ಅದು ಹೇಗೆ ಸಾಧ್ಯ? ಕೇಜ್ರಿವಾಲ್ ಪಂಜಾಬ್​ನ ಮುಂದಿನ ಸಿಎಂ ಎಂದವರಿಗೆ ಭಗವಂತ್ ಮಾನ್ ಪ್ರಶ್ನೆ

ದೆಹಲಿ ಚುನಾವಣೆ ಮುಗಿದು ಫಲಿತಾಂಶ ಹೊರಬಿದ್ದಿದೆ, ಆಮ್ ಆದ್ಮಿ ಪಕ್ಷ ಸೋಲು ಅನುಭವಿಸಿದ್ದು, ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿದೆ. ಇದೆಲ್ಲಾ ಬೆಳವಣಿಗೆಗಳ ನಡುವೆ ಹೇಗೂ ಅರವಿಂದ್ ಕೇಜ್ರಿವಾಲ್ ಸೋತಿದ್ದಾರೆ, ಅಷ್ಟೇ ಅಲ್ಲದೆ ದೆಹಲಿಯಲ್ಲಿ ಭಗವಂತ್ ಮಾನ್ ಪ್ರಚಾರ ಮಾಡಿದ್ದ ಎಲ್ಲಾ ಕ್ಷೇತ್ರಗಳಲ್ಲೂ ಆಮ್ ಆದ್ಮಿ ಪಕ್ಷ ಸೋಲು ಅನುಭವಿಸಿದೆ ಹೀಗಾಗಿ ಪಂಜಾಬ್​ನಲ್ಲಿ ಭಗವಂತ್​ ಮಾನ್​ರನ್ನು ಅಧಿಕಾರದಿಂದ ಕೆಳಗಿಳಿಸಿ ಅರವಿಂದ್ ಕೇಜ್ರಿವಾಲ್ ಮುಖ್ಯಮಂತ್ರಿಯಾಗಲಿದ್ದಾರೆ ಎನ್ನುವ ಊಹಾಪೋಹ ಕೇಳಿಬಂದಿತ್ತು, ಇದಕ್ಕೆ ಭಗವಂತ್ ಮಾನ್ ಸ್ಪಷ್ಟನೆ ನೀಡಿದ್ದಾರೆ.

ಅದು ಹೇಗೆ ಸಾಧ್ಯ? ಕೇಜ್ರಿವಾಲ್ ಪಂಜಾಬ್​ನ ಮುಂದಿನ ಸಿಎಂ ಎಂದವರಿಗೆ ಭಗವಂತ್ ಮಾನ್ ಪ್ರಶ್ನೆ
ಅರವಿಂದ್ ಕೇಜ್ರಿವಾಲ್-ಮಾನ್
Image Credit source: Deccan Herald

Updated on: Feb 19, 2025 | 9:36 AM

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಸೋಲಿನ ನಂತರ, ಭಗವಂತ್ ಮಾನ್ ಅವರನ್ನು ಪದಚ್ಯುತಗೊಳಿಸುವ ಮೂಲಕ ಅರವಿಂದ್ ಕೇಜ್ರಿವಾಲ್ ಅವರೇ ಪಂಜಾಬ್ ಮುಖ್ಯಮಂತ್ರಿಯಾಗಬಹುದು ಎಂಬ ಊಹಾಪೋಹವಿತ್ತು. ಆದರೆ ಈಗ ಭಗವಂತ್ ಮಾನ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಅದು ಹೇಗೆ ಸಾಧ್ಯ?, ವಿರೋಧ ಪಕ್ಷಗಳು ತಮ್ಮ ಮನಸ್ಸಿಗೆ ಬಂದದ್ದನ್ನು ಹೇಳುತ್ತಿವೆ. ವಿರೋಧ ಪಕ್ಷಗಳು ಈಗಾಗಲೇ ಬಹಳಷ್ಟು ಹೇಳಿವೆ. ಅರವಿಂದ್ ಕೇಜ್ರಿವಾಲ್ ನಮ್ಮ ಪಕ್ಷದ ರಾಷ್ಟ್ರೀಯ ಸಂಚಾಲಕರು. ಅವರು ಒಂದು ರಾಷ್ಟ್ರೀಯ ಪಕ್ಷದ ನಾಯಕ. ದೇಶಾದ್ಯಂತ ಪಕ್ಷವನ್ನು ಒಟ್ಟಾಗಿ ನಡೆಸಬೇಕು. ಕೆಲವೊಮ್ಮೆ ಅವರು ಗುಜರಾತ್, ಕೆಲವೊಮ್ಮೆ ಛತ್ತೀಸ್‌ಗಢ ಮತ್ತು ಕೆಲವೊಮ್ಮೆ ಮಧ್ಯಪ್ರದೇಶವನ್ನು ನೋಡುತ್ತಿದ್ದಾರೆ. ಅಂತಹದ್ದೇನೂ ಇಲ್ಲ. ಸುಳ್ಳು ಹೇಳಲಾಗುತ್ತಿದೆ.

ಕೇಜ್ರಿವಾಲ್ ಅವರ ಕಣ್ಣುಗಳು ಈಗ ಪಂಜಾಬ್ ಮೇಲೆ ಬಿದ್ದಿವೆ ಎಂದು ಬಿಜೆಪಿ ಹೇಳಿಕೊಂಡಿತ್ತು. ಶಾಸಕರ ಮೂಲಕ ಒತ್ತಡ ಹೇರುವ ಮೂಲಕ ಕೇಜ್ರಿವಾಲ್ ಪಂಜಾಬ್ ಮುಖ್ಯಮಂತ್ರಿಯಾಗಲು ಬಯಸುತ್ತಾರೆ ಎಂದು ಪಕ್ಷ ಹೇಳಿಕೊಂಡಿತ್ತು.

ಮತ್ತಷ್ಟು ಓದಿ: ಪಂಜಾಬ್ ಸಿಎಂ ಭಗವಂತ್ ಮಾನ್ ಸಂಪುಟದ ಜತೆ ಅರವಿಂದ್ ಕೇಜ್ರಿವಾಲ್ ಸಭೆ

ದೆಹಲಿ ಚುನಾವಣೆಯಲ್ಲಿ ಸೋತ ನಂತರ ಅರವಿಂದ್ ಕೇಜ್ರಿವಾಲ್ ದೆಹಲಿಯಲ್ಲಿ ಪಂಜಾಬ್ ಶಾಸಕರ ಸಭೆ ಕರೆದಿದ್ದರು ಎಂದು ಬಿಜೆಪಿ ನಾಯಕ ಮಂಜಿಂದರ್ ಸಿಂಗ್ ಸಿರ್ಸಾ ಹೇಳಿದ್ದರು. ಕೇಜ್ರಿವಾಲ್ ಈಗ ಭಗವಂತ್ ಮಾನ್ ಅವರನ್ನು ಅಸಮರ್ಥ ಎಂದು ಕರೆದು ಅವರನ್ನು ತೆಗೆದುಹಾಕಲು ಬಯಸುತ್ತಿದ್ದಾರೆ.

ಆಮ್ ಆದ್ಮಿ ಪಕ್ಷವು ಭಗವಂತ್ ಮಾನ್ ಅವರನ್ನು ಪಂಜಾಬ್ ಮುಖ್ಯಮಂತ್ರಿ ಸ್ಥಾನದಿಂದ ತೆಗೆದುಹಾಕಲು ಬಯಸುತ್ತಿದೆ ಎಂದು ಬಿಜೆಪಿ ಮತ್ತು ಕಾಂಗ್ರೆಸ್‌ನ ಅನೇಕ ನಾಯಕರು ಹೇಳಿಕೊಳ್ಳುತ್ತಾರೆ. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರನ್ನು ಪದಚ್ಯುತಗೊಳಿಸಲು ಆಮ್ ಆದ್ಮಿ ಪಕ್ಷವು ವೇದಿಕೆ ಸಿದ್ಧಪಡಿಸುತ್ತಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ, ಕಾಂಗ್ರೆಸ್ ನಾಯಕ ಪ್ರತಾಪ್ ಸಿಂಗ್ ಬಜ್ವಾ ಹೇಳಿದ್ದಾರೆ.

ದೆಹಲಿಯಲ್ಲಿ ಇತ್ತೀಚೆಗೆ ಹೀನಾಯ ಸೋಲಿನ ನಂತರ, ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷವು ರಕ್ಷಣಾತ್ಮಕ ಸ್ಥಿತಿಯಲ್ಲಿದೆ ಎಂದು ತೋರುತ್ತದೆ ಎಂದು ಅವರು ಹೇಳಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ