ಭೋಪಾಲ್​: ಗುಡಿಸಲಿನಿಂದ 6 ತಿಂಗಳ ಮಗುವನ್ನು ಎಳೆದೊಯ್ದು ಕಚ್ಚಿ ಕೊಂದ ಬೀದಿ ನಾಯಿಗಳು

ಬೀದಿ ನಾಯಿಗಳು ಗುಡಿಸಲಿನಿಂದ 6 ತಿಂಗಳ ಮಗುವನ್ನು ಎಳೆದುತಂದು ಕಚ್ಚಿ ಹತ್ಯೆ ಮಾಡಿರುವ ಘಟನೆ ಭೋಪಾಲದಲ್ಲಿ ನಡೆದಿದೆ. ಈ ಘಟನೆ ಬಳಿಕ ಮುನ್ಸಿಪಲ್ ಕಾರ್ಪೊರೇಷನ್ ಬೀದಿ ನಾಯಿಗಳನ್ನು ಹಿಡಿಯಲು ಯೋಜನೆಗಳನ್ನು ರೂಪಿಸಿದೆ. ಈಗಾಗಲೇ ನಾಯಿಗಳ ಹಾವಳಿಯಿಂದ ಭಯದಲ್ಲಿರುವ ಜನರಲ್ಲಿ ಆತಂಕವನ್ನು ಹೆಚ್ಚಿಸಿದೆ.

ಭೋಪಾಲ್​: ಗುಡಿಸಲಿನಿಂದ 6 ತಿಂಗಳ ಮಗುವನ್ನು ಎಳೆದೊಯ್ದು ಕಚ್ಚಿ ಕೊಂದ ಬೀದಿ ನಾಯಿಗಳು
ಬೀದಿನಾಯಿಗಳು
Image Credit source: The Hindu

Updated on: Jan 13, 2024 | 12:34 PM

ಬೀದಿ ನಾಯಿಗಳು(Stray Dogs) ಗುಡಿಸಲಿನಿಂದ 6 ತಿಂಗಳ ಮಗುವನ್ನು ಎಳೆದುತಂದು ಕಚ್ಚಿ ಹತ್ಯೆ ಮಾಡಿರುವ ಘಟನೆ ಭೋಪಾಲದಲ್ಲಿ ನಡೆದಿದೆ. ಈ ಘಟನೆ ಬಳಿಕ ಮುನ್ಸಿಪಲ್ ಕಾರ್ಪೊರೇಷನ್ ಬೀದಿ ನಾಯಿಗಳನ್ನು ಹಿಡಿಯಲು ಯೋಜನೆಗಳನ್ನು ರೂಪಿಸಿದೆ. ಈಗಾಗಲೇ ನಾಯಿಗಳ ಹಾವಳಿಯಿಂದ ಭಯದಲ್ಲಿರುವ ಜನರಲ್ಲಿ ಆತಂಕವನ್ನು ಹೆಚ್ಚಿಸಿದೆ.

ಪಾಲಕರು ಹಾಗೂ ಸ್ಥಳೀಯರು ಮಗುವನ್ನು ಹುಡುಕಲು ಆರಂಭಿಸಿದಾಗ ಅವರ ಗುಡಿಸಲು ಬಳಿ ಇರುವ ಪೊದೆಯಲ್ಲಿ ಶವ ಪತ್ತೆಯಾಗಿತ್ತು, ಕೈ ಸೇರಿದಂತೆ ಹಲವೆಡೆ ಕಚ್ಚಿದ ಗಾಯಗಳಿದ್ದವು. ಮಗುವಿನ ತಂದೆ-ತಾಯಿ ಕೂಲಿ ಕಾರ್ಮಿಕರಾಗಿದ್ದು, ಕೆಲಸಕ್ಕೆ ತೆರಳಿದ್ದ ವೇಳೆ ನಾಯಿಗಳು ಮಗುವಿನ ಮೇಲೆ ದಾಳಿ ನಡೆಸಿವೆ.

ನಗರದಲ್ಲಿ ಬೀದಿ ನಾಯಿಗಳ ದಾಳಿಯ ನಡುವೆಯೇ ಮಿನಲ್ ರೆಸಿಡೆನ್ಸಿ ನೆರೆಹೊರೆಯಲ್ಲಿ ಈ ಘಟನೆ ಸ್ಥಳೀಯರನ್ನು ಕೆರಳಿಸಿದೆ. ಕಳೆದ ಮೂರು ದಿನಗಳಲ್ಲಿ ಭೋಪಾಲ್ 33 ಬೀದಿ ನಾಯಿಗಳ ದಾಳಿಗೆ ಸಾಕ್ಷಿಯಾಗಿದೆ. ಇತ್ತೀಚಿನ ಘಟನೆಯನ್ನು ಗಮನಿಸಿದ ಆಡಳಿತವು ಮೃತರ ಕುಟುಂಬಕ್ಕೆ 1 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿತು.

ಮತ್ತಷ್ಟು ಓದಿ: ಕಲಬುರಗಿ: ಮಿಸ್ಬಾನಗರದಲ್ಲಿ ಐದು ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ!

ಶಿಶುವಿನ ಸಾವಿಗೆ ಸಂಬಂಧಿಸಿದಂತೆ ಎಫ್‌ಐಆರ್ ಅನ್ನು ಸಹ ದಾಖಲಿಸಲಾಗಿದೆ ಎಂದು ಹೇಳಿದರು. ಭೋಪಾಲ್‌ನಲ್ಲಿ ಬೀದಿ ನಾಯಿಗಳನ್ನು ಹಿಡಿಯಲು ಪುರಸಭೆಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ನಾಯಿಗಳನ್ನು ಹಿಡಿಯುವ ಡ್ರೈವ್ ಶುರು ಮಾಡಿದಾಗ ಶ್ವಾನ ಪ್ರಿಯರು ವಿರೋಧ ವ್ಯಕ್ತಪಡಿಸಿದರು.ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಡ್ರೈವ್ ಅನ್ನು ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಬೀದಿನಾಯಿಗಳು ಮಂಗಳವಾರ 27 ಜನರಿಗೆ ಮತ್ತು ಬುಧವಾರ ಹೆಚ್ಚುವರಿ ಆರು ಜನರನ್ನು ಕಚ್ಚಿವೆ. ಸರ್ಕಾರಿ ಜೆಪಿ ಆಸ್ಪತ್ರೆಯಲ್ಲಿ ರೇಬಿಸ್​ ವಿರುದ್ಧ ಸಾಕಷ್ಟು ಮಂದಿ ಲಸಿಕೆ ಪಡೆದಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ