23 ವರ್ಷದಿಂದ ವಾಸವಿದ್ದ ಬಂಗಲೆ ತೊರೆಯುವ ಮುನ್ನ, ಬಲೂನಿಗೆ ಟೀ ಪಾರ್ಟಿ ಕೊಟ್ಟ ಪ್ರಿಯಾಂಕಾ

| Updated By:

Updated on: Jul 27, 2020 | 9:33 PM

ದೆಹಲಿ: ಪ್ರಿಯಾಂಕಾ ಗಾಂಧಿ ಜುಲೈ 31ರೊಳಗೆ ದೆಹಲಿಯ ಲೋಧಿ ಎಸ್ಟೇಟ್​ನಲ್ಲಿರುವ ಸರ್ಕಾರಿ ಬಂಗಲೆ ತೊರೆಯಲಿದ್ದಾರೆ. ಹೀಗಾಗಿ ಈಗಾಗಲೇ ಮನೆಯ ವಸ್ತುಗಳನ್ನು ಗುರುಗ್ರಾಮದ ಫ್ಲ್ಯಾಟ್​ಗೆ ಶಿಫ್ಟ್ ಮಾಡಿದ್ದಾರೆ. ಪ್ರಿಯಾಂಕಾ ಗಾಂಧಿ ವಾಸಿಸುತ್ತಿದ್ದದ ಬಂಗಲೆಯನ್ನು ಪಾರ್ಲಿಮೆಂಟಿನ ಹೌಸಿಂಗ್ ಕಮಿಟಿಯಿಂದ ನಂ.35ನೇ ಬಂಗಲೆ ಬಿಜೆಪಿಯ ಅನಿಲ್ ಬಲೂನಿಗೆ ಹಂಚಿಕೆಯಾಗಿದೆ. ಹೊಸದಾಗಿ ಮನೆಗೆ ಬರುವ ಅನಿಲ್ ಬಲೂನಿ ಮತ್ತು ಅವರ ಪತ್ನಿಯನ್ನ ಪ್ರಿಯಾಂಕಾ ಗಾಂಧಿ ಮನೆಗೆ ಚಹಾ ಸೇವನೆಗೆ ಆಹ್ವಾನಿಸಿದ್ದಾರೆ. ಪ್ರಿಯಾಂಕಾ ಗಾಂಧಿಯವರು 1997ರಿಂದ ದೆಹಲಿಯ ನಂ.35ನೇ ಲೋಧಿ ಎಸ್ಟೇಟ್​ನಲ್ಲಿರುವ ಸರ್ಕಾರಿ ಬಂಗಲೆಯಲ್ಲಿ […]

23 ವರ್ಷದಿಂದ ವಾಸವಿದ್ದ ಬಂಗಲೆ ತೊರೆಯುವ ಮುನ್ನ, ಬಲೂನಿಗೆ ಟೀ ಪಾರ್ಟಿ ಕೊಟ್ಟ ಪ್ರಿಯಾಂಕಾ
Follow us on

ದೆಹಲಿ: ಪ್ರಿಯಾಂಕಾ ಗಾಂಧಿ ಜುಲೈ 31ರೊಳಗೆ ದೆಹಲಿಯ ಲೋಧಿ ಎಸ್ಟೇಟ್​ನಲ್ಲಿರುವ ಸರ್ಕಾರಿ ಬಂಗಲೆ ತೊರೆಯಲಿದ್ದಾರೆ. ಹೀಗಾಗಿ ಈಗಾಗಲೇ ಮನೆಯ ವಸ್ತುಗಳನ್ನು ಗುರುಗ್ರಾಮದ ಫ್ಲ್ಯಾಟ್​ಗೆ ಶಿಫ್ಟ್ ಮಾಡಿದ್ದಾರೆ.

ಪ್ರಿಯಾಂಕಾ ಗಾಂಧಿ ವಾಸಿಸುತ್ತಿದ್ದದ ಬಂಗಲೆಯನ್ನು ಪಾರ್ಲಿಮೆಂಟಿನ ಹೌಸಿಂಗ್ ಕಮಿಟಿಯಿಂದ ನಂ.35ನೇ ಬಂಗಲೆ ಬಿಜೆಪಿಯ ಅನಿಲ್ ಬಲೂನಿಗೆ ಹಂಚಿಕೆಯಾಗಿದೆ. ಹೊಸದಾಗಿ ಮನೆಗೆ ಬರುವ ಅನಿಲ್ ಬಲೂನಿ ಮತ್ತು ಅವರ ಪತ್ನಿಯನ್ನ ಪ್ರಿಯಾಂಕಾ ಗಾಂಧಿ ಮನೆಗೆ ಚಹಾ ಸೇವನೆಗೆ ಆಹ್ವಾನಿಸಿದ್ದಾರೆ.

ಪ್ರಿಯಾಂಕಾ ಗಾಂಧಿಯವರು 1997ರಿಂದ ದೆಹಲಿಯ ನಂ.35ನೇ ಲೋಧಿ ಎಸ್ಟೇಟ್​ನಲ್ಲಿರುವ ಸರ್ಕಾರಿ ಬಂಗಲೆಯಲ್ಲಿ ವಾಸವಾಗಿದ್ದರು. ಅವರ ವಿಶೇಷ ರಕ್ಷಣಾ ಗುಂಪು(SPG) ಭದ್ರತೆಯನ್ನು ಗೃಹ ಸಚಿವಾಲಯ ವಾಪಸ್ ಪಡೆದ ನಂತರ ಸರ್ಕಾರಿ ಬಂಗಲೆ ಖಾಲಿ ಮಾಡುವಂತೆ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನೊಟೀಸ್ ಜಾರಿ ಮಾಡಿತ್ತು. ಹೀಗಾಗಿ ಪ್ರಿಯಾಂಕಾ ಗಾಂಧಿ ಬಂಗಲೆ ಖಾಲಿ ಮಾಡುತ್ತಿದ್ದಾರೆ.

Published On - 10:35 am, Mon, 27 July 20