ದೆಹಲಿ, ಅ.6: ವೈದ್ಯೋ ನಾರಾಯಣೋ ಹರಿಃ ಎಂಬ ಮಾತಿನಂತೆ ವೈದ್ಯರು ದೇವರ ಸಮಾನ, ಹೀಗೆಲ್ಲ ಅಂದುಕೊಂಡು ರೋಗಿಗಳು ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಬರುತ್ತಾರೆ. ಅಲ್ಲಿ ರೋಗಿಗಳಿಗೆ ವೈದ್ಯರು ಧೈರ್ಯ ಹೇಳಿ, ಚಿಕಿತ್ಸೆ ನೀಡಿತ್ತಾರೆ. ಆದರೆ ಅದಕ್ಕಿಂತಲ್ಲೂ ಮಿಗಿಲಾದ ಒಂದು ಶಕ್ತಿ ಇದೆ ಎಂಬುದು ವೈದ್ಯರಿಗೂ ಗೊತ್ತಾ? ಈ ಕಾರಣಕ್ಕೆ ಇಲ್ಲೊಂದು ಆಸ್ಪತ್ರೆಯ ಐಸಿಯುಗಳಲ್ಲಿ ಭಜನೆ ಮಾಡಲು ಅವಕಾಶ ನೀಡಿದೆ. ಒಡಿಶಾದ ಕಟಕ್‌ನಲ್ಲಿರುವ ಎಸ್‌ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯು ತನ್ನ ಎಲ್ಲಾ ತೀವ್ರ ನಿಗಾ ಘಟಕಗಳಲ್ಲಿ (ಐಸಿಯು) ಭಜನೆ ಮಾಡಲು ತಿಳಿಸಿದೆ.
ಇದು ರೋಗಿಗಳಿಗೆ ಮಾತ್ರವಲ್ಲ ವೈದ್ಯರಿಗೂ ಧನಾತ್ಮಕ ಪರಿಣಾಮವನ್ನು ಬೀರುತ್ತದೆ ಎಂದು ಎಸ್‌ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ಇದು ಒಂದು ರೀತಿಯಲ್ಲಿ ರೋಗಿಗಳಿಗೆ ಸಂಗೀತ ಚಿಕಿತ್ಸೆ ಹಾಗೂ ಸ್ವಾಂತನ ನೀಡುತ್ತದೆ ಎಂದು ಹೇಳಲಾಗಿದೆ. ರೋಗಿಗಳಿಗೆ ಸಂಗೀತ ಚಿಕಿತ್ಸೆ ಮತ್ತು ಸಾಂತ್ವನ ನೀಡಲು ICUಗಳಲ್ಲಿ ಭಜನೆ ಮಾಡಲು ಆಸ್ಪತ್ರೆ ಶಿಫಾರಸು ಮಾಡಿದೆ. ಇನ್ನು ಇಲ್ಲಿನ ವೈದ್ಯರು ಹೇಳಿರುವಂತೆ, ಇದು ರೋಗಿಗಳಿಗೆ “ಅತ್ಯಂತ ಪರಿಣಾಮಕಾರಿ” ಹಾಗೂ ನಮ್ಮ ವೈದ್ಯರಿಗೂ ಧೈರ್ಯ ನೀಡುತ್ತದೆ ಎಂದು ಹೇಳಿದ್ದಾರೆ.
ಐಸಿಯುಗಳಲ್ಲಿ ಭಜನೆ ಮಾಡಲು ಆಸ್ಪತ್ರೆ ಸಭೆಯಲ್ಲಿ ಪ್ರಸ್ತಾಪಿಸಿದ್ದು, ಇದಕ್ಕೆ ಅನುಮೋದನೆ ಕೂಡ ಸಿಕ್ಕಿದೆ ಎಂದು ಹೇಳಲಾಗಿದೆ. ಈ ಭಜನೆಗಳು ಸಕಾರಾತ್ಮಕ ಮತ್ತು ಆಧ್ಯಾತ್ಮಿಕ ವಾತಾವರಣ ಉಂಟು ಮಾಡುವ ಮೂಲಕ ರೋಗಿಯನ್ನು ವೇಗವಾಗಿ ಚೇತರಿಕೆಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ.
ಐಸಿಯುಗಳಲ್ಲಿ ಇಂತಹ ಚಟುವಟಿಕೆಗಳನ್ನು ಮಾಡಿದರೆ, ರೋಗಿಗಳು ನಮ್ಮ ಚಿಕಿತ್ಸೆಗೆ ಸ್ಪಂದಿಸುತ್ತಾರೆ. ಈಗಾಗಲೇ ಆಸ್ಪತ್ರೆ ನಡೆಸಿದ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದೇವೆ, ಜತೆಗೆ ಆಡಳಿತ ಮಂಡಳಿ ಅನುಮತಿ ನೀಡಿದ್ದು, ಎಲ್ಲಾ ಐಸಿಯುಗಳಲ್ಲಿ ಈ ನಿಯಮವನ್ನು ಅನುಸರಿಸುವಂತೆ ತಿಳಿಸಲಾಗಿದೆ ಎಂದು ಆಸ್ಪತ್ರೆಯ ಉಪಕುಲಪತಿ ಡಾ.ಅಬಿನಾಶ್ ರೌಟ್ ಸ್ಥಳೀಯ ಮಾಧ್ಯಮಕ್ಕೆ (ಔಟ್ಲೆಟ್ ಒಟಿವಿ) ತಿಳಿಸಿದ್ದಾರೆ.
ಇದನ್ನೂ ಓದಿ:ಒಡಿಶಾ: ನದಿ ಬಳಿ ಸ್ನಾನ ಮಾಡುತ್ತಿದ್ದ ಮಹಿಳೆಯನ್ನು ಎಳೆದೊಯ್ದು ಕಚ್ಚಿಕೊಂದ ಮೊಸಳೆ; ವಿಡಿಯೊ ವೈರಲ್
ಇನ್ನು ಐಸಿಯುಗಳಲ್ಲಿ ಭಜನೆ ಮಾಡಲು ಸ್ಥಳೀಯರಿಗೆ ಇದರ ಟೆಂಡರ್ಗಳನ್ನು ಕರೆಯಲಾಗಿದೆ. ಈ ಹಿಂದೆ ಕೊರೊನಾ ಸಮಯದಲ್ಲಿ ಗುಜರಾತಿನ ವಡೋದರಾದ ಸರ್ ಸಯಾಜಿರಾವ್ ಜನರಲ್ (ಎಸ್‌ಎಸ್‌ಜಿ) ಆಸ್ಪತ್ರೆಯಲ್ಲಿ ರೋಗಿಗಳಿಗೆ ಇಂತಹ ಚುಟುವಟಿಕೆಗಳನ್ನು ಮಾಡಲಾಗಿತ್ತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ