Sign In

By signing in or creating an account, you agree with Associated Broadcasting Company's Terms & Conditions and Privacy Policy.

LPG Cylinder Price: ಕೇವಲ 9 ರೂಪಾಯಿಗೆ ಸಿಲಿಂಡರ್​ ಪಡೆಯಬಹುದೇ? 800 ರೂ. ರಿಯಾಯಿತಿ ಇದೆಯೇ?

Paytm Cashback on Gas Cylinder Bookings: ಎಲ್​ಪಿಜಿ ಸಿಲಿಂಡರ್​ ಗ್ಯಾಸ್​ ಬುಕಿಂಗ್​ ಮತ್ತು ಪಾವತಿಗಾಗಿ ಪೇಟಿಎಂ ತನ್ನ ಬಳಕೆದಾರಿಗಾಗಿ ಕೊಡುಗೆಯೊಂದನ್ನು ನೀಡಲು ಮುಂದಾಗಿದೆ. ಪೇಟಿಎಂ ಕ್ಯಾಶ್​ಬ್ಯಾಕ್ ಅಡಿಯಲ್ಲಿ ಸಿಲಿಂಡರ್​ ಖರೀದಿದಾರರು ಬುಕ್​ ಮಾಡಿದರೆ ಅವರು 800 ರೂಪಾಯಿಗಳವರೆಗಿನ ಕ್ಯಾಶ್​ಬ್ಯಾಕ್​ ಪಡೆಯಬಹುದು.

LPG Cylinder Price: ಕೇವಲ 9 ರೂಪಾಯಿಗೆ ಸಿಲಿಂಡರ್​ ಪಡೆಯಬಹುದೇ? 800 ರೂ. ರಿಯಾಯಿತಿ ಇದೆಯೇ?
ಸಾಂದರ್ಭಿಕ ಚಿತ್ರ
Follow us
shruti hegde
| Updated By: Skanda

Updated on:Apr 21, 2021 | 12:17 PM

ಬೆಂಗಳೂರು: ಎಲ್​ಪಿಜಿ (LPG) ಗ್ಯಾಸ್​ ಸಿಲೆಂಡರ್​ ಬೆಲೆ ಸದ್ಯ ಗಗನಮುಖಿಯಾಗಿದೆ. ಬಡ ಮತ್ತು ಮಧ್ಯಮ ವರ್ಗದವರಿಗೆ ಎಲ್​ಪಿಜಿ, ಪೆಟ್ರೋಲ್, ಡೀಸೆಲ್ ಎಲ್ಲವೂ ಹೊರೆಯಾಗುತ್ತಿದೆ. ಇಂತಹ ದುಬಾರಿ ದುನಿಯಾದಲ್ಲಿ ಗ್ರಾಹಕರಿಗೆ ಕೇವಲ 9 ರೂಪಾಯಿಗೆ LPG ನೀಡಲು ಪೇಟಿಎಂ (Paytm) ಅವಕಾಶ ನೀಡುತ್ತಿದೆ. ಪ್ರಸ್ತುತ ಸಬ್ಸಿಡಿ ಇಲ್ಲದ 14.2 ಕೆಜಿ ಸಿಲಿಂಡರ್​ ಖರೀದಿಸಬೇಕಾದರೆ 809 ರೂಪಾಯಿ ಪಾವತಿಸಬೇಕಾಗುತ್ತದೆ. ಆದರೆ, ಪೇಟಿಎಂ ಮಾತ್ರ ಕೇವಲ 9 ರೂಪಾಯಿಗೆ ಸಿಲಿಂಡರ್​ ಪಡೆಯಬಹುದು ಎಂಬ ಬಂಪರ್ ಆಫರ್ ಘೋಷಿಸಿದೆ. ಈ ಆಫರ್​ ಪೇಟಿಎಂ ಬಳಕೆದಾರರಿಗಾಗಿ ಲಭ್ಯವಿದ್ದು, ಬಳಕೆದಾರರು ತಕ್ಷಣವೇ ಚೆಕ್​ ಮಾಡಿ, ಸಿಲಿಂಡರ್​ ಬುಕ್​ ಮಾಡಿ ಲಾಭ ಪಡೆದುಕೊಳ್ಳಬಹುದಾಗಿದೆ.

ಎಲ್​ಪಿಜಿ ಸಿಲಿಂಡರ್​ ಗ್ಯಾಸ್​ ಬುಕಿಂಗ್​ ಮತ್ತು ಪಾವತಿಗಾಗಿ ಪೇಟಿಎಂ ತನ್ನ ಬಳಕೆದಾರಿಗಾಗಿ ಈ ಕೊಡುಗೆ ನೀಡಲು ಮುಂದಾಗಿದೆ. ಪೇಟಿಎಂ ಕ್ಯಾಶ್​ಬ್ಯಾಕ್ ಅಡಿಯಲ್ಲಿ ಖರೀದಿದಾರರು ಸಿಲಿಂಡರ್​ ಬುಕ್​ ಮಾಡಿದರೆ ಅವರು 800 ರೂಪಾಯಿಗಳವರೆಗಿನ ಕ್ಯಾಶ್​ಬ್ಯಾಕ್​ ಪಡೆಯಬಹುದು ಎಂಬ ಮಾಹಿತಿ ತಿಳಿದು ಬಂದಿದೆ. ಆದರೆ, ಕ್ಯಾಶ್​ಬ್ಯಾಕ್​ ಅದೃಷ್ಟವಂತರಿಗೆ ಮಾತ್ರ ಸಿಗುವುದರಿಂದ ಗ್ರಾಹಕರು ಎಚ್ಚರಿಕೆಯಿಂದ ಬುಕಿಂಗ್​ ಮಾಡಬೇಕಿದೆ.

ಹೇಗೆ ಬುಕ್​ ಮಾಡಬೇಕು? ನೀವು ಪೇಟಿಎಂ ಬಳಕೆದಾರರಾಗಿರದಿದ್ದಲ್ಲಿ ಮೊದಲು ಪೇಟಿಎಂ ಡೌನ್​ಲೋಡ್ ಮಾಡಿ. ನಂತರ ಅದರಲ್ಲಿ ಕಾಣಿಸುವ Show more ಆಪ್ಷನ್​ ಕ್ಲಿಕ್ ಮಾಡಿ. ಅದರಲ್ಲಿ ರೀಚಾರ್ಜ್​ & ಬಿಲ್​ ಎಂಬ ಆಯ್ಕೆ ಕಾಣಲಿದ್ದು ಅದರ ಮೇಲೆ ಮತ್ತೆ ಕ್ಲಿಕ್​ ಮಾಡಿ. ಈಗ ನಿಮಗೆ ಸಿಲಿಂಡರ್​ ಬುಕ್​ ಮಾಡುವ ಆಯ್ಕೆ ಕಾಣಿಸಲಿದೆ. ಅದರಲ್ಲಿ ನೀವು ಯಾವ ಸಂಸ್ಥೆಯ ಸಿಲಿಂಡರ್​ ಬಳಸುತ್ತಿದ್ದೀರಿ ಎಂಬುದನ್ನು ಪರಿಶೀಲಿಸಿ, ಬುಕ್​ ಮಾಡಿ. ನಂತರದ ಹಂತದಲ್ಲಿ ಪ್ರೊಮೋ ಕೋಡ್​ ಹಾಕಲು ಅವಕಾಶವಿದ್ದು ತಪ್ಪದೇ FIRSTLPG ಎಂಬ ಕೋಡ್​ ಬಳಸಿ.

ಕ್ಯಾಶ್​ಬ್ಯಾಕ್​ ಹೇಗೆ ಸಿಗಲಿದೆ? ಇದರಲ್ಲಿ ಬುಕ್ ಮಡಿದ ತಕ್ಷಣ ಸ್ಕ್ರಾಚ್​​ ಕಾರ್ಡ್​ ನಿಮ್ಮದಾಗುತ್ತದೆ. ಸ್ಕ್ರಾಚ್​ ಕಾರ್ಡ್​ನಲ್ಲಿ ಇದ್ದಷ್ಟು ಹಣ ಕ್ಯಾಶ್​​ಬ್ಯಾಕ್​ ಆಗುತ್ತದೆ. ಈ ಸ್ಕ್ರಾಚ್​ಕಾರ್ಡ್​ ಏಪ್ರಿಲ್ 30ರವರೆಗೆ ಮಾತ್ರ  ವ್ಯಾಲಿಡಿಟಿ ಹೊಂದಿರುತ್ತದೆ .

ಕ್ಯಾಶ್​ಬ್ಯಾಕ್​ ಅವಧಿ ಎಲ್ಲಿಯವರೆಗೆ ಇರಲಿದೆ? ಈ ಕ್ಯಾಶ್​ಬ್ಯಾಕ್​ ಆಫರ್ ಏಪ್ರಿಲ್​ 30ರವರೆಗೆ ​​ಲಭ್ಯವಿರುತ್ತದೆ. ಈ ಅವಕಾಶ ಮೊದಲ ಬಾರಿಗೆ ಪೇಟಿಎಂ ಮೂಲಕ ಸಿಲಿಂಡರ್ ಬುಕ್ ಮಾಡುವವರಿಗೆ​​ ಮಾತ್ರ ಸಿಗುತ್ತದೆ.

ಇದನ್ನೂ ಓದಿ: How to book gas cylinder: ವಾಟ್ಸಾಪ್ ಮೂಲಕ ಇಂಡೇನ್, ಎಚ್​ಪಿ, ಭಾರತ್ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಹೇಗೆ?

Published On - 12:17 pm, Wed, 21 April 21

ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ