Hathras Stampede: ಹತ್ರಾಸ್ ಕಾಲ್ತುಳಿತದ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ ‘ಭೋಲೆ ಬಾಬಾ’
bhole baba: ಹತ್ರಾಸ್ ಕಾಲ್ತುಳಿತದಿಂದ ನೂರಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಇದೀಗ ಈ ಘಟನೆಯ ಬಗ್ಗೆ ಸ್ವಯಂ-ಘೋಷಿತ ದೇವಮಾನವ ಭೋಲೆ ಬಾಬಾ ಅವರು ಮಾತನಾಡಿದ್ದಾರೆ. ಈ ಘಟನೆ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. ದುರಂತದ ಬಗ್ಗೆ ಅವರು ಎಎನ್ಐ ಜತೆಗೆ ಮಾತನಾಡಿದ್ದಾರೆ. ಈ ವಿಡಿಯೋದಲ್ಲಿ ಅವರು ಏನು ಮಾತನಾಡಿದ್ದಾರೆ. ಸ್ಥಳದಲ್ಲಿ ಇದ್ದ ಭೋಲೆ ಬಾಬಾ ಘಟನೆ ಬಗ್ಗೆ ವಿವರಿಸಿದ್ದಾರೆ. ಇಲ್ಲಿದೆ ನೋಡಿ
ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ನಡೆದ ಕಾಲ್ತುಳಿತದಲ್ಲಿ 121 ಜನರು ಸಾವನ್ನಪ್ಪಿದ್ದು, ಸ್ವಯಂ-ಘೋಷಿತ ದೇವಮಾನವ ಭೋಲೆ ಬಾಬಾ ಅವರು ಈ ಘಟನೆ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ದೇವರು ನಮಗೆ ಈ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ. ದಯವಿಟ್ಟು ಸರ್ಕಾರ ಮತ್ತು ಅಧಿಕಾರಿಗಳ ಬಗ್ಗೆ ನಂಬಿಕೆ ಇಡಿ. ಹಾಗೂ ಈ ಅವ್ಯವಸ್ಥೆ ಸೃಷ್ಟಿಸಿದ ಯಾರನ್ನೂ ಸರ್ಕಾರ ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಈ ಬಗ್ಗೆ ತನಿಖೆ ಮಾಡಲು ಹಾಗೂ ವ್ಯವಸ್ಥೆ ಬಗ್ಗೆ ಮೇಲ್ವಿಚಾರಣೆ ಮಾಡಲು ಒಂದು ಸಮಿತಿಯನ್ನು ರಚಿಸುವಂತೆ ಸರ್ಕಾರಕ್ಕೆ ನನ್ನ ವಕೀಲ ಎ.ಪಿ. ಸಿಂಗ್ ಮೂಲಕ ಮನವಿ ಮಾಡಿಕೊಂಡಿದ್ದೇನೆ ಎಂದು ಹೇಳಿದರು. ಇನ್ನು ಸಾವನ್ನಪ್ಪಿರುವ ಕುಟುಂಬದ ಜತೆಗೆ ನಿಲ್ಲಬೇಕಿದೆ. ಹಾಗೂ ಜೀವನದುದ್ದಕ್ಕೂ ಅವರಿಗೆ ಸಹಾಯ ಮಾಡಲು ನಾನು ಸಿದ್ಧ ಎಮದು ಹೇಳಿದ್ದಾರೆ.
#WATCH | Hathras Stampede Accident | Mainpuri, UP: In a video statement, Surajpal also known as ‘Bhole Baba’ says, “… I am deeply saddened after the incident of July 2. May God give us the strength to bear this pain. Please keep faith in the government and the administration. I… pic.twitter.com/7HSrK2WNEM
— ANI (@ANI) July 6, 2024
ಹಾಥರಸ್ನಲ್ಲಿ ಧಾರ್ಮಿಕ ಸಮ್ಮೇಳದಲ್ಲಿ ಕಾಲ್ತುಳಿತಕ್ಕೆ ತುತ್ತಾಗಿ ಅನೇಕ ಸಾವನ್ನಪ್ಪಿದ್ದಾರೆ. ಈ ಸಭೆಯಲ್ಲಿ 2.5 ಲಕ್ಷ ಭಕ್ತರ ಸೇರಿದರು. ಭೋಲೆ ಬಾಬಾ ಕೂಡ ಈ ಸಮ್ಮೇಳನದಲ್ಲಿ ಭಾಗವಹಿಸಿದರು. ಈ ಸಮ್ಮೇಳ ಪ್ರಾರಂಭವಾದದ್ದಂತೆ ಒಂದು ಕಡೆಯಿಂದ ನೂಕುನುಗ್ಗಲು ಆರಂಭವಾಗಿ, ಮಹಿಳೆ ಪುರುಷರು ಮಕ್ಕಳು ಮೇಲಿಂದ ಮೇಲೆ ಬೀಳಲು ಪ್ರಾರಂಭವಾಗಿತ್ತು. ಇದರಿಂದ ಅನೇಕರು ಸಾವನ್ನಪ್ಪಿದರು, ಇನ್ನು ಕೇಲವರು ಗಾಯಗೊಂಡಿದರು.
ಇದನ್ನೂ ಓದಿ: ಹತ್ರಾಸ್ ಕಾಲ್ತುಳಿತ; ಹೆಣಗಳ ರಾಶಿ ನೋಡಿ ಹೃದಯಾಘಾತದಿಂದ ಪೊಲೀಸ್ ಸಾವು
ಪ್ರಮುಖ ಆರೋಪಿ ಬಂಧನ
ಇನ್ನು ಈ ಘಟನೆಗೆ ಕಾರಣವಾದ ದೇವಪ್ರಕಾಶ್ ಮಧುಕರ್ ಅವರನ್ನು ದೆಹಲಿಯಲ್ಲಿ ಬಂಧಿಸಲಾಗಿದೆ. ಮಧುಖರ್ ಬಂಧನದೊಂದಿಗೆ ಈ ಪ್ರಕರಣದಲ್ಲಿ ಏಳು ಜನರ ಬಂಧನವಾಗಿದೆ. ದೇವಪ್ರಕಾಶ್ ಮಧುಕರ್ ಈಗಾಗಲೇ ಹೃದಯ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದು, ಎಸ್‌ಐಟಿ ಮತ್ತು ಎಸ್‌ಟಿಎಫ್ ಅಧಿಕಾರಿಗಳ ಸೂಚನೆ ಮೇರೆಗೆ ಅಧಿಕಾರಿಗಳಿಗೆ ಶರಣಾಗಿದ್ದಾರೆ. ಇನ್ನು ಬಗ್ಗೆ ಮಾತನಾಡಿದ ದೇವಪ್ರಕಾಶ್ ಮಧುಕರ್ ನಾನು ಯಾವುದೇ ತಪ್ಪು ಮಾಡಿಲ್ಲ, ನನಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ