ಶ್ರೀನಗರ: ಭಾರತ್ ಜೋಡೋ ಯಾತ್ರೆಯ (Bharat Jodo Yatra) ಸಮಾರೋಪಕ್ಕೆ ಎಲ್ಲ ರೀತಿಯ ಸಿದ್ಧತೆಗಳು ನಡೆಯುತ್ತಿದೆ. ರಾಹುಲ್ ಗಾಂಧಿ ಮತ್ತು ಅವರ ಸಹೋದರಿ ಪ್ರಿಯಾಂಕ ಗಾಂಧಿ ಶ್ರೀನಗರದಲ್ಲಿ ಈಗಾಗಲೇ ವಾಸ್ತವ ಹೂಡಿದ್ದಾರೆ. ಇದೀಗ ಈ ಸಮಯದಲ್ಲಿ ಇಬ್ಬರೂ ಮಕ್ಕಳಂತೆ ಮುಕ್ತ ಮನಸ್ಸಿನಿಂದ ಸ್ನೋಬಾಲ್ನ್ನು (ಹಿಮ ಉಂಡೆ) ಒಬ್ಬರಿಗೊಬ್ಬರು ಎಸೆದುಕೊಂಡಿದ್ದಾರೆ. ಈ ವಿಡಿಯೊ ಸಖತ್ ವೈರಲ್ ಆಗಿದೆ. ರಾಹುಲ್ ಗಾಂಧಿ ಅವರು ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಪ್ರೀತಿಯ ಕ್ಷಣವನ್ನು ಹಂಚಿಕೊಂಡಿದ್ದಾರೆ. ಇಬ್ಬರು ಸ್ನೋಬಾಲ್ ಹೊಡೆದಾಡಿಕೊಂಡಿರುವ ವಿಡಿಯೊ ಮತ್ತು ಫೋಟೋ ವೈರಲ್ ಆಗಿದೆ.
Sheen Mubarak!?
A beautiful last morning at the #BharatJodoYatra campsite, in Srinagar.❤️ ❄️ pic.twitter.com/rRKe0iWZJ9
— Rahul Gandhi (@RahulGandhi) January 30, 2023
ವಿಡಿಯೋದಲ್ಲಿ ರಾಹುಲ್ ಮತ್ತು ಪ್ರಿಯಾಂಕಾ ತಮಾಷೆಯಾಗಿ ಪರಸ್ಪರ ಹಿಮದ ಉಂಡೆಯನ್ನು ಎಸೆಯುವುದನ್ನು ಕಾಣಬಹುದು. ಕಾಂಗ್ರೆಸ್ ಕಾರ್ಯಕರ್ತರು ನೋಡುತ್ತಿರುವಂತೆ ರಾಹುಲ್ ಪ್ರಿಯಾಂಕಾ ಅವರ ತಲೆಯ ಮೇಲೆ ಹಿಮದ ಮಳೆಗರೆದಿದ್ದಾರೆ. ಪ್ರಿಯಾಂಕಾ ಕೂಡ ತನ್ನ ಸಹೋದರನೊಂದಿಗೆ ತಮಾಷೆಯಾಗಿ ಜಗಳ ಮಾಡುವುದನ್ನು ಈ ವಿಡಿಯೊದಲ್ಲಿ ತೋರಿಸಲಾಗಿದೆ. ರಾಹುಲ್ ಗಾಂಧಿ ತೋಳುಗಳನ್ನು ಹಿಂದಕ್ಕೆ ಹಿಡಿದುಕೊಂಡು ಅವರ ತಲೆಯ ಮೇಲೆ ಸ್ನೋಬಾಲ್‌ಗಳನ್ನು ಎಸೆಯುತ್ತಾರೆ, ಆದರೆ ರಾಹುಲ್ ಗಾಂಧಿ ಅವರಿಂದ ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ.
ಇದನ್ನು ಓದಿ: Bharat Jodo Yatra Highlights: ಸಮಾರೋಪ ಇಂದು; ರಾಹುಲ್ ಪಾದಯಾತ್ರೆಯ ಮುಖ್ಯಾಂಶಗಳಿವು
ಕಾಶ್ಮೀರದಲ್ಲಿ ಶನಿವಾರ ನಡೆದ ಭಾರತ್ ಜೋಡೋ ಯಾತ್ರೆಯ ಕೊನೆಯ ಹಂತದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ತಮ್ಮ ಸಹೋದರನೊಂದಿಗೆ ಸೇರಿಕೊಂಡರು. ಶ್ರೀನಗರದಲ್ಲಿ ಇಂದು ನಡೆಯಲಿರುವ ಮೆಗಾ ರ್ಯಾಲಿಯೊಂದಿಗೆ ರಾಹುಲ್ ಗಾಂಧಿ ನೇತೃತ್ವದ ಪಾದಯಾತ್ರೆ ಅಂತ್ಯಗೊಳ್ಳಲಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:59 pm, Mon, 30 January 23