ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಮಹಿಳಾ ಮತದಾರರು ಪ್ರಮುಖ ಪಾತ್ರವಹಿಸಲಿದ್ದಾರೆ. ಹಾಗಾಗಿ ಮಹಿಳಾ ಮತಗಳ ಮೇಲೆ ಕಣ್ಣಿಟ್ಟಿರುವ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಎರಡೂ ತಮ್ಮ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ಸಾಕಷ್ಟು ಭರವಸೆಗಳನ್ನು ನೀಡಿವೆ. ಮಹಿಳೆಯರ ಮತಗಳ ಪ್ರಾಧಾನ್ಯತೆ ಬಗ್ಗೆ ಅವಲೋಕಿಸುವಾಗ ಕಳೆದ ಕೆಲವು ಚುನಾವಣೆಗಳಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಗಳಿಸಿದ ಮತಗಳಲ್ಲಿ ಮಹಿಳಾ ಮತದಾರರ ಪಾಲುಗಳನ್ನು ಗಮನಿಸಬೇಕಿದೆ.
2004 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಶೇ 22 ಮಹಿಳಾ ಮತಗಳನ್ನು ಗಳಿಸಿದ್ದು ಪುರುಷ ಮತದಾರರ ಪ್ರಮಾಣ ಶೇ 23 ಆಗಿದೆ. 2009 ರ ಲೋಕಸಭಾ ಚುನಾವಣೆಯಲ್ಲಿ ಶೇ 20 ಪುರುಷರು ಇದ್ದು ಮಹಿಳಾ ಮತದಾರರ ಸಂಖ್ಯೆ ಶೇ 18 ಕ್ಕೆ ಇಳಿದಿತ್ತು. 2014 ರ ಸಂಸತ್ ಚುನಾವಣೆಯಲ್ಲಿ ಪುರುಷ ಮತದಾರರ ಪ್ರಮಾಣ ಶೇ 33ಕ್ಕೆ ಇರುವಾಗ ಮಹಿಳಾ ಮತದಾರರ ಪ್ರಮಾಣ ಶೇ 29ಕ್ಕೇರಿಕೆ ಆಯಿತು. 2019 ರ ಲೋಕಸಭೆ ಚುನಾವಣೆಯಲ್ಲಿ ಪುರುಷ ಮತದಾರರ ಪ್ರಮಾಣ ಶೇ 39 ಇರುವಾಗ ಮಹಿಳಾ ಮತದಾರರ ಪ್ರಮಾಣ ಶೇ 36ಕ್ಕೇರಿಕೆ ಆಗಿದೆ.
ಟಿಎಂಸಿಯ ಚುಕ್ಕಾಣಿಯನ್ನು ಮಹಿಳೆಯೇ ಹಿಡಿದಿರುವಾಗ ಇದು ಮಹಿಳಾ ಮತದಾರರನ್ನು ಹೆಚ್ಚಿಗೆ ಆಕರ್ಷಿಸಿದೆ. 2006ರ ವಿಧಾನಸಭೆಯಲ್ಲಿ ಶೇ 27ರಷು ಪುರುಷ ಮತದಾರರು ಟಿಎಂಸಿ ಬೆಂಬಲಿಸಿದಾಗ ,ಶೇ 27 ರಷ್ಟು ಮಹಿಳೆಯರು ಟಿಎಂಸಿ ಬೆಂಬಲಿಸಿದ್ದಾರೆ. 2011ರ ವಿಧಾನಸಭೆ ಚುನಾವಣೆಯಲ್ಲಿ ಪುರುಷರ ಪಾಲು ಶೇ 38 ಇರುವಾಗ ಮಹಿಳೆಯರ ಪಾಲು ಶೇ 39 ಆಗಿ ಏರಿಕೆ ಆಯಿತು. 2016ರಲ್ಲಿ ಮಮತಾ ಬ್ಯಾನರ್ಜಿಗೆ ಬೆಂಬಲಿಸಿದ ಮಹಿಳಾ ಮತದಾರರ ಸಂಖ್ಯೆ ಶೇ46 ಆಗಿದ್ದು ಪುರುಷ ಮತದಾರರ ಸಂಖ್ಯೆ ಶೇ 42ಆಗಿದೆ.ಪಶ್ಚಿಮ ಬಂಗಾಳದಲ್ಲಿ 3.7 ಕೋಟಿ ಮಹಿಳಾ ಮತದಾರರಿದ್ದು, ಇದು ಒಟ್ಟು ಮತದಾರರ ಶೇ 49 ಆಗಿದೆ.
ಟಿವಿ 9 ಚುನಾವಣಾ ಅಧ್ಯಯನ ವಿಭಾಗದ ಪ್ರಕಾರ ಪಶ್ಚಿಮ ಬಂಗಾಳದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲು ಟಿಎಂಸಿಯ ಲೆಕ್ಕಾಚಾರ ಹೀಗಿದೆ:
ಒಟ್ಟು ಮತಗಳ ಶೇ 17.6ರಷ್ಟು ಮತಗಳು ಶೇ 65 ಮುಸ್ಲಿಂ ಮತಗಳ ಕ್ರೋಡೀಕರಣದ ಮೂಲಕ ಲಭಿಸುತ್ತದೆ.
ಶೇ 40ರಷ್ಟು ಹಿಂದೂ ಮಹಿಳೆಯರ ಮತಗಳು ಒಟ್ಟುಮತದ ಶೇ 14.3 ರಷ್ಟಾಗಲಿದೆ. ಶೇ 35ರಷ್ಟು ಹಿಂದೂ ಪುರುಷರ ಮತಗಳು ಒಟ್ಟು ಮತಗಳು ಶೇ 13 ರಷ್ಟಿರಲಿದೆ. ಈ ಮೂರು ಅಂಶಗಳು ಸೇರಿದರೆ ಶೇ 44.9 ಮತಗಳು ಲಭಿಸಲಿದ್ದು,ಇದು ಬಿಜೆಪಿಯ ಸವಾಲನ್ನು ಎದುರಿಸಲು ಸಹಾಯವಾಗಲಿದೆ ಎಂಬ ನಿರೀಕ್ಷೆಯನ್ನು ಟಿಎಂಸಿ ಹೊಂದಿದೆ.
ಅಧಿಕಾರಕ್ಕೇರಲು ಪ್ರಯತ್ನಿಸುತ್ತಿರುವ ಬಿಜೆಪಿಯ ಮತ ಲೆಕ್ಕಾಚಾರ ಈ ರೀತಿ ಇದೆ
ಶೇ 55ರಷ್ಟಿರುವ ಹಿಂದೂ ಮಹಿಳಾ ಮತದಾರರಿಂದ ಶೇ 19.7 ರಷ್ಟು ಮತಗಳನ್ನು ಪಡೆಯಬಹುದು.
ಶೇ 60ರಷ್ಟಿರುವ ಹಿಂದೂದೂ ಪುರುಷ ಮತದಾರರಿಂದ ಶೇ 22.3ರಷ್ಟು ಮತಗಳನ್ನು ಪಡೆಯಬಹುದು.
ಶೇ 1.4 ಮುಸ್ಲಿಂ ಮತಗಳನ್ನು ಪಡೆಯಬಹುದು.
ಟಿವಿ9 ಚುನಾವಣಾ ಅಧ್ಯಯನ ತಂಡದ ಪ್ರಕಾರ ಈ ಮೂರು ಅಂಶಗಳಿಂದ ಬಿಜೆಪಿಗೆ ಒಟ್ಟು ಮತಗಳ ಪೈಕಿ ಶೇ 43.4 ಮತಗಳನ್ನು ತಂದುಕೊಡಬಹುದು, ರಾಜ್ಯದಲ್ಲಿ ಅಧಿಕಾರಕ್ಕೇರಲು ಇಷ್ಟು ಸಾಕು.
ಮಹಿಳಾ ಮತದಾರರನ್ನು ಓಲೈಸುವುದಕ್ಕಾಗಿ ಬಿಜೆಪಿಯು,ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಸರ್ಕಾರಿ ಉದ್ಯೋಗಗಳಲ್ಲಿ ಶೇ 33 ಮೀಸಲಾತಿ ನೀಡುವಂತಹ ಹಲವಾರು ಮಹಿಳಾ ಕೇಂದ್ರಿತ ಭರವಸೆಗಳನ್ನು ನೀಡಿದೆ. ವಿಧವಾ ಪಿಂಚಣಿ ಈಗಿರುವುದಕ್ಕಿಂತ ತಿಂಗಳಿಗೆ 1,000 ರೂ, ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಸಾರ್ವಜನಿಕ ಸಾರಿಗೆಯಲ್ಲಿ ಉಚಿತ ಪ್ರಯಾಣ ಮತ್ತು ಕೆಜಿಯಿಂದ ಪಿಜಿವರೆಗೆ ಉಚಿತ ಶಿಕ್ಷಣ ನೀಡುವುದಾಗಿ ಹೇಳಿದೆ.
ರಾಜ್ಯದಲ್ಲಿ 9 ಮಹಿಳಾ ಪಲೀಸ್ ಬೆಟಾಲಿಯನ್ ರಚಿಸುವುದಾಗಿ ಬಿಜೆಪಿ ತಮ್ಮ ಪ್ರಣಾಳಿಕೆಯಲ್ಲಿ ಹೇಳಿದೆ. ಅದೇ ವೇಳೆ ಆಶಾ ಕಾರ್ಯಕರ್ತರ ಸಂಬಳವನ್ನು ತಿಂಗಳಿಗೆ 4,500ರಿಂದ 6,000ಕ್ಕೇರಿಸುವುದಾಗಿ ಭರವಸೆ ನೀಡಿದೆ.
ಮಹಿಳಾ ಮತಗಳನ್ನು ಪಡೆಯುವುದಕ್ಕಾಗಿ ಮಮತಾ ಬ್ಯಾನರ್ಜಿಯವರ ಪಕ್ಷವು ಬಾಂಗ್ಲಾ ನಿಜೆರ್ ಮೆಯಿಕೈ ಚಾಯಿ (ಬಂಗಾಳಕ್ಕೆ ಸ್ವಂತ ಮಗಳೇ ಬೇಕು) ಎಂಬ ಸ್ಲೋಗನ್ನೊಂದಿಗೆ ಕಣಕ್ಕಿಳಿದಿದೆ. ಈ ಘೋಷಣೆಯು ಮುಖ್ಯಮಂತ್ರಿಯ ಲಿಂಗ ಗುರುತನ್ನುಒತ್ತಿ ಹೇಳುತ್ತದೆ. ಹೊರಗಿನವರು ಮತ್ತು ಒಳಗಿನವರು ಎಂಬ ಅಸ್ಮಿತೆಯ ಚರ್ಚೆಗೆ ಇರುವ ಟಿಎಂಸಿಯ ಉತ್ತರವಾಗಿದೆ ಇದು.
ರಾಜ್ಯದ ಎರಡು ಪ್ರಮುಖ ಕಲ್ಯಾಣ ಯೋಜನೆಗಳನ್ನು ಮಹಿಳೆಯರಿಗಾಗಿ ಸಿದ್ಧಪಡಿಸಲಾಗಿದೆ . ಮೊದಲನೆಯದು ಕನ್ಯಾಶ್ರೀ, ಇದು ಹೆಣ್ಣು ಮಕ್ಕಳ ಕಲ್ಯಾಣ ಯೋಜನೆಯಾಗಿದೆ. ಎರಡನೆಯದು ಸ್ವಾಸ್ಥ್ಯ ಸಾಥಿ. ಆಯುಷ್ಮಾನ್ ಭಾರತ್ನಂತೆಯೇ ಇರುವ ಆರೋಗ್ಯ ವಿಮಾ ಯೋಜನೆ ಇದಾಗಿದ್ದು, ವಿಮೆಯನ್ನು ಕುಟುಂಬದ ಮಹಿಳಾ ಸದಸ್ಯರ ಹೆಸರಿನಲ್ಲಿ ಮಾಡಲಾಗುತ್ತದೆ. ಈ ಎರಡೂ ಯೋಜನೆಗಳು ಮಹಿಳೆಯರ ಸಬಲೀಕರಣಕ್ಕೆ ಸಹಕಾರಿಯಾಗಿದೆ ಎಂದು ಟಿಎಂಸಿ ಹೇಳಿಕೊಂಡಿದೆ.
ಟಿಎಂಸಿ ಪ್ರಣಾಳಿಕೆಯು ಸಾರ್ವತ್ರಿಕ ಮೂಲ ಆದಾಯವನ್ನು ಸಾಮಾನ್ಯ ಕುಟುಂಬಗಳಿಗೆ ವರ್ಷಕ್ಕೆ 6,000 ರೂ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬಗಳಿಗೆ 12,000 ರೂ ಎಂದು ಘೋಷಿಸಿದೆ. ಇದು ಅಡುಗೆ ಮನೆಯ ಜವಾಬ್ದಾರಿ ಹೊತ್ತಿರುವ ಮಹಿಳೆಯರನ್ನು ಆಕರ್ಷಿಸಲಿದೆ.
ಇದನ್ನೂ ಓದಿ: ವಿಶ್ಲೇಷಣೆ | ಪಶ್ಚಿಮ ಬಂಗಾಳ ಕದನ ಕಣ; ಮೊದಲ ಹಂತದಲ್ಲಿ ಬಿಜೆಪಿಗೆ ಅನುಕೂಲಕರ ಪರಿಸ್ಥಿತಿ
ವಿಶ್ಲೇಷಣೆ: ಪಶ್ಚಿಮ ಬಂಗಾಳ ಕದನ ಕಣ; 4ನೇ ಹಂತದ ಮತದಾನದಲ್ಲಿ ಸಿಂಗೂರ್ ಕ್ಷೇತ್ರ ನಿರ್ಣಾಯಕ
(Battle for Bengal The women factor)
Published On - 3:10 pm, Wed, 21 April 21