ನೀರಿನಲ್ಲಿ ಮುಳುಗುತ್ತಿದ್ದ ಸ್ನೇಹಿತೆಯ ಸಾಕು ನಾಯಿಯನ್ನು ಕಾಪಾಡಲು ಹೋಗಿ ಯುವಕನೊಬ್ಬ ಪ್ರಾಣ ಕಳೆದುಕೊಂಡಿರುವ ಘಟನೆ ಭೋಪಾಲ್ನಲ್ಲಿ ನಡೆದಿದೆ. ನಾಯಿ ಸುರಕ್ಷಿತವಾಗಿ ಈಜಿ ದಡ ಸೇರಿತು ಆದರೆ ಅದನ್ನು ರಕ್ಷಿಸಲು ಹೋಗಿದ್ದ ಯುವಕನ ಪ್ರಾಣಪಕ್ಷಿ ಹಾರಿಹೋಗಿತ್ತು.
ಯುವಕ ಸರಳ್ ನಿಗಮ್ ಎನ್ಐಟಿ ಭೋಪಾಲ್ನಲ್ಲಿ ಬಿ.ಟೆಕ್ ಪಧವೀಧರನಾಗಿದ್ದಾನೆ. ತಂದೆ ತಾಯಿಗೆ ನಿಗಮ್ ಒಬ್ಬನೇ ಮಗ. MANITನಿಂದ ಎಂಜಿನಿಯರಿಂಗ್ ಪದವಿ ಪಡೆದ ಬಳಿಕ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಎನ್ನಲಾಗಿದೆ.
ಸರಳ್ ಇಬ್ಬರು ಮಹಿಳಾ ಸ್ನೇಹಿತರ ಜತೆ ಬೆಳಗ್ಗೆ 7.30ರ ಸುಮಾರಿಗೆ ಕೆರ್ವಾ ಅಣೆಕಟ್ಟು ಪ್ರದೇಶದ ಜಂಗಲ್ ಕ್ಯಾಂಪ್ಗೆ ಹೋಗಿದ್ದರು. ಆ ಮೂವರ ಜತೆಗೆ ನಾಯಿಯೂ ಕೂಡ ಬಂದಿತ್ತು.
ಸುಮಾರು ಒಂದು ಗಂಟೆಯ ನಂತರ ಬೆಳಗ್ಗೆ 8:30 ರ ಸುಮಾರಿಗೆ, ಮೂವರು ಜಲಮೂಲದ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ನಾಯಿಯು ಆಕಸ್ಮಿಕವಾಗಿ ನೀರಿಗೆ ಬಿದ್ದಿತು. ನಾಯಿಯನ್ನು ರಕ್ಷಿಸಲು ಗೆಳೆಯರ ಗುಂಪು ಪರಸ್ಪರ ಕೈ ಹಿಡಿದು ನೀರಿಗೆ ಹಾರಿದ್ದಾರೆ.
ಮತ್ತಷ್ಟು ಓದಿ: ನೆಲಮಂಗಲ: ಹಬ್ಬದ ದಿನವೇ ಈಜಲು ಹೋಗಿದ್ದ ಯುವಕ, ನೀರಿನಲ್ಲಿ ಮುಳುಗಿ ಸಾವು
ಹುಡುಗಿಯರು ನೀರಿನಿಂದ ಹೊರಬರುವಲ್ಲಿ ಯಶಸ್ವಿಯಾದರು ಆದರೆ ಬಲವಾದ ಪ್ರವಾಹದಿಂದ ಸರಳ್ ಆಳವಾದ ನೀರಿನಲ್ಲಿ ಮುಳುಗಿದ್ದಾನೆ. ನಂತರ ಯುವತಿಯರು ಓಡಿ ಹೋಗಿ ಸಹಾಯಕ್ಕಾಗಿ ಕೂಗಿದ್ದಾರೆ,ಕಿರುಚಾಟವನ್ನು ಕೇಳಿದ ಜಂಗಲ್ ಕ್ಯಾಂಪ್‌ನ ವಾಚ್‌ಮನ್ ದಡಕ್ಕೆ ಓಡಿ ಬಂದು ರಾತಿಬಾದ್ ಪೊಲೀಸರಿಗೆ ಮಾಹಿತಿ ನೀಡಿದರು.
ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ಸರಳ್ನ ಸುಳಿವು ಕಾಣಿಸಲಿಲ್ಲ, ಒಂದು ಗಂಟೆಯ ನಂತರ ಆತನ ಶವ ಪತ್ತೆಯಾಗಿದೆ. 10-15 ಅಡಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ. ಸ್ನೇಹಿತೆಯರ ಪೊಲೀಸರು ಮನೆಗೆ ಕಳುಹಿಸಿದ್ದಾರೆ. ಅವರ ಹೇಳಿಕೆಗಳನ್ನು ಇನ್ನೂ ದಾಖಲಿಸಿಕೊಳ್ಳಬೇಕಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ