ತಮಿಳುನಾಡು: 80 ವರ್ಷಗಳಿಂದ ಪ್ರವೇಶ ನಿಷೇಧಿಸಿದ್ದ ದೇವಾಲಯಕ್ಕೆ ಪ್ರವೇಶಿಸಿದ 300 ದಲಿತರು

ತೆನ್ಮುಡಿಯನೂರು ಗ್ರಾಮದಲ್ಲಿ ಸುಮಾರು 500 ಪರಿಶಿಷ್ಟ ಜಾತಿ ಕುಟುಂಬಗಳು ವಾಸಿಸುತ್ತಿವೆ. ಇಲ್ಲಿ 80 ವರ್ಷಗಳಿಂದ 200 ವರ್ಷಗಳಷ್ಟು ಹಳೆಯ ದೇವಾಲಯಕ್ಕೆ ಸಮುದಾಯಕ್ಕೆ ಪ್ರವೇಶ ನಿರಾಕರಿಸಲಾಗಿತ್ತು.,ದಶಕಗಳ ಹಿಂದೆಯೇ ಸಮುದಾಯಗಳು ವಿವಿಧ ದೇವಾಲಯಗಳಲ್ಲಿ ಪ್ರಾರ್ಥನೆ ಮಾಡಲು ಒಪ್ಪಿಕೊಂಡಿವೆ. ಅದರಲ್ಲಿ ಯಾವತ್ತೂ ಬದಲಾವಣೆ ಆಗಿಯೇ ಇಲ್ಲ ಎಂದು ಇಲ್ಲಿನ ಪ್ರಬಲ ಸಮುದಾಯಗಳು ಹೇಳಿವೆ.

ತಮಿಳುನಾಡು: 80 ವರ್ಷಗಳಿಂದ ಪ್ರವೇಶ ನಿಷೇಧಿಸಿದ್ದ ದೇವಾಲಯಕ್ಕೆ ಪ್ರವೇಶಿಸಿದ 300 ದಲಿತರು
ತಮಿಳುನಾಡಿದ ದೇವಾಲಯಕ್ಕೆ ದಲಿತರ ಪ್ರವೇಶ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jan 30, 2023 | 1:51 PM

ತಿರುವಣ್ಣಾಮಲೈ(ತಮಿಳುನಾಡು): ತಮಿಳುನಾಡಿನ(Tamil Nadu) ತಿರುವಣ್ಣಾಮಲೈ ಜಿಲ್ಲೆಯಲ್ಲಿ ಹಲವು ದಶಕಗಳಿಂದ ದೇವಸ್ಥಾನಕ್ಕೆ ಪ್ರವೇಶ ನಿರಾಕರಿಸಲಾಗಿದ್ದ ಅಲ್ಲಿನ ಪರಿಶಿಷ್ಟ ಜಾತಿಯ 300 ಕ್ಕೂ ಹೆಚ್ಚು ಜನರನ್ನು ಇಂದು (ಸೋಮವಾರ) ಜಿಲ್ಲಾಡಳಿತವು ದೇವಾಲಯಕ್ಕೆ ಪೂಜೆಗೆ ಕರೆದೊಯ್ದಿದೆ. ಪೋಷಕ-ಶಿಕ್ಷಕರ ಸಮಾವೇಶದ ಸಂದರ್ಭದಲ್ಲಿ ಈ ವಿಷಯವು ಬೆಳಕಿಗೆ ಬಂದಿತ್ತು. ಈ ಬಗ್ಗೆ ಆ ಪ್ರದೇಶದ ಪ್ರಬಲ ಸಮುದಾಯಗಳೊಂದಿಗಿನ ಸಭೆಗಳನ್ನು ನಡೆಸಿದ ನಂತರ ಈ ಐತಿಹಾಸಿಕ ಕಾರ್ಯ ನಡೆದಿದೆ. ಆದಾಗ್ಯೂ, ಗ್ರಾಮದಲ್ಲಿ 12 ಪ್ರಬಲ ಗುಂಪುಗಳ ತೀವ್ರ ವಿರೋಧದಿಂದಾಗಿ ಪರಿಸ್ಥಿತಿ ಉದ್ವಿಗ್ನವಾಗಿರುವುದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ದೇವಸ್ಥಾನದ ಹೊರಗೆ ಭಾರೀ ಪೊಲೀಸ್ ನಿಯೋಜಿಸಲಾಗಿದೆ.

ತೆನ್ಮುಡಿಯನೂರು ಗ್ರಾಮದಲ್ಲಿ ಸುಮಾರು 500 ಪರಿಶಿಷ್ಟ ಜಾತಿ ಕುಟುಂಬಗಳು ವಾಸಿಸುತ್ತಿವೆ. ಇಲ್ಲಿ 80 ವರ್ಷಗಳಿಂದ 200 ವರ್ಷಗಳಷ್ಟು ಹಳೆಯ ದೇವಾಲಯಕ್ಕೆ ಸಮುದಾಯಕ್ಕೆ ಪ್ರವೇಶ ನಿರಾಕರಿಸಲಾಗಿತ್ತು.,ದಶಕಗಳ ಹಿಂದೆಯೇ ಸಮುದಾಯಗಳು ವಿವಿಧ ದೇವಾಲಯಗಳಲ್ಲಿ ಪ್ರಾರ್ಥನೆ ಮಾಡಲು ಒಪ್ಪಿಕೊಂಡಿವೆ. ಅದರಲ್ಲಿ ಯಾವತ್ತೂ ಬದಲಾವಣೆ ಆಗಿಯೇ ಇಲ್ಲ ಎಂದು ಇಲ್ಲಿನ ಪ್ರಬಲ ಸಮುದಾಯಗಳು ಹೇಳಿವೆ. ಪ್ರಬಲ ಸಮುದಾಯಗಳ 750 ಕ್ಕೂ ಹೆಚ್ಚು ಜನರು ಈ ಕ್ರಮವನ್ನು ಪ್ರತಿಭಟಿಸಿದ್ದು, ದೇವಾಲಯವನ್ನು ಸೀಲ್ ಮಾಡಲು ಒತ್ತಾಯಿಸುತ್ತಿರುವುದರಿಂದ ದೇವಾಲಯದ ಹೊರಗೆ ಭಾರೀ ಪೊಲೀಸ್ ನಿಯೋಜನೆ ಇದೆ.

ಎಸ್‌ಸಿಗಳಿಗೆ ದೇವಾಲಯ ಪ್ರವೇಶಕ್ಕೆ ಅವಕಾಶ ನೀಡುವಂತೆ ಪ್ರಬಲ ಸಮುದಾಯಗಳ ಮನವೊಲಿಸಲು ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆಗಳು ನಡೆದಿತ್ತು.

ಇದು ಪೊಂಗಲ್ ಆಚರಣೆಯ ಭಾಗವಾಗಿದ್ದು, ಪೊಲೀಸರು ಯೋಜಿಸಿದಂತೆ ಎಲ್ಲವೂ ನಡೆದರೆ, ಪರಿಶಿಷ್ಟ ಜಾತಿಯ ಜನರನ್ನು ದೇವಾಲಯದ ಒಳಗೆ ಕರೆದೊಯ್ದು ಪೊಂಗಲ್ ತಯಾರಿಸಿ ಪೂಜೆ ಮತ್ತು ಧಾರ್ಮಿಕ ಕ್ರಿಯೆಗಳನ್ನು ಮಾಡಲು ಅವಕಾಶ ನೀಡಲಾಗುತ್ತದೆ. ಎಸ್‌ಸಿ ಸಮುದಾಯದ ಸುಮಾರು 15 ರಿಂದ 20 ಕುಟುಂಬಗಳು ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಲು ಮುಂದೆ ಬಂದಿದ್ದು, ಇದು ಹೊಸ ಆರಂಭವಾಗಬಹುದು ಎಂದು ಪೊಲೀಸರು ಭಾವಿಸಿದ್ದಾರೆ. ಇತರರು ಸಹ ಇನ್ನು ಮುಂದೆ ಬರುತ್ತಾರೆ. ಇದು ‘ಕೋಮು ವಿಭಜನೆ’ಯನ್ನು ಮುರಿಯಬಹುದು ಎಂದಿದ್ದಾರೆ.

ರಾಜ್ಯದಲ್ಲಿ ಇತ್ತೀಚೆಗೆ ನಡೆದ ಎರಡನೇ ಘಟನೆ ಇದಾಗಿದೆ. ಪುದುಕ್ಕೊಟ್ಟೈ ಜಿಲ್ಲೆಯಲ್ಲೂ ದೇವಾಲಯ ಪ್ರವೇಶ ನಿರಾಕರಿಸಿದ ಪ್ರತಿನಿಧಿಗಳ ಗುಂಪನ್ನು ಜಿಲ್ಲಾಧಿಕಾರಿ ನೇತೃತ್ವ ವಹಿಸಿದ್ದರು. ಪರಿಶಿಷ್ಟ ಜಾತಿಯ ಸಮುದಾಯಕ್ಕೆ ನೀರು ಸರಬರಾಜು ಮಾಡುವ ಕುಡಿಯುವ ನೀರಿನ ತೊಟ್ಟಿಯಲ್ಲಿ ಮಲವಿಸರ್ಜನೆಯ ಬಗ್ಗೆ ವರದಿಯಾದ ನಂತರ ಅವರು ಅವರಿಗೆ ಪ್ರವೇಶವನ್ನು ಖಚಿತಪಡಿಸಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್