಉಳಿಸಬಹುದಿತ್ತಂತೆ.

ಇನ್ನು ಮಗನ ಸಾವಿನ ಶಾಕ್​ನಲ್ಲಿ ಕೆರಳಿದ ನಿರಂಜನ್​ ಮತ್ತು ಆತನ ಸಂಬಂಧಿಕರು 108 ಌಂಬುಲೆನ್ಸ್​ನ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಜೊತೆಗೆ, ಇಬ್ಬರ ವಿರುದ್ಧ ದೂರು ಸಹ ದಾಖಲಿಸಿದ್ದಾರೆ. ಆದರೆ, 108 ಌಂಬುಲೆನ್ಸ್ ನಿರ್ವಹಣಾ ಸಂಸ್ಥೆಯ ಪ್ರಕಾರ ಸಿಬ್ಬಂದಿ ಊಟ ಮಾಡಲು ಕೇವಲ 20 ನಿಮಿಷ  ಮಾತ್ರ ತೆಗೆದುಕೊಂಡಿದ್ದರಂತೆ.