ಭೋಪಾಲ್-ದೆಹಲಿ ವಂದೇ ಭಾರತ್ ಎಕ್ಸ್ಪ್ರೆಸ್(Vande Bharat Express)ಗೆ ಹಸು ಡಿಕ್ಕಿ ಹೊಡೆದಿದ್ದು, ರೈಲಿನ ಮುಂಭಾಗಕ್ಕೆ ಹಾನಿಯಂಟಾಗಿದ್ದು, ಮುಗ್ಧ ಹಸು ಕೂಡ ಪ್ರಾಣಬಿಟ್ಟಿದೆ. ಗ್ವಾಲಿಯರ್ನಲ್ಲಿ ಈ ಘಟನೆ ನಡೆದಿದೆ, ದಿಹಜರತ್ ನಿಜಾಮುದ್ದೀನ್-ರಾಣಿ ಕಮಲಾಪತಿ ವಂದೇ ಭಾರತ್ ರೈಲು ಸಂಜೆ 6.15ರ ಸುಮಾರಿಗೆ ಗ್ವಾಲಿಯರ್ನ ದಬ್ರಾ ಕಡೆಗೆ ರೈಲು ಪ್ರಯಾಣಿಸುತ್ತಿದ್ದಾಗ, ಏಕಾಏಕಿ ಹಸು ರೈಲಿನ ಎದುರು ಬಂದಿತ್ತು. ರೈಲನ್ನು 15 ನಿಮಿಷಗಳ ಕಾಲ ನಿಲ್ಲಿಸಲಾಯಿತು. ಹಾನಿಗೊಳಗಾಗಿದ್ದ ರೈಲಿನ ಮುಂಭಾಗವನ್ನು ಸರಿಪಡಿಸಿದ ಬಳಿಕ ರೈಲು ಸಂಚಾರ ಪುನರಾರಂಭಗೊಂಡಿದೆ.
ಏಪ್ರಿಲ್ 1ರಂದು ಪ್ರಧಾನಿ ನರೇಂದ್ರ ಮೋದಿ ಈ ಭಾಗದಲ್ಲಿ ಸೆಮಿ ಹೈಸ್ಪೀಡ್ ರೈಲಿಗೆ ಚಾಲನೆ ನೀಡಿದ್ದರು. ಈ ರೈಲು ಭೋಪಾಲ್ ಹಾಗೂ ದೆಹಲಿಯ ನಡುವೆ ಸಂಚರಿಸುತ್ತದೆ.
ಇತ್ತೀಚೆಗಷ್ಟೇ ರಾಜಸ್ಥಾನದಲ್ಲಿ ವಂದೇ ಭಾರತ್ ರೈಲು ಎರಡು ಜೀವಗಳನ್ನು ಬಲಿ ಪಡೆದಿದೆ. ಅಲ್ವಾರ್ನಲ್ಲಿ ಹಸುವಿಗೆ ಒಂದೇ ಭಾರತ್ ರೈಲು ಡಿಕ್ಕಿ ಹೊಡೆದು ರೈಲ್ವೆ ಹಳಿಯಿಂದ ಸ್ವಲ್ಪ ದೂರದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ವೃದ್ಧರೊಬ್ಬರ ಮೇಲೆ ಆ ಹಸು ಬಿದ್ದು ಇಬ್ಬರೂ ಸಾವನ್ನಪ್ಪಿರುವ ಘಟನೆ ವರದಿಯಾಗಿತ್ತು.
ಮತ್ತಷ್ಟು ಓದಿ: ಎಂಥಾ ಗ್ರಹಚಾರ ನೋಡಿ, ವಂದೇ ಭಾರತ್ ರೈಲು ಡಿಕ್ಕಿ ಹೊಡೆದಿದ್ದು ಹಸುವಿಗೆ ಆದರೆ ಮೃತಪಟ್ಟಿದ್ದು ಇಬ್ಬರು
ರಾಜಸ್ಥಾನದ ಅಲ್ವಾರ್ನ ಅರಾವಳಿ ವಿಹಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಶಿವದಯಾಳ್ ಶರ್ಮಾ ಎಂದು ಗುರುತಿಸಲಾಗಿದೆ. ಇವರು 23 ವರ್ಷಗಳ ಹಿಂದೆ ಭಾರತೀಯ ರೈಲ್ವೆಯಲ್ಲಿ ಎಲೆಕ್ಟ್ರಿಷಿಯನ್ ಹುದ್ದೆಯಿಂದ ನಿವೃತ್ತರಾಗಿದ್ದರು.
ಶಿವದಯಾಳ್ ಸಂಬಂಧಿಕರು ನೀಡಿರುವ ಮಾಹಿತಿ ಪ್ರಕಾರ, ಬೆಳಗ್ಗೆ 8.30ರ ಸುಮಾರಿಗೆ ಹೊರಟಿದ್ದ ವಂದೇ ಭಾರತ್ ರೈಲಿಗೆ ಹಸುವೊಂದು ಅಡ್ಡ ಬಂದಿತ್ತು, ರಭಸಕ್ಕೆ ಹಸುವಿನ ದೇಹ ಒಂದು ಭಾಗವು 30 ಮೀಟರ್ ದೂರದಲ್ಲಿರುವ ಹಳಿಯ ಪಕ್ಕದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ಶಿವ ದಯಾಳ್ ಅವರ ಮೇಲೆ ಬಿದ್ದಿದೆ, ಆಗ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ