K Chandrashekar Rao birthday: ಶುಕ್ರವಾರ ಕೆಸಿಆರ್ 69ನೇ ಹುಟ್ಟುಹಬ್ಬ: ಬಿಆರ್​​ಎಸ್ ಪಾರ್ಟಿಯಿಂದ ವಿಶೇಷ ಪೂಜೆ, 69 ಕೆಜಿ ಕೇಕ್, ಕ್ರೀಡೋತ್ಸವಗಳ ಸಂಭ್ರಮ

| Updated By: ಸಾಧು ಶ್ರೀನಾಥ್​

Updated on: Feb 16, 2023 | 12:36 PM

Bharat Rashtra Samithi: ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಫೆಬ್ರವರಿ 17 ರಂದು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ 69ನೇ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಸಜ್ಜಾಗಿದೆ. ಜೊತೆಗೆ 69 ಕೆಜಿ ಕೇಕ್ ಸಿದ್ಧವಾಗಿದೆ.

K Chandrashekar Rao birthday: ಶುಕ್ರವಾರ ಕೆಸಿಆರ್ 69ನೇ ಹುಟ್ಟುಹಬ್ಬ: ಬಿಆರ್​​ಎಸ್ ಪಾರ್ಟಿಯಿಂದ ವಿಶೇಷ ಪೂಜೆ, 69 ಕೆಜಿ ಕೇಕ್, ಕ್ರೀಡೋತ್ಸವಗಳ ಸಂಭ್ರಮ
ಶುಕ್ರವಾರ ಕೆಸಿಆರ್ 69ನೇ ಹುಟ್ಟುಹಬ್ಬ
Follow us on

ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್ Bharat Rashtra Samithi BRS) ಫೆಬ್ರವರಿ 17 ರಂದು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ (Telangana CM K Chandrashekar Rao) ಅವರ 69ನೇ ಹುಟ್ಟುಹಬ್ಬವನ್ನು (Birthday) ಅದ್ಧೂರಿಯಾಗಿ ಆಚರಿಸಲು ಸಜ್ಜಾಗಿದೆ. ಜೊತೆಗೆ 69 ಕೆಜಿ ಕೇಕ್ ಸಿದ್ಧವಾಗಿದೆ. ತೆಲಂಗಾಣ ಸರ್ಕಾರದ (Telangana Government) ಪ್ರಮುಖ ಸಾಧನೆಗಳನ್ನು ಎತ್ತಿ ತೋರಿಸುವ ಸಾಕ್ಷ್ಯಚಿತ್ರವನ್ನು ಹೈದರಾಬಾದ್‌ನಲ್ಲಿ ಪ್ರದರ್ಶಿಸಲಾಗುವುದು.

ಕಳೆದ ಎಂಟು ವರ್ಷಗಳ ಸರ್ಕಾರದ ಪ್ರಮುಖ ಸಾಧನೆಗಳು ಮತ್ತು ಕಲ್ಯಾಣ ಯೋಜನೆಗಳನ್ನು ಎತ್ತಿ ತೋರಿಸುವ 3D ಗ್ರಾಫಿಕ್ಸ್‌ನೊಂದಿಗೆ ಸಾಕ್ಷ್ಯಚಿತ್ರವನ್ನು ಹೈದರಾಬಾದ್‌ನಲ್ಲಿ ಪ್ರದರ್ಶಿಸಲಾಗುತ್ತದೆ. ನೆಕ್ಲೇಸ್ ರಸ್ತೆಯಲ್ಲಿರುವ ಥ್ರಿಲ್ ಸಿಟಿಯಲ್ಲಿ ಸಚಿವ ತಲಸಾನಿ ಶ್ರೀನಿವಾಸ್ ಯಾದವ್ ನೇತೃತ್ವದಲ್ಲಿ ಸಂಭ್ರಮಾಚರಣೆ ನಡೆಯಲಿದೆ. ಜಿಎಚ್‌ಎಂಸಿ (ಗ್ರೇಟರ್ ಹೈದರಾಬಾದ್ ಮುನ್ಸಿಪಾಲಿಟಿ ಕೌನ್ಸಿಲ್) ವ್ಯಾಪ್ತಿಯ ಪ್ರತಿಯೊಂದು ವಿಭಾಗದಲ್ಲೂ ಹುಟ್ಟುಹಬ್ಬದ ಸಂಭ್ರಮಾಚರಣೆ ನಡೆಯಲಿದೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ‘ಕೆಸಿಆರ್ ಕಪ್’ ಹೆಸರಿನಲ್ಲಿ ಕ್ರೀಡಾಕೂಟಗಳು ಮತ್ತು ಟೂರ್ನಿಗಳನ್ನೂ ಆಯೋಜಿಸಲಾಗುತ್ತಿದೆ. ವಿಧಾನಸಭಾ ಕ್ಷೇತ್ರಗಳು ಮತ್ತು ವಾರ್ಡ್‌ಗಳಾದ್ಯಂತ, ಶಾಸಕರು ಮತ್ತು ಎಂಎಲ್‌ಸಿಗಳು ಕೇಕ್ ಕತ್ತರಿಸುವ ಸಮಾರಂಭದಲ್ಲಿ ಭಾಗವಹಿಸುತ್ತಾರೆ ಮತ್ತು ಅವರು ರಕ್ತದಾನ ಶಿಬಿರಗಳು, ಅನ್ನದಾನ ಕಾರ್ಯಕ್ರಮಗಳು ಮತ್ತು ಇತರ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಸಹ ನಡೆಸಲಿದ್ದಾರೆ.

ನಗರದ ಹಲವು ಪ್ರಮುಖ ದೇವಸ್ಥಾನಗಳಲ್ಲಿ ಚಂಡಿ ಯಾಗ, ಆಯುಷ್ ಹೋಮ, ರಾಜಶ್ಯಾಮಲ ಯಾಗ ನಡೆಯಲಿದೆ. ಬಿಆರ್‌ಎಸ್‌ಗೆ ಸೇರಿದ ಜಿಎಚ್‌ಎಂಸಿ ಮೇಯರ್ ಜುಬಿಲಿ ಹಿಲ್ಸ್‌ನ ಪೆದ್ದಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ನಿರೀಕ್ಷೆಯಿದೆ ಮತ್ತು ಉಪಮೇಯರ್ ಶ್ರೀಲತಾ ರೆಡ್ಡಿ ಸಿಕಂದರಾಬಾದ್‌ನ ಗಣೇಶ ದೇವಸ್ಥಾನದಲ್ಲಿ ಚಂಡಿಯಾಗ ಮಾಡಲಿದ್ದಾರೆ.

ಮುಖ್ಯಮಂತ್ರಿಗಳ ದೀರ್ಘಾಯುಷ್ಯ ಮತ್ತು ಆರೋಗ್ಯಕ್ಕಾಗಿ ಮಹಾಕಾಳಿ ಉಜ್ಜಯಿನಿ ದೇವಸ್ಥಾನದಲ್ಲಿ ಆಯುಷ್ ಹೋಮ ಹಾಗೂ ಬಲ್ಕಂಪೇಟೆಯ ಯಲ್ಲಮ್ಮ ದೇವಸ್ಥಾನದಲ್ಲಿ ರಾಜಶ್ಯಾಮಲ ಯಾಗ ನಡೆಯಲಿದೆ.

ಚಾರ್ಮಿನಾರ್‌ನ ಭಾಗ್ಯಲಕ್ಷ್ಮಿ ದೇವಸ್ಥಾನದಲ್ಲಿ ಸಿಎಂ ಕೆ ಚಂದ್ರಶೇಖರ ರಾವ್ ಗೋತ್ರದಲ್ಲಿ ಅರ್ಚನೆ ಹಾಗೂ ಹಳೆನಗರದ ಲಾಲ್ ದರ್ವಾಜಾ ಪ್ರದೇಶದ ಸಿಂಹವಾಹಿನಿ ದೇವಸ್ಥಾನದಲ್ಲಿ ಲಕ್ಷ ಪುಷ್ಪಾರ್ಚನೆ ನಡೆಯಲಿದೆ.

ಇದಲ್ಲದೆ, ಸಿಕಂದರಾಬಾದ್‌ನ ವೆಸ್ಲಿ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ಮತ್ತು ನಾಂಪಲ್ಲಿ ದರ್ಗಾ ಮತ್ತು ನಲ್ಲಗುಟ್ಟಾ ಮಸೀದಿಯಲ್ಲಿ ಚಾದರ್‌ಗಳನ್ನು ಸಲ್ಲಿಸಲಾಗುತ್ತದೆ.

ಹೈದರಾಬಾದ್‌ನಾದ್ಯಂತ ಸಿಎಂಗೆ ಶುಭಕೋರಲು ಪಕ್ಷವು ಪೋಸ್ಟರ್/ಫ್ಲೆಕ್ಸ್ ಬೋರ್ಡ್‌ಗಳನ್ನು ಹಾಕುತ್ತಿದೆ. ಮುಖ್ಯಮಂತ್ರಿ ತಮ್ಮ ಹುಟ್ಟುಹಬ್ಬವನ್ನು ಪ್ರಗತಿ ಭವನದಲ್ಲಿ ಕುಟುಂಬ ಸದಸ್ಯರೊಂದಿಗೆ ಆಚರಿಸುವ ನಿರೀಕ್ಷೆಯಿದೆ.