Divya Pahuja: ಕಾಲುವೆಯಲ್ಲಿ ಮಾಜಿ ರೂಪದರ್ಶಿ ದಿವ್ಯಾ ಪಹುಜಾ ಮೃತದೇಹ ಪತ್ತೆ
ಗುರುಗ್ರಾಮದ ಹೋಟೆಲ್‌ನಲ್ಲಿ ಅನುಮಾನಾಸ್ಪದವಾಗಿ ಕೊಲೆಯಾಗಿದ್ದ ಮಾಜಿ ರೂಪದರ್ಶಿ ದಿವ್ಯಾ ಪಹುಜಾ(Divya Pahuja) ಮೃತದೇಹ ಪತ್ತೆಯಾಗಿದೆ. ಹರ್ಯಾಣದ ತೊಹ್ನಾದಲ್ಲಿ ಕಾಲುವೆಯಲ್ಲಿ ಪಹುಜಾ ಮೃತದೇಹ ಪತ್ತೆಯಾಗಿದೆ. ಗುರುಗ್ರಾಮ್ ಪೊಲೀಸರ ಪ್ರಕಾರ, ಪಹುಜಾ ಅವರ ಕುಟುಂಬ ಸದಸ್ಯರು ಆಕೆಯ ದೇಹವನ್ನು ಸಹ ಗುರುತಿಸಿದ್ದಾರೆ.
ಗುರುಗ್ರಾಮದ ಹೋಟೆಲ್‌ನಲ್ಲಿ ಅನುಮಾನಾಸ್ಪದವಾಗಿ ಕೊಲೆಯಾಗಿದ್ದ ಮಾಜಿ ರೂಪದರ್ಶಿ ದಿವ್ಯಾ ಪಹುಜಾ(Divya Pahuja) ಮೃತದೇಹ ಪತ್ತೆಯಾಗಿದೆ. ಹರ್ಯಾಣದ ತೊಹ್ನಾದಲ್ಲಿ ಕಾಲುವೆಯಲ್ಲಿ ಪಹುಜಾ ಮೃತದೇಹ ಪತ್ತೆಯಾಗಿದೆ. ಗುರುಗ್ರಾಮ್ ಪೊಲೀಸರ ಪ್ರಕಾರ, ಪಹುಜಾ ಅವರ ಕುಟುಂಬ ಸದಸ್ಯರು ಆಕೆಯ ದೇಹವನ್ನು ಸಹ ಗುರುತಿಸಿದ್ದಾರೆ. ಗುರುಗ್ರಾಮ ಪೋಲೀಸರ ಆರು ತಂಡಗಳು ಪಹುಜಾಳ ದೇಹವನ್ನು ಹೊರತೆಗೆಯಲು ಕಾರ್ಯಪ್ರವೃತ್ತವಾಗಿದ್ದವು.
ದಿವ್ಯಾಳ ಕೊಲೆಯಾಗಿ 12 ದಿನಗಳ ಬಳಿಕ ಶವ ಪತ್ತೆಯಾಗಿದೆ. ಇಂದು ಬೆಳಗ್ಗೆಯಿಂದ ಪಟಿಯಾಲದ ಎನ್‌ಡಿಆರ್‌ಎಫ್ ತಂಡ ಮತ್ತು ಗುರುಗ್ರಾಮದ ಅಪರಾಧ ವಿಭಾಗದ ತಂಡ ಶೋಧ ಕಾರ್ಯಾಚರಣೆ ಆರಂಭಿಸಿತ್ತು.
ಜನವರಿ 2 ರಂದು ಬಸ್ ನಿಲ್ದಾಣದ ಕಾಂಪ್ಲೆಕ್ಸ್ ಬಳಿಯ ಹೋಟೆಲ್‌ನಲ್ಲಿ ದಿವ್ಯಾಳನ್ನು ಆಕೆಯ ಸ್ನೇಹಿತ ಮತ್ತು ಹೋಟೆಲ್ ಮಾಲೀಕ ಅಭಿಜೀತ್ ಗುಂಡಿಕ್ಕಿ ಹತ್ಯೆ ಮಾಡಿದ್ದರು.
ಗುಂಡಿಕ್ಕಿ ಕೊಂದ ಬಳಿಕ ಶವವನ್ನು ಬಿಎಂಡಬ್ಲ್ಯು ಕಾರಿನಲ್ಲಿಟ್ಟು ಅಭಿಜೀತ್ ಸಹಚರರಾದ ಬಾಲರಾಜ್ ಮತ್ತು ರವಿ ಇಲ್ಲಿಂದ ತೆಗೆದುಕೊಂಡು ಹೋಗಿದ್ದರು.
ಮತ್ತಷ್ಟು ಓದಿ: ಮಾಜಿ ರೂಪದರ್ಶಿ ದಿವ್ಯಾ ಅಹುಜಾ ಹತ್ಯೆ ಪ್ರಕರಣ: ಶವವನ್ನು ನದಿಗೆ ಎಸೆದಿದ್ದ ಆರೋಪಿಯ ಬಂಧನ
ಪೊಲೀಸರು ಸೆಕ್ಟರ್-14 ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಪಟಿಯಾಲ ಬಸ್ ನಿಲ್ದಾಣದ ಆವರಣದಲ್ಲಿ ಬಿಎಂಡಬ್ಲ್ಯು ಕಾರು ನಿಂತಿದ್ದು, ಅಲ್ಲಿಂದ ಬಾಲರಾಜ್ ಮತ್ತು ರವಿ ಕ್ಯಾಬ್ ತೆಗೆದುಕೊಂಡು ಮುಂದೆ ಹೋಗಿದ್ದರು.
ಮಾಜಿ ರೂಪದರ್ಶಿ ದಿವ್ಯಾ ಪಹುಜಾ ಕೊಲೆ ಆರೋಪಿಯನ್ನು ಪಶ್ಚಿಮ ಬಂಗಾಳದಲ್ಲಿ ಪೊಲೀಸರು ಬಂಧಿಸಿದ್ದರು. ಮಾಜಿ ಮಾಡೆಲ್ನ ಶವವನ್ನು ಮತ್ತೊಬ್ಬ ಆರೋಪಿ ರವಿ ಬಾಂದ್ರಾ ಜತೆ ವಿಲೇವಾರಿ ಮಾಡಿದ್ದ ಬಾಲ್ರಾಜ್ ಗಿಲ್ ಗುರುವಾರ ಸಂಜೆ ವಿಮಾನ ನಿಲ್ದಾಣದಲ್ಲಿ ವಿಮಾನ ಹತ್ತಲು ಪ್ರಯತ್ನಿಸುತ್ತಿದ್ದಾಗ ಬಂಧಿಸಲಾಗಿತ್ತು.
ಗುರುಗ್ರಾಮದ ಭೂಗತ ಪಾತಕಿ ಸಂದೀಪ್ ಗಡೋಲಿ ನಕಲಿ ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿ ದಿವ್ಯಾ ಪಹುಜಾಗೆ 7 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಲಾಗಿತ್ತು. ಸ್ವಲ್ಪ ದಿನಗಳ ಹಿಂದಷ್ಟೇ ಜಾಮೀನಿನ ಮೂಲಕ ಹೊರಬಂದಿದ್ದಳು. ಈ ಪ್ರಕರಣಕ್ಕೆ ಸಂಬಂಧಿಸಿ ಹೋಟೆಲ್ ಮಾಲೀಕ ಅಭಿಜಿತ್, ಕೆಲಸಗಾರರಾದ ಹೇಮರಾಜ್, ಓಂ ಪ್ರಕಾಶ್ನನ್ನು ಬಂಧಿಸಲಾಗಿದೆ.
ಗುರುಗ್ರಾಮದ ಭೂಗತ ಪಾತಕಿ ಗಡೋಲಿಯನ್ನು 2016 ಫೆಬ್ರವರಿ 6 ರಂದು ಗುರುಗ್ರಾಮದಲ್ಲಿ ನಡೆದ ಎನ್ಕೌಂಟರ್ನಲ್ಲಿ ಹತ್ಯೆಗೈಯಲಾಗಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:35 am, Sat, 13 January 24