ದೇಶದಲ್ಲಿ ಕೊರೊನಾ ಸೋಂಕಿತರಿಗೆ ನೀಡುತ್ತಿರುವ ರೆಮ್ಡೆಸಿವಿರ್ ಔಷಧದ ಅಭಾವ ಉಂಟಾಗಿದೆ ಎಂದು ಹೇಳಲಾಗುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ರೆಮ್ಡೆಸಿವಿರ್ ಇಂಜೆಕ್ಷನ್ ಮತ್ತು ಅದರ ಎಪಿಐ/ಕೆಎಸ್ಎಂ ಮೇಲಿನ ಕಸ್ಟಮ್ಸ್ ಸುಂಕವನ್ನು ಮನ್ನಾ ಮಾಡಿದೆ. ಈ ಬಗ್ಗೆ ಕೇಂದ್ರ ಸಚಿವ ಡಿ.ಎಸ್. ಸದಾನಂದ ಗೌಡ ಟ್ವೀಟ್ ಮಾಡಿ ತಿಳಿಸಿದ್ದಾರೆ.
ರೆಮ್ಡೆಸಿವಿರ್ ಔಷಧಿಯ ತುರ್ತು ಅಗತ್ಯತೆಯನ್ನು ಪರಿಗಣಿಸಿ, ಔಷಧೀಯ ಇಲಾಖೆಯ ಶಿಫಾರಸಿನ ಮೇರೆಗೆ ರೆಮ್ಡೆಸಿವಿರ್ ಮೇಲಿನ ಕಸ್ಟಮ್ಸ್ ಸುಂಕವನ್ನು, ಕಂದಾಯ ಇಲಾಖೆ ಮನ್ನಾ ಮಾಡಿದೆ. ಹೀಗೆ ಮಾಡುವುದರಿಂದ ದೇಶೀಯವಾಗಿ ರೆಮ್ಡೆಸಿವಿರ್ ಇಂಜಕ್ಷನ್ ಉತ್ಪಾದನೆ ಹೆಚ್ಚುತ್ತದೆ ಎಂದು ಸದಾನಂದ ಗೌಡ ಅವರು ಟ್ವೀಟ್ ಮಾಡಿದ್ದಾರೆ.
ಇತ್ತೀಚೆಗೆ ದೇಶದಲ್ಲಿ ಆಕ್ಸಿಜನ್, ವ್ಯಾಕ್ಸಿನ್, ರೆಮ್ಡೆಸಿವರ್ ಸೇರಿ ಕೊರೊನಾ ರೋಗಿಗಳಿಗೆ ಅಗತ್ಯವಿರುವ ಬಹುತೇಕ ವ್ಯವಸ್ಥೆಗಳ ಅಭಾವ ಎದುರಾಗಿದೆ. ಕೊರೊನಾ ಶುರುವಾದಾಗಿನಿಂದಲೂ ರೋಗಿಗಳಿಗೆ ರೆಮ್ಡೆಸಿವರ್ ಇಂಜಕ್ಷನ್ ಕೊಡಲಾಗುತ್ತಿದೆ. ಇದರ ಕೊರತೆ ಎದುರಾಗಿದ್ದರಿಂದ ಆಮದು ಮಾಡಿಕೊಳ್ಳುವ ಅನಿವಾರ್ಯತೆ ಇದೆ. ಇದೀಗ ಈ ಆಮದು ಸುಂಕವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಿದ್ದರಿಂದ ದೇಶೀಯ ಔಷಧೀಯ ಕಂಪನಿಗಳಿಗೆ ಹೊರೆ ಕಡಿಮೆಯಾಗಲಿದೆ.
Considering the immediate requirement on the recommendation of the Department of Pharmaceuticals, the Department of Revenue has waived customs duty on #Remdesivir and its API/KSM. This step will further augment domestic availability of Remdesivir injection.
@PIB_India pic.twitter.com/Pk5t2OfCuY
— Sadananda Gowda (@DVSadanandGowda) April 21, 2021
ಇದನ್ನೂ ಓದಿ: ಸೋಂಕಿತ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿದ ವೈದ್ಯಕೀಯ ಕಾಲೇಜು; ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದ ಎಲ್ಲರಿಗೂ ಕೊರೊನಾ ಆತಂಕ
ನಾಲ್ಕು ದಶಕದಿಂದ ಚಿತ್ರರಂಗದಲ್ಲಿ ಡಿಸೈನರ್ ಆಗಿದ್ದ ಮಸ್ತಾನ್ ಕೊರೊನಾ ಸೋಂಕಿಗೆ ಬಲಿ
LPG Cylinder Price: ಕೇವಲ 9 ರೂಪಾಯಿಗೆ ಸಿಲಿಂಡರ್ ಪಡೆಯಬಹುದೇ? 800 ರೂ. ರಿಯಾಯಿತಿ ಇದೆಯೇ?