AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

West Bengal Elections 2021: ಚುನಾವಣಾ ಪ್ರಚಾರಕ್ಕೆ 24ಗಂಟೆಗಳ ನಿರ್ಬಂಧ ಪ್ರಶ್ನಿಸಿ ಧರಣಿ ಕುಳಿತ ಮಮತಾ ಬ್ಯಾನರ್ಜಿ

Mamata Banerjee Dharna: ಕೊಲ್ಕತ್ತದ ಮಯೊ ರಸ್ತೆಗೆ ಬೆಳಗ್ಗೆ 11.40ಕ್ಕೆ ಗಾಲಿ ಕುರ್ಚಿಯಲ್ಲಿಯೇ ಬಂದ ಮಮತಾ ಅಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಧರಣಿ ಆರಂಭಿಸಿದ್ದಾರೆ. ಅವರ ಜತೆ ಟಿಎಂಸಿಯ ಯಾವುದೇ ನಾಯಕರು ಇಲ್ಲ.

West Bengal Elections 2021: ಚುನಾವಣಾ ಪ್ರಚಾರಕ್ಕೆ 24ಗಂಟೆಗಳ ನಿರ್ಬಂಧ ಪ್ರಶ್ನಿಸಿ ಧರಣಿ ಕುಳಿತ ಮಮತಾ ಬ್ಯಾನರ್ಜಿ
ಧರಣಿ ಕುಳಿತಿರುವ ಮಮತಾ ಬ್ಯಾನರ್ಜಿ
ರಶ್ಮಿ ಕಲ್ಲಕಟ್ಟ
|

Updated on: Apr 13, 2021 | 3:35 PM

Share

ಕೊಲ್ಕತ್ತ: ಪಶ್ಚಿಮ ಬಂಗಾಳ ವಿಧಾನನಭೆ ಚುನಾವಣೆಗಾಗಿ ಪ್ರಚಾರ ನಡೆಸದಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಚುನಾವಣಾ ಆಯೋಗ 24ತಾಸು ನಿರ್ಬಂಧ ಹೇರಿತ್ತು. ಚುನಾವಣಾ ಆಯೋಗದ ಈ ನಿರ್ಧಾರವನ್ನು ಪ್ರಶ್ನಿಸಿ ಮಮತಾ ಬ್ಯಾನರ್ಜಿ ಇಂದು ಧರಣಿ ಕುಳಿತಿದ್ದಾರೆ. ಕೊಲ್ಕತ್ತದ ಮಯೊ ರಸ್ತೆಗೆ ಬೆಳಗ್ಗೆ 11.40ಕ್ಕೆ ಗಾಲಿ ಕುರ್ಚಿಯಲ್ಲಿಯೇ ಬಂದ ಮಮತಾ ಅಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಧರಣಿ ಆರಂಭಿಸಿದ್ದಾರೆ. ಅವರ ಜತೆ ಟಿಎಂಸಿಯ ಯಾವುದೇ ನಾಯಕರು ಇಲ್ಲ.  ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ಹೋಗಲು ಪಕ್ಷದ ನಾಯಕರಿಗೆ ಅನುಮತಿ ನೀಡಲಾಗಿಲ್ಲ. ಮಮತಾ ಒಬ್ಬರೇ ಅಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಟಿಎಂಸಿ ಪಕ್ಷದ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

ಮುಸ್ಲಿಂ ಮತಗಳ ಬಗ್ಗೆ ಮತ್ತು ಕೇಂದ್ರೀಯ ಭದ್ರತಾ ಪಡೆಗಳ ವಿರುದ್ಧ ಮಮತಾ ಬ್ಯಾನರ್ಜಿಯವರ ಪ್ರಚೋದನಾಕಾರಿ ಹೇಳಿಕೆಗಳನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿ, ಅವರನ್ನು ಚುನಾವಣಾ ಪ್ರಚಾರದಿಂದ ನಿರ್ಬಂಧಿಸುವ ಆದೇಶವನ್ನು ಸೋಮವಾರ ಹೊರಡಿಸಿತ್ತು.  ಚುನಾವಣಾ ಆಯೋಗದ ಈ ಆದೇಶದ ಪ್ರಕಾರ ಏಪ್ರಿಲ್ 12 ರಾತ್ರಿ 8 ಗಂಟೆಯಿಂದ ಏಪ್ರಿಲ್ 13 ರಾತ್ರಿ 8 ಗಂಟೆಯವರೆಗೆ ಮಮತಾ ಬ್ಯಾನರ್ಜಿ ಚುನಾವಣಾ ಪ್ರಚಾರ ನಡೆಸುವಂತಿಲ್ಲ. ಇದು ನಿರ್ಗಮಿಸುತ್ತಿರುವ ಚುನಾವಣಾ ಆಯುಕ್ತ ಸುನಿಲ್ ಅರೋರಾ ಅವರ ಕೊನೆಯ ಆದೇಶವಾಗಿದೆ.

ಕೂಚ್ ಬೆಹಾರ್​ನ ಸುತ್ತುಮುತ್ತಲಿನಹಲವಾರು ಪ್ರದೇಶಗಳು ಬಾಂಗ್ಲಾದೇಶಕ್ಕೆ ಸೇರಿದ್ದು ಎಂದು ನೆನಪಿರಲಿ. ಅಲ್ಲಿಂದ ಹೊರಗಿನವರು ಒಳಗೆ ಬಂದು ಗಲಭ ಸೃಷ್ಟಿಸದಂತೆ ಗಡಿ ಪ್ರದೇಶಗಳನ್ನು ಮುಚ್ಚಬೇಕು. ಒಂದು ವೇಳೆ ಕೇಂದ್ರಿಯ ಸಶಸ್ತ್ರ ಪೊಲೀಸ್ ಪಡೆ ತಡೆದರೆ, ನೀವು ಮಹಿಳೆಯರು ಗುಂಪಾಗಿ ಹೋಗಿ ಮುತ್ತಿಗೆ ಹಾಕಿ. ಇನ್ನೊಂದು ಗುಂಪು ಹೋಗಿ ಮತ ಹಾಕಿ. ನಿಮ್ಮ ಮತಗಳನ್ನು ವ್ಯರ್ಥ ಮಾಡಬೇಡಿ. ನೀವು ಸಂಯಮ ಪಾಲಿಸುತ್ತಲೇ ಇದ್ದರೆ ನೀವು ಮತ ಹಾಕಿಲ್ಲ ಎಂದು ಅವರು ಖುಷಿಯಾಗುತ್ತಾರೆ. ಅದು ಅವರ ಸಂಚು. ಇದು ಬಿಜೆಪಿಯ ಯೋಜನೆ ಎಂದು ಚುನಾವಣಾ ಪ್ರಚಾರದಲ್ಲಿ ಮಮತಾ ಹೇಳಿದ್ದರು.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರಿಗೆ ಕಳೆದ ವಾರ ಚುನಾವಣಾ ಆಯೋಗವು ಎರಡು ನೊಟೀಸ್​ಗಳನ್ನು ಜಾರಿ ಮಾಡಿತ್ತು. ಈ ನೊಟೀಸ್​ಗಳಿಗೆ ಮಮತಾ ನೀಡಿದ್ದ ವಿವರಣೆಗಳು ಆಯೋಗಕ್ಕೆ ತೃಪ್ತಿ ನೀಡಿರಲಿಲ್ಲ.

ಕೂಚ್​ಬೆಹಾರ್​ನಲ್ಲಿ ಮಮತಾ ಬ್ಯಾನರ್ಜಿ ಕೇಂದ್ರ ಮೀಸಲು ಪಡೆಗಳ ಬಗ್ಗೆ ತೀವ್ರ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದರು ಎಂದು ಚುನಾವಣಾ ಆಯೋಗ ಹೇಳಿತ್ತು. ಏಪ್ರಿಲ್ 3ರಂದು ಹೂಗ್ಲಿ ಜಿಲ್ಲೆಯಲ್ಲಿ ಪ್ರಚಾರ ನಡೆಸುವ ವೇಳೆ ‘ನನ್ನ ಅಲ್ಪಸಂಖ್ಯಾತ ಸೋದರ-ಸೋದರಿಯರಿಗೆ ಕೈಮುಗಿದು ಕೇಳಿಕೊಳ್ಳುತ್ತಿದ್ದೇನೆ. ದೆವ್ವದ ಮಾತು ಕೇಳಿ ಮತವನ್ನು ಚಲಾಯಿಸಬೇಡಿ. ಬಿಜೆಪಿಯಿಂದ ಹಣ ಪಡೆದು ಬೇಕಾಬಿಟ್ಟಿಯಾಗಿ ಹೇಳಿಕೆ ನೀಡಿ ಹಿಂದೂ-ಮುಸ್ಲಿಮರ ನಡುವೆ ಸಂಘರ್ಷ ತಂದಿಡುತ್ತಾರೆ. ಬಿಜೆಪಿ ಮತ್ತು ಸಿಪಿಎಂ ಕಾರ್ಯಕರ್ತರು ಬಿಜೆಪಿಯಿಂದ ಹಣ ಪಡೆದು ಅಲ್ಪಸಂಖ್ಯಾತರ ಮತ ಒಡೆಯಲು ಯತ್ನಿಸುತ್ತಾರೆ’ ಎಂದು ಅರೋಪಿಸಿದ್ದರು.

ಈ ಕುರಿತು ನೀಡಿದ್ದ ನೋಟಿಸ್​ಗೆ ಪ್ರತಿಕ್ರಿಯಿಸಿದ್ದ ಮಮತಾ, ‘ನೀವು ನನಗೆ 10 ಶೋಕಾಸ್ ನೋಟಿಸ್ ಕೊಡಬಹುದು. ನನ್ನ ಉತ್ತರ ಒಂದೇ ಆಗಿರುತ್ತೆ. ನಾನು ಹಿಂದೂ-ಮುಸ್ಲಿ ಮತಗಳ ಧ್ರುವೀಕರಣವನ್ನು ವಿರೋಧಿಸುತ್ತೇನೆ. ಧರ್ಮದ ಆಧಾರದಲ್ಲಿ ಮತ ವಿಭಜನೆಗೆ ನನ್ನ ಸಹಮತವಿಲ್ಲ’ ಎಂದು ಹೇಳಿದ್ದರು.

ಇನ್ನೊಂದು ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ನಾಯಕ ರಾಹುಲ್ ಸಿನ್ಹಾ ಅವರಿಗೆ ಚುನಾವಣಾ ಆಯೋಗ ಚುನಾವಣಾ ಪ್ರಚಾರ ನಡೆಸದಂತೆ 48 ಗಂಟೆಗಳ ನಿರ್ಬಂಧ ವಿಧಿಸಿದೆ. ಕೂಚ್ ಬೆಹಾರ್ ಹಿಂಸಾಚಾರ ಬಗ್ಗೆ ಹೇಳಿಕೆ ನೀಡಿದ್ದರ ಹಿನ್ನೆಲೆಯಲ್ಲಿ ಮಂಗಳವಾರ ಮಧ್ಯಾಹ್ನ 12 ಗಂಟೆಯಿಂದ ಏಪ್ರಿಲ್ 15ರ ವರೆಗೆ ರಾಹುಲ್ ಅವರಿಗೆ ನಿರ್ಬಂಧ ವಿಧಿಸಲಾಗಿದೆ.

ಇದನ್ನೂ ಓದಿ: West Bengal Elections 2021: ಟಿಎಂಸಿ ಪಕ್ಷ ಎನ್ಆರ್​ಸಿ ಬಗ್ಗೆ ಸುಳ್ಳು ಹಬ್ಬಿಸುತ್ತಿದೆ: ಗೃಹ ಸಚಿವ ಅಮಿತ್ ಶಾ

West Bengal Elections 2021: ಯೋಧರನ್ನು ಅವಮಾನಿಸಬೇಡಿ: ಮಮತಾ ಬ್ಯಾನರ್ಜಿ ವಿರುದ್ಧ ಗುಡುಗಿದ ನರೇಂದ್ರ ಮೋದಿ

(West Bengal Chief Minister Mamata Banerjee sat on a dharna in Kolkata against EC ban on campaigning for 24 hours)

ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ