ಜನರಿಗೆ ತೊಂದರೆಯಾಗದಂತೆ ನಾಳೆಯ ಭಾರತ್ ಬಂದ್​ಗೆ ಟೈಮ್ ಫಿಕ್ಸ್​ ಮಾಡಿದ ಕಿಸಾನ್ ಯೂನಿಯನ್

|

Updated on: Dec 07, 2020 | 4:26 PM

ಜನ ಸಾಮಾನ್ಯರ ಜನಜೀವನಕ್ಕೆ ತೊಂದರೆಯಾಗದಂತೆ ನಾಳೆಯ ಭಾರತ್ ಬಂದ್​ನ್ನು ಬೆಳಗ್ಗೆ 11ರಿಂದ ಮಧ್ಯಾಹ್ನ3ರವರೆಗೆ ಮಾತ್ರ ಆಯೋಜಿಸುವುದಾಗಿ ಭಾರತೀಯ ಕಿಸಾನ್ ಯೂನಿಯನ್​ನ ಮಾಧ್ಯಮ ವಕ್ತಾರ ರಾಕೇಶ್ ಟಿಕಾಯತ್ ಹೇಳಿದರು.

ಜನರಿಗೆ ತೊಂದರೆಯಾಗದಂತೆ ನಾಳೆಯ ಭಾರತ್ ಬಂದ್​ಗೆ ಟೈಮ್ ಫಿಕ್ಸ್​ ಮಾಡಿದ ಕಿಸಾನ್ ಯೂನಿಯನ್
ದೆಹಲಿ ಚಲೋ ಪ್ರತಿಭಟನೆ
Follow us on

ದೆಹಲಿ: ಜನ ಸಾಮಾನ್ಯರ ಜನಜೀವನಕ್ಕೆ ತೊಂದರೆಯಾಗದಂತೆ ನಾಳೆಯ ಭಾರತ್ ಬಂದ್​ ಅನ್ನು ಬೆಳಗ್ಗೆ 11ರಿಂದ ಮಧ್ಯಾಹ್ನ3ರವರೆಗೆ ಮಾತ್ರ ಆಯೋಜಿಸುವುದಾಗಿ ಭಾರತೀಯ ಕಿಸಾನ್ ಯೂನಿಯನ್​ನ ಮಾಧ್ಯಮ ವಕ್ತಾರ ರಾಕೇಶ್ ಟಿಕಾಯತ್ ಹೇಳಿದರು.

ಬೆಳಗ್ಗೆ 11ರಿಂದ 3ರವರೆಗೆ ಮಾತ್ರ ಬಂದ್ ಮಾಡುವುದರಿಂದ ಕಚೇರಿಗೆ ತೆರಳಲು, ಮರಳಲು ಜನಸಾಮಾನ್ಯರಿಗೆ ತೊಂದರೆಯಾಗುವುದಿಲ್ಲ. ನಮ್ಮ ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ವಿರೋಧ ಸೂಚಿಸಲು ಸಾಂಕೇತಿಕವಾಗಿ ಭಾರತ್ ಬಂದ್​ಗೆ ಕರೆಕೊಟ್ಟಿದ್ದೇವೆ. ಜನಸಾಮಾನ್ಯರಿಗೆ ತೊಂದರೆ ಕೊಡುವ ಯಾವ ಉದ್ದೇಶವಿಲ್ಲ ಎಂದು ಅವರು ತಿಳಿಸಿದರು.

ಆ್ಯಂಬುಲೆಲ್ಸ್​ನಂತಹ ಅನಿವಾರ್ಯ ಸೇವೆಗಳಿಗೆ ಯಾವುದೇ ತೊಂದರೆಯೂ ಆಗದಂತೆ ನಿರ್ವಹಿಸುತ್ತೇವೆ. ನಾಳೆ ನಿಗದಿಯಾದ ಮದುವೆಗಳು ಸಹ ಯಾವುದೇ ತೊಂದರೆಯಿಲ್ಲದೇ ನಡೆಯಬಹುದು ಎಂದು ಅವರು ತಿಳಿಸಿದರು.

 

Delhi Chalo ಚಳವಳಿ ನೆಪದಲ್ಲಿ ಪಾಕ್​ ಸಚಿವನಿಂದ ಭಾರತ ಸರ್ಕಾರದ ಟೀಕೆ

Published On - 4:21 pm, Mon, 7 December 20