Delhi Chalo ಚಳವಳಿ ನೆಪದಲ್ಲಿ ಪಾಕ್​ ಸಚಿವನಿಂದ ಭಾರತ ಸರ್ಕಾರದ ಟೀಕೆ

ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫವಾದ್ ಹುಸೇನ್, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ‘ಹೃದಯಹೀನ’ ಎಂದು ಜರಿದಿದ್ದಾರೆ.

Delhi Chalo ಚಳವಳಿ ನೆಪದಲ್ಲಿ ಪಾಕ್​ ಸಚಿವನಿಂದ ಭಾರತ ಸರ್ಕಾರದ ಟೀಕೆ
ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಚೌಧ್ರಿ ಫವಾದ್ ಹುಸೇನ್
Follow us
guruganesh bhat
|

Updated on:Dec 07, 2020 | 4:27 PM

ಸದಾಕಾಲ ಭಾರತದ ಜೊತೆ ಕಿರಿಕ್​ ಮಾಡುತ್ತಲೇ ಇರುವ ಪಾಕ್​ ಈಗ ದೆಹಲಿ ಚಲೋದ ವಿಷಯದಲ್ಲಿ ಮೂಗು ತೂರಿಸಿದೆ. ದೇಶದ ಆಂತರಿಕ ವಿಚಾರಗಳಲ್ಲಿ ಬೇರೆ ಯಾವುದೇ ದೇಶ ಮೂಗು ತೂರಿಸುವುದನ್ನು ಭಾರತ ಸಹಿಸುವುದಿಲ್ಲ. ಈ ಹಿಂದೆ ರೈತರ ಪ್ರತಿಭಟನೆ ಪ್ರಸ್ತಾಪಿಸಿದ್ದ ಕೆನಡಾ ಪ್ರಧಾನಿಗೂ ಭಾರತ ಖಡಕ್ ಪ್ರತಿಕ್ರಿಯೆಯನ್ನೇ ನೀಡಿತ್ತು.

ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫವಾದ್ ಹುಸೇನ್, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ‘ಹೃದಯಹೀನ’ ಎಂದು ಜರಿದಿದ್ದಾರೆ. ಪಂಜಾಬ್ ರೈತರ ಬಗ್ಗೆ ನರೇಂದ್ರ ಮೋದಿ ಸರ್ಕಾರಕ್ಕೆ ಕಿಂಚಿತ್ತೂ ಕಾಳಜಿಯಿಲ್ಲ ಎಂದಿರುವ ಫವಾದ್ ಹುಸೇನ್, ಭಾರತ ಸರ್ಕಾರವು ರೈತರ ನಡುವೆ ಕಂದಕ ಸೃಷ್ಟಿಸುತ್ತಿದೆ. ನರೇಂದ್ರ ಮೋದಿಯವರ ದೌರ್ಜನ್ಯ ವಿರೋಧಿಸುವವರನ್ನು ಪಾಕಿಸ್ತಾನ್ ಏಜೆಂಟ್ ಎಂದು ಕರೆಯಲಾಗುತ್ತಿದೆ ಎಂದಿದ್ದಾರೆ.

‘ಗಡಿಯ ಆಚೆಗಿರುವ ಪಂಜಾಬಿನ ಸಹೋದರರೇ’ ಎಂದು ಪಂಜಾಬ್ ರೈತರನ್ನು ಸಂಬೋಧಿಸಿರುವ ಅವರು, ಬಹುಶಃ ‘ಗುಜರಾತ್ ಹಿಂದುತ್ವ’ ಸರ್ಕಾರವನ್ನು ಪ್ರಭಾವಿಸಿರಬಹುದು. ಹೀಗಾಗಿ, 12ನೇ ದಿನಕ್ಕೆ ಮುಂದುವರೆದರೂ ಪಂಜಾಬ್ ರೈತರ ಕೂಗು ದೆಹಲಿಗೆ ಕೇಳುತ್ತಿಲ್ಲ. ನರೇಂದ್ರ ಮೋದಿ ನಿರ್ಧಾರಗಳು ಇಡೀ ಪ್ರದೇಶವನ್ನೇ ತೊಂದರೆಗೀಡು ಮಾಡುತ್ತಿವೆ ಎಂದು ಟೀಕಿಸಿದ್ದಾರೆ. ಅಲ್ಲದೇ, ಅನ್ಯಾಯ ಎಲ್ಲೇ ಆಗುತ್ತಿದ್ದರೂ ಪ್ರತಿಭಟಿಸಬೇಕು. ಎಲ್ಲಾ ಭಾರತೀಯರು ಪಂಜಾಬ್ ರೈತರ ಪರ ನಿಲ್ಲಬೇಕು ಎಂದು ಫವಾದ್ ಸಲಹೆ ಮಾಡಿದ್ದಾರೆ.

Published On - 3:25 pm, Mon, 7 December 20

ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ