Bhupendra Patel: ಗುಜರಾತ್​​ನ 17ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಭೂಪೇಂದ್ರ ಪಟೇಲ್​

| Updated By: Lakshmi Hegde

Updated on: Sep 13, 2021 | 3:51 PM

Gujarat New CM Oath Taking: ಘಾಟ್​ಲೋಡ್​ ಕ್ಷೇತ್ರದಿಂದ ಮೊದಲ ಬಾರಿ ಶಾಸಕರಾದ ಭೂಪೇಂದ್ರ ಪಟೇಲ್​ರನ್ನು ಬಿಜೆಪಿ ಮುಖ್ಯಮಂತ್ರಿಯನ್ನಾಗಿ ನಿನ್ನೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಆಯ್ಕೆ ಮಾಡಿದೆ.

Bhupendra Patel: ಗುಜರಾತ್​​ನ 17ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಭೂಪೇಂದ್ರ ಪಟೇಲ್​
ಪ್ರಮಾಣ ವಚನ ಸ್ವೀಕರಿಸಿದ ಗುಜರಾತ್​ ಸಿಎಂ ಭೂಪೇಂದ್ರ ಪಟೇಲ್​
Follow us on

ದೆಹಲಿ: ಗುಜರಾತ್​ನ 17ನೇ ಮುಖ್ಯಮಂತ್ರಿಯಾಗಿ ನಿನ್ನೆ ಆಯ್ಕೆಯಾದ ಭೂಪೇಂದ್ರ ಪಟೇಲ್ (59) (Bhupendra Patel) ಇಂದು ಪ್ರಮಾಣ ವಚನ ಸ್ವೀಕರಿಸಿದರು. ನೂತನ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕಾರ ಸಮಾರಂಭವನ್ನು ರಾಜಭವನದಲ್ಲಿ ಆಯೋಜಿಸಲಾಗಿತ್ತು. ರಾಜ್ಯಪಾಲ ಆಚಾರ್ಯ ದೇವವೃತ ಪ್ರತಿಜ್ಞಾ ವಿಧಿ ಬೋಧಿಸಿದರು. ಗೃಹ ಸಚಿವ ಅಮಿತ್​ ಶಾ ಸೇರಿ ಹಲವು ಕೇಂದ್ರ ಸಚಿವರು, ಉಪಮುಖ್ಯಮಂತ್ರಿ ನಿತಿನ್​ ಪಟೇಲ್​, ಹರ್ಯಾಣ ಸಿಎಂ ಮನೋಹರ್​ ಲಾಲ್​ ಖಟ್ಟರ್​, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್​ ಸಿಂಗ್ ಚೌಹಾಣ್​, ಗೋವಾ ಸಿಎಂ ಪ್ರಮೋದ್​ ಸಾವಂತ್​ ಮತ್ತಿತರ ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. 

ಘಾಟ್​ಲೋಡ್​ ಕ್ಷೇತ್ರದಿಂದ ಮೊದಲ ಬಾರಿ ಶಾಸಕರಾದ ಭೂಪೇಂದ್ರ ಪಟೇಲ್​ರನ್ನು ಬಿಜೆಪಿ ಮುಖ್ಯಮಂತ್ರಿಯನ್ನಾಗಿ ನಿನ್ನೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಆಯ್ಕೆ ಮಾಡಿದೆ. ಈ ಸಭೆಗೆ ಕೇಂದ್ರದಿಂದ ಸಚಿವರಾದ ಪ್ರಲ್ಹಾದ್ ಜೋಶಿ ಮತ್ತು ನರೇಂದ್ರ ಸಿಂಗ್​ ತೋಮರ್​ ವೀಕ್ಷಕರಾಗಿ ಆಗಮಿಸಿದ್ದರು. ಇಂದು ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಬೆಳಗ್ಗೆ ಉಪಮುಖ್ಯಮಂತ್ರಿ ನಿತಿನ್​ ಪಟೇಲ್​ರನ್ನು ಭೇಟಿಯಾಗಿದ್ದರು.  ನಂತರ ಸ್ವಾಮಿನಾರಾಯಣ ಗುರುಕುಲಕ್ಕೆ ಭೇಟಿ ನೀಡಿ ಅಲ್ಲಿನ ಸಾಧು, ಸನ್ಯಾಸಿಗಳ ಆಶೀರ್ವಾದ ಪಡೆದಿದ್ದಾರೆ. ಬಳಿಕ ಗೋ ಪೂಜೆ ಕೂಡ ಮಾಡಿದ್ದರು.

ಸಚಿವರ ಪಟ್ಟಿ ಅಂತಿಮವಾಗಿಲ್ಲ
ಮುಖ್ಯಮಂತ್ರಿ ಬದಲಾವಣೆ ಆಗುತ್ತಿದ್ದಂತೆ ಸಚಿವ ಸಂಪುಟದಲ್ಲೂ ಹಲವು ಬದಲಾವಣೆಗಳು ಆಗುತ್ತವೆ. ಕೆಲವರು ಮಂತ್ರಿ ಹುದ್ದೆ ಕಳೆದುಕೊಂಡರೆ, ಹೊಸದಾಗಿ ಕೆಲವರು ಸೇರ್ಪಡೆಯಾಗುತ್ತಾರೆ. ಆದರೆ ಗುಜರಾತ್​ನಲ್ಲಿ ಸದ್ಯ ಇಂದು ಮುಖ್ಯಮಂತ್ರಿಯೊಬ್ಬರೇ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರ ಕೌನ್ಸಿಲ್​​ನ ಸಚಿವರ ಪಟ್ಟಿ ಇನ್ನೂ ಅಂತಿಮವಾಗಿಲ್ಲದ ಕಾರಣ ಆಯ್ಕೆ ಪ್ರಕ್ರಿಯೆ ಮುಗಿದ ಬಳಿಕ ಕೆಲವೇ ದಿನಗಳಲ್ಲಿ ಅವರೂ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.

ದಿಢೀರ್​ ರಾಜೀನಾಮೆ ಕೊಟ್ಟಿದ್ದ ವಿಜಯ್​ ರೂಪಾನಿ
2022ರಲ್ಲಿಗುಜರಾತ್​​ನ ವಿಧಾನಸಭೆ ಚುನಾವಣೆ ನಡೆಯಲಿದೆ. ಹೀಗೆ ಇನ್ನೊಂದೇ ವರ್ಷ ಬಾಕಿ ಇರುವಾಗ ವಿಜಯ್​ ರೂಪಾನಿ ಸಿಎಂ ಸ್ಥಾನಕ್ಕೆ ದಿಢೀರ್​ ರಾಜೀನಾಮೆ ನೀಡಿದ್ದು ಅಚ್ಚರಿಗೆ ಕಾರಣವಾಗಿತ್ತು. ಮುಂದಿನ ಸಿಎಂ ಯಾರಾಗಬಹುದು ಎಂಬ ಪ್ರಶ್ನೆ ಸಿಕ್ಕಾಪಟೆ ಕುತೂಹಲ ಮೂಡಿಸಿತ್ತು. ರೇಸ್​ನಲ್ಲಿದ್ದ ಹಲವು ಪ್ರಮುಖ ಹೆಸರುಗಳೆಲ್ಲ ಹಿಂದೆ ಬಿದ್ದು, ಒಂದೇ ಬಾರಿ ಶಾಸಕರಾದ ಭೂಪೇಂದ್ರ ಪಟೇಲ್​ರನ್ನು ಮುಂದಿನ ಮುಖ್ಯಮಂತ್ರಿಯೆಂದು ಬಿಜೆಪಿ ಘೋಷಿಸಿದ ಬಗ್ಗೆ ಇನ್ನೂ ಕುತೂಹಲ ಇದೆ.

ಇದನ್ನ ಓದಿ: ಸಿಎಂ ಹುದ್ದೆಗೆ ಏರಿದ ಭೂಪೇಂದ್ರ ಪಟೇಲ್​ ಯಾರು?-ರೇಸ್​​ನಲ್ಲಿ ಇಲ್ಲದಿದ್ದರೂ ಹುದ್ದೆಗೇರಿದ ನಾಯಕ

Bhupendra Patel: ಗುಜರಾತ್​ ಮುಂದಿನ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್​

(Bhupendra Patel Takes Oath as 17th CM of Gujarat in a ceremony ahead of Assembly Election)

Published On - 2:53 pm, Mon, 13 September 21