Farmers Protest: ‘ಟ್ರ್ಯಾಕ್ಟರ್​​ಗಳೊಂದಿಗೆ ಸಿದ್ಧರಾಗಿ’- ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಕರೆಕೊಟ್ಟ ರಾಕೇಶ್ ಟಿಕಾಯತ್​

ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಯನ್ನು ತೀವ್ರಗೊಳಿಸಲು ಮುಂದಾಗಿರುವ ಸಂಯುಕ್ತ ಕಿಸಾನ್​ ಮೋರ್ಚಾ ಜೂನ್​ 30ರಂದು ದೆಹಲಿಯ ಎಲ್ಲ ಗಡಿಗಳಲ್ಲೂ ಹೂಲ್​ ಕ್ರಾಂತಿ ದಿವಸ್​ ಆಚರಿಸಲು ನಿರ್ಧರಿಸಿದೆ.

Farmers Protest: ‘ಟ್ರ್ಯಾಕ್ಟರ್​​ಗಳೊಂದಿಗೆ ಸಿದ್ಧರಾಗಿ’- ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಕರೆಕೊಟ್ಟ ರಾಕೇಶ್ ಟಿಕಾಯತ್​
ರಾಕೇಶ್ ಟಿಕಾಯತ್
Edited By:

Updated on: Jun 21, 2021 | 11:48 AM

ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯ ಗಡಿಗಳಲ್ಲಿ ರೈತರು ಆಂದೋಲನ ನಡೆಸಲು ಶುರು ಮಾಡಿ ಏಳು ತಿಂಗಳುಗಳೇ ಕಳೆದಿವೆ. ನಾವು ಇಷ್ಟು ಪ್ರತಿಭಟನೆ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ನಮ್ಮ ಬಗ್ಗೆ ಗಮನಕೊಡುತ್ತಿಲ್ಲ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು ಭಾರತೀಯ ಕಿಸಾನ್​ ಯೂನಿಯನ್​ (ಬಿಕೆಯು) ಮುಖಂಡ ರಾಕೇಶ್​ ಟಿಕಾಯತ್​​ ಟ್ವೀಟ್ ಮಾಡಿ, ಪ್ರತಿಭಟನಾ ನಿರತ ರೈತರು ಮತ್ತೊಮ್ಮೆ ಟ್ರ್ಯಾಕ್ಟರ್​ಗಳ ಜತೆ ಸಿದ್ಧವಾಗಿರಿ ಎಂದು ಸಂದೇಶ ನೀಡಿದ್ದಾರೆ.

ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಯನ್ನು ತೀವ್ರಗೊಳಿಸಲು ಮುಂದಾಗಿರುವ ಸಂಯುಕ್ತ ಕಿಸಾನ್​ ಮೋರ್ಚಾ ಜೂನ್​ 30ರಂದು ದೆಹಲಿಯ ಎಲ್ಲ ಗಡಿಗಳಲ್ಲೂ ಹೂಲ್​ ಕ್ರಾಂತಿ ದಿವಸ್​ ಆಚರಿಸಲು ನಿರ್ಧರಿಸಿದೆ. ಹಾಗೇ, ತಮ್ಮ ಪ್ರತಿಭಟನೆಯನ್ನು ಸುತ್ತಲಿನ ಹಳ್ಳಿಯ ಜನರ ಸಹಾಯದಿಂದ ತಡೆಯಲು ಹುನ್ನಾರ ನಡೆಯುತ್ತಿದೆ ಎಂದೂ ಆರೋಪಿಸಿದ್ದಾರೆ. ಜೂ.30ರಂದು ಹೂಲ್​ ಕ್ರಾಮತಿ ದಿವಸ್​ ಆಚರಿಸಲಿದ್ದು, ಬುಡಕಟ್ಟು ಪ್ರದೇಶದ ನಿವಾಸಿಗಳನ್ನೂ ನಮ್ಮ ಧರಣಿಗೆ ಆಹ್ವಾನಿಸಲಾಗಿದೆ ಎಂದು ಸಂಘಟನೆ ತಿಳಿಸಿದೆ.

ಸುಕ್ಮಾ ಮತ್ತು ಬಿಜಾಪುರ ಜಿಲ್ಲೆಗಳ ಗಡಿಯಲ್ಲಿರುವ ಸೇಲಾಗರ್​​ ಬುಡಕಟ್ಟು ಗ್ರಾಮದಲ್ಲಿ ಸಿಆರ್​ಪಿಎಫ್​ ಶಿಬಿರ ನಿರ್ಮಿಸುವ ಸರ್ಕಾರದ ನಿರ್ಧಾರದ ವಿರುದ್ಧ ಇಲ್ಲಿನ ಜನರು ತಿರುಗಿಬಿದ್ದಿದ್ದಾರೆ. ಸಿಆರ್​ಪಿಎಫ್​ ಕ್ಯಾಂಪ್ ನಿರ್ಮಿಸಲು ಇಲ್ಲಿನ ಭೂಮಿಯನ್ನು ತೆಗೆದುಕೊಳ್ಳುವಾಗ ಗ್ರಾಮಸಭೆಗೆ ಹೇಳಬೇಕು. ಆದರೆ ಯಾವುದೇ ಮಾಹಿತಿ ನೀಡದೆ ಭೂಮಿ ವಶಕ್ಕೆ ಪಡೆಯಲಾಗಿದೆ. ಸರ್ಕಾರದ ವಿರುದ್ಧ ತಿರುಗಿಬಿದ್ದಿರುವ ಸೇಲಾಗರ್​ ಗ್ರಾಮದ ಜನರಿಗೆ ನಾವು ಬೆಂಬಲ ನೀಡುತ್ತೇವೆ ಎಂದು ಎಸ್​ಕೆಎಂ ಹೇಳಿಕೊಂಡಿದೆ. ಇದರೊಂದಿಗೆ ಬಿಜೆಪಿ ಹಾಗೂ ಜನನಾಯಕ್​ ಜನತಾ ಪಕ್ಷದ ನಾಯಕರ ವಿರುದ್ಧ ಹರ್ಯಾಣದಲ್ಲಿ ಮೌನ ಪ್ರತಿಭಟನೆ ಮುಂದುವರಿಸುತ್ತೇವೆ ಎಂದೂ ತಿಳಿಸಿದೆ.

ಇದನ್ನೂ ಓದಿ: ಬಸ್ ಸಂಚಾರಕ್ಕೆ ಗ್ರೀನ್ ಸಿಗ್ನಲ್ ಸಿಕ್ರೂ, ಪ್ರಯಾಣಿಕರಿಗೆ ಸಿಗುತ್ತಿಲ್ಲ ಸೇವೆ.. ಆದಷ್ಟು ಬೇಗ ಸಮಸ್ಯೆ ಬಗೆಹರಿಸುತ್ತೇವೆ ಎಂದ ಸಚಿವ ಲಕ್ಷ್ಮಣ ಸವದಿ