ಒಡಿಶಾ: ನದಿ ಬಳಿ ಸ್ನಾನ ಮಾಡುತ್ತಿದ್ದ ಮಹಿಳೆಯನ್ನು ಎಳೆದೊಯ್ದು ಕಚ್ಚಿಕೊಂದ ಮೊಸಳೆ; ವಿಡಿಯೊ ವೈರಲ್
ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಒಡಿಶಾದ ಜಾಜ್‌ಪುರ ಜಿಲ್ಲೆಯ ಪಲತ್‌ಪುರ್ ಗ್ರಾಮದಲ್ಲಿ ಬುಧವಾರ ಈ ಘಟನೆ ನಡೆದಿದ್ದು, ಮೃತರನ್ನು ಜ್ಯೋತ್ಸ್ನಾ ರಾಣಿ ಎಂದು ಗುರುತಿಸಲಾಗಿದೆ. ಈಕೆ ಬಿರುಪಾ ನದಿಯ ದಡದಲ್ಲಿ ಸ್ನಾನ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ ಮೊಸಳೆ ನದಿಯಿಂದ ಹಾರಿ, ರಾಣಿಯನ್ನು ಹಿಡಿದೆಳಿದಿದೆ. ನಂತರ ಸ್ವಲ್ಪ ಆಳವಿರುವ ಭಾಗಕ್ಕೆ ಹೋಗಿ ಅಲ್ಲಿ ಆಕೆಯನ್ನು ಕಚ್ಚಿ ತಿಂದಿದೆ.
ದೆಹಲಿ ಆಗಸ್ಟ್ 16: ಒಡಿಶಾದ(Odisha) ಜಜ್‌ಪುರ ಜಿಲ್ಲೆಯ ನದಿ ದಡದಲ್ಲಿ ಸ್ನಾನ ಮಾಡುತ್ತಿದ್ದ ಮಹಿಳೆಯೊಬ್ಬರನ್ನು ದೊಡ್ಡ ಮೊಸಳೆಯೊಂದು(Crocodile) ತಿಂದು ಹಾಕಿರುವ ಭೀಕರ ಘಟನೆ ನಡೆದಿದೆ. ಮೊಸಳೆ ಮಹಿಳೆಯನ್ನು ನದಿ ನೀರಿಗೆ ಎಳೆದೊಯ್ದು ಕಚ್ಚುತ್ತಿರುವ ದೃಶ್ಯವನ್ನು ಅಲ್ಲಿದ್ದ ಜನರು ಮೊಬೈಲ್ನಲ್ಲಿ ಸೆರೆಹಿಡಿದಿದ್ದು ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. 49 ಸೆಕೆಂಡುಗಳ ಈ ವಿಡಿಯೊದಲ್ಲಿ ಮಹಿಳೆಯನ್ನು ಮೊಸಳೆ ಎಳೆದುಕೊಂಡು ಹೋಗುವುದನ್ನು ಕಾಣಬಹುದು. ಆ ನಂತರ ಆಕೆಯ ದೇಹವನ್ನು ತಿನ್ನುತ್ತಿರುವುದೂ ಕಾಣಿಸುತ್ತದೆ.
ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಒಡಿಶಾದ ಜಾಜ್‌ಪುರ ಜಿಲ್ಲೆಯ ಪಲತ್‌ಪುರ್ ಗ್ರಾಮದಲ್ಲಿ ಬುಧವಾರ ಈ ಘಟನೆ ನಡೆದಿದ್ದು, ಮೃತರನ್ನು ಜ್ಯೋತ್ಸ್ನಾ ರಾಣಿ ಎಂದು ಗುರುತಿಸಲಾಗಿದೆ. ಈಕೆ ಬಿರುಪಾ ನದಿಯ ದಡದಲ್ಲಿ ಸ್ನಾನ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ ಮೊಸಳೆ ನದಿಯಿಂದ ಹಾರಿ, ರಾಣಿಯನ್ನು ಹಿಡಿದೆಳಿದಿದೆ. ನಂತರ ಸ್ವಲ್ಪ ಆಳವಿರುವ ಭಾಗಕ್ಕೆ ಹೋಗಿ ಅಲ್ಲಿ ಆಕೆಯನ್ನು ಕಚ್ಚಿ ತಿಂದಿದೆ. ಈ ಭಯಾನಕ ಘಟನೆಯನ್ನು ನದಿಯ ದಡದಿಂದ ನೋಡುತ್ತಿದ್ದವರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಚಿತ್ರೀಕರಿಸಿದ್ದಾರೆ.
ಸ್ಥಳೀಯ ಅಗ್ನಿಶಾಮಕ ಮತ್ತು ತುರ್ತು ಸಿಬ್ಬಂದಿಯನ್ನು ಈ ಪ್ರದೇಶದಲ್ಲಿ ನಿಯೋಜಿಸಲಾಗಿದೆ. ಶೋಧ ಕಾರ್ಯಾಚರಣೆಯ ನಂತರ ಸಂತ್ರಸ್ತೆಯ ದೇಹವನ್ನು ನದಿಯಿಂದ ಹೊರತೆಗೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Live video……. A crocodile killing women in jajpur Bari area odisha… #jajpur #bari #odisha #live pic.twitter.com/PnypFMgTyF
— Ajay kumar nath (@ajaynath550) August 16, 2023
ಕಳೆದ ತಿಂಗಳು ರಾಜ್ಯದ ಕೇಂದ್ರಪಾರ ಜಿಲ್ಲೆಯಲ್ಲಿ ಇದೇ ರೀತಿಯ ಘಟನೆ ವರದಿಯಾಗಿತ್ತು.ಭಿತಾರ್ಕಾನಿಕಾ ರಾಷ್ಟ್ರೀಯ ಉದ್ಯಾನವನದ ಹೊರವಲಯದಲ್ಲಿರುವ ನಿಮಾಪುರ್ ಗ್ರಾಮದ ಬ್ರಹ್ಮಣಿ ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ 10 ವರ್ಷದ ಬಾಲಕನನ್ನು ಮೊಸಳೆ ಕೊಂದು ಹಾಕಿತ್ತು.
ವರದಿಗಳ ಪ್ರಕಾರ 5 ನೇ ತರಗತಿಯ ವಿದ್ಯಾರ್ಥಿ ಅಶುತೋಷ್ ಆಚಾರ್ಯ ವಿಸರ್ಜನೆ ಮಾಡಲು ತನ್ನ ತಾಯಿಯೊಂದಿಗೆ ನದಿಯ ದಡಕ್ಕೆ ಹೋಗಿದ್ದನು. ಅಶುತೋಷ್ ಮಲ ವಿಸರ್ಜನೆಗೆ ಹೋದಾಗ, ಅವನ ತಾಯಿ ನದಿಯಲ್ಲಿ ಸ್ನಾನ ಮಾಡಲು ನಿರ್ಧರಿಸಿದರು. ಇದ್ದಕ್ಕಿದ್ದಂತೆ, ಮೊಸಳೆಯು ಹೊರಗೆ ಹಾರಿ ಬಾಲಕನನ್ನು ಎಳೆದೊಯ್ದಿದೆ.
ಇದನ್ನೂ ಓದಿ: ರಾಹುಲ್ ಜೊತೆ ಊಟ, ಮೋದಿ ಯೋಜನೆಗೆ ಜೈ: ಬೆಲೆ ಏರಿಕೆಗೆ ಕಣ್ಣೀರು ಹಾಕಿದ್ದ ವ್ಯಾಪಾರಿಯ ಮತ್ತೊಂದು ವಿಡಿಯೋ ವೈರಲ್
ಒಂದು ಗಂಟೆಯ ಶೋಧದ ನಂತರ ಸ್ಥಳೀಯರು ಅಶುತೋಷ್ ಅವರ ಮೃತದೇಹವನ್ನು ಪತ್ತೆ ಹಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವನ್ಯಜೀವಿ ತಜ್ಞರ ಪ್ರಕಾರ, ಮೊಸಳೆಗಳು ಸಾಮಾನ್ಯವಾಗಿ ಹಿಂಸಾತ್ಮಕ ಪ್ರವೃತ್ತಿ ತೋರಿಸುತ್ತವೆ. ಅವುಗಳು ಸಂತಾನೋತ್ಪತ್ತಿ ಅವಧಿಯಲ್ಲಿ ಮನುಷ್ಯರ ಮೇಲೆ ದಾಳಿ ಮಾಡುತ್ತವೆ. ಒಡಿಶಾದ ಕೇಂದ್ರಪಾರಾವು ವರ್ಷದ ಈ ಸಮಯದಲ್ಲಿ ಮೊಸಳೆ ದಾಳಿಗೆ ಕುಖ್ಯಾತವಾಗಿದೆ.
ಉಪ್ಪು ನೀರಿನ ಮೊಸಳೆಗಳ ಗೂಡುಕಟ್ಟುವ ಅವಧಿಯು ಪ್ರಸ್ತುತ ಭರದಿಂದ ಸಾಗುತ್ತಿದೆ ಮತ್ತು ಈ ಸಮಯದಲ್ಲಿ ತಮ್ಮ ವಾಸಸ್ಥಾನದಲ್ಲಿ ಯಾವುದೇ ಹಸ್ತಕ್ಷೇಪದ ಭಯವಿದ್ದರೆ ಅವು ಹಿಂಸಾತ್ಮಕವಾಗಿ ವರ್ತಿಸುತ್ತವೆ ಎಂದು ರಾಜನಗರ ಮ್ಯಾಂಗ್ರೋವ್ (ವನ್ಯಜೀವಿ) ಅರಣ್ಯ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ