ದೆಹಲಿ: ಧಾರ್ಮಿಕ ಭಿನ್ನಾಭಿಪ್ರಾಯಗಳನ್ನು ಅಸ್ತ್ರವನ್ನಾಗಿ ಬಳಸಿಕೊಂಡು ದ್ವೇಷವನ್ನು ಹರಡುತ್ತಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ವಾಗ್ದಾಳಿ ನಡೆಸಿದ್ದಾರೆ. ಇಂದು ಸಂಜೆ ಭಾರತ್ ಜೋಡೋ ಯಾತ್ರೆಯಲ್ಲಿ (Bharat Jodo Yatra) ದೆಹಲಿ ಸ್ಮಾರಕವನ್ನು ತಲುಪಿದ ನಂತರ ಕೆಂಪು ಕೋಟೆಯಲ್ಲಿ ಮಾಡಿದ ಭಾಷಣದಲ್ಲಿ ರಾಹುಲ್ ಗಾಂಧಿ, ನಿಜವಾದ ಸಮಸ್ಯೆಗಳಿಂದ ನಿಮ್ಮ ಗಮನವನ್ನು ಬೇರೆಡೆಗೆ ತಿರುಗಿಸಲು 24×7 ಹಿಂದೂ-ಮುಸ್ಲಿಂ ದ್ವೇಷವನ್ನು ಹರಡಲಾಗುತ್ತಿದೆ ಎಂದು ಹೇಳಿದರು. ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಇಂದು ಬೆಳಗ್ಗೆ ಯಾತ್ರೆಯಲ್ಲಿ ಪಾಲ್ಗೊಂಡರು. ನಂತರ, ಮೆರವಣಿಗೆ ಕೆಂಪು ಕೋಟೆ ಬಳಿ ಬಂದಾಗ ನಟ ಕಮಲ್ ಹಾಸನ್ ರಾಹುಲ್ ಗಾಂಧಿಗೆ ಸಾಥ್ ನೀಡಿದರು.
ನಾನು 2,800 ಕಿಲೋಮೀಟರ್ ನಡೆದಿದ್ದೇನೆ, ಆದರೆ ಯಾವುದೇ ದ್ವೇಷವನ್ನು ನೋಡಲಿಲ್ಲ. ನಾನು ಟಿವಿ ಆನ್ ಮಾಡಿದಾಗ, ಮಾತ್ರ ನಾನು ಹಿಂಸೆಯನ್ನು ನೋಡುತ್ತೇನೆ ಎಂದು ರಾಹುಲ್ ಹೇಳಿದರು. ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಗೆ ಸೇರುವುದು ಮತ್ತು ರಾಹುಲ್ ಗಾಂಧಿ ಅವರೊಂದಿಗೆ ನಡೆಯುವುದು ರಾಜಕೀಯವಾಗಿ ತಪ್ಪು ಎಂದು ಜನರು ತನ್ನ ಬಳಿಗೆ ಬಂದರು ಎಂದು ಕಮಲ್ ಹಾಸನ್ ಹೇಳಿದರು.
ಇದು ದೇಶಕ್ಕೆ ಬೇಕಾದ ಸಮಯ. ಇಂದು ನನ್ನ ಆಂತರಿಕ ಧ್ವನಿ ಹೇಳಿದೆ, ಭಾರತ್ ತೋಡ್ನೆ ಕಿ ನಹಿ ಜೋಡ್ನೆ ಕಿ ಮದದ್ ಕರೋ (ದೇಶವನ್ನು ಒಗ್ಗೂಡಿಸಲು ಸಹಾಯ ಮಾಡಿ, ಅದನ್ನು ಒಡೆಯಬೇಡಿ) ಎಂದು ಹೇಳಿದರು. ಕಮಲ್ ಹಾಸನ್ ಯಾತ್ರೆಯಲ್ಲಿ ಭಾಗವಹಿಸಿದರೂ ರಾಜಕೀಯ ಮೈತ್ರಿಗಳ ಬಗ್ಗೆ ಮಾತನಾಡಲಿಲ್ಲ. ಏಪ್ರಿಲ್ 2021 ರಲ್ಲಿ ತಮಿಳುನಾಡಿನಲ್ಲಿ ತನ್ನ ಮೊದಲ ಚುನಾವಣೆಯಲ್ಲಿ ಸ್ಪರ್ಧಿಸಿದ ಅವರ ಪಕ್ಷವು ಚುನಾವಣಾ ಸೋತಿತ್ತು.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:00 pm, Sat, 24 December 22