Bhabanipur By polls ‘ಇದು ಅನ್ಯಾಯದ ವಿರುದ್ಧ ಹೋರಾಟ’: ಭವಾನಿಪುರ ಉಪಚುನಾವಣೆಗೆ ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಪ್ರಿಯಾಂಕಾ ಟಿಬರೆವಾಲ್
Priyanka Tibrewal: ಪೂರ್ವ ರಾಜ್ಯದಲ್ಲಿ ಚುನಾವಣೋತ್ತರ ಹಿಂಸಾಚಾರದ ವಿಚಾರಣೆಯಲ್ಲಿ ಕಲ್ಕತ್ತಾ ಹೈಕೋರ್ಟ್‌ನಲ್ಲಿ ತನ್ನ ಪಕ್ಷವನ್ನು ಪ್ರತಿನಿಧಿಸಿದ ಟಿಬರೆವಾಲ್ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಯುವ ಘಟಕವಾದ ಭಾರತೀಯ ಜನತಾ ಯುವ ಮೋರ್ಚಾದ (ಬಿಜೆವೈಎಂ) ಉಪಾಧ್ಯಕ್ಷರಾಗಿದ್ದಾರೆ.
ಕೊಲ್ಕತ್ತಾ: ಪಶ್ಚಿಮ ಬಂಗಾಳದ (West Bengal ) ಭವಾನಿಪುರದಲ್ಲಿ ( Bhabanipur by-polls) ನಡೆಯಲಿರುವ ಉಪಚುನಾವಣೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ವಿರುದ್ಧ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ನ್ಯಾಯವಾದಿ ಪ್ರಿಯಾಂಕಾ ಟಿಬರೆವಾಲ್ (Priyanka Tibrewal) ಇದು ಅನ್ಯಾಯದ ವಿರುದ್ಧದ ಹೋರಾಟ, ಪಶ್ಚಿಮ ಬಂಗಾಳದ ಜನರಿಗೆ ನ್ಯಾಯ ಒದಗಿಸಲಿರುವ ಹೋರಾಟ ಎಂದು ಹೇಳಿದ್ದಾರೆ. ಇದು ಪಶ್ಚಿಮ ಬಂಗಾಳದ ಜನರಿಗಾಗಿ ಅನ್ಯಾಯದ ವಿರುದ್ಧದ ಹೋರಾಟ ಮತ್ತು ನ್ಯಾಯಕ್ಕಾಗಿರುವ ಹೋರಾಟವಾಗಿದೆ. ಭವಾನಿಪುರದ ಜನರಿಗೆ ದೊಡ್ಡ ಅವಕಾಶ ಸಿಕ್ಕಿದೆ ಎಂದು ನಾನು ಹೇಳಲು ಬಯಸುತ್ತೇನೆ. ಹಾಗಾಗಿ, ಅವರು ಮುಂದೆ ಬಂದು ಇತಿಹಾಸ ನಿರ್ಮಿಸಬೇಕು ಎಂದು ಟಿಬರೆವಾಲ್ ನಾಮಪತ್ರ ಸಲ್ಲಿಸುವ ಮುನ್ನ ಹೇಳಿದ್ದಾರೆ. ಪ್ರಿಯಾಂಕಾ ಅವರು ಭವಾನಿಪುರ ಕ್ಷೇತ್ರದಿಂದ ಇಂದು ನಾಮಪತ್ರ ಸಲ್ಲಿಸಿದ್ದಾರೆ.
Alipore, West Bengal: BJP candidate for Bhabanipur by-poll, Priyanka Tibrewal files her nomination. She will face CM and TMC candidate Mamata Banerjee in the by-poll, scheduled for 30th September. pic.twitter.com/M8E3zTtf4j
— ANI (@ANI) September 13, 2021
ಪೂರ್ವ ರಾಜ್ಯದಲ್ಲಿ ಚುನಾವಣೋತ್ತರ ಹಿಂಸಾಚಾರದ ವಿಚಾರಣೆಯಲ್ಲಿ ಕಲ್ಕತ್ತಾ ಹೈಕೋರ್ಟ್‌ನಲ್ಲಿ ತನ್ನ ಪಕ್ಷವನ್ನು ಪ್ರತಿನಿಧಿಸಿದ ಟಿಬರೆವಾಲ್ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಯುವ ಘಟಕವಾದ ಭಾರತೀಯ ಜನತಾ ಯುವ ಮೋರ್ಚಾದ (ಬಿಜೆವೈಎಂ) ಉಪಾಧ್ಯಕ್ಷರಾಗಿದ್ದಾರೆ. ಭವಾನಿಪುರ ಗೋಡೆಯ ಮೇಲೆ ಬಿಜೆಪಿಯ ಚಿಹ್ನೆಯಾದ ಕಮಲದ ವರ್ಣಚಿತ್ರವನ್ನು ಬಿಡಿಸುವ ಮೂಲಕ ಅವರು ಭಾನುವಾರ ಉಪಚುನಾವಣೆಯ ಪ್ರಚಾರವನ್ನು ಆರಂಭಿಸಿದರು. 2014 ರಲ್ಲಿ ಪ್ರಿಯಾಂಕಾ ಬಿಜೆಪಿ ಸೇರಿದ್ದರು.
ಭವಾನಿಪುರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಮಮತಾ ಬ್ಯಾನರ್ಜಿ ಕಳೆದ ಶುಕ್ರವಾರ ನಾಮಪತ್ರವನ್ನು ಸಲ್ಲಿಸಿದ್ದಾರೆ. ಮಮತಾ ಬ್ಯಾನರ್ಜಿ ಈ ವರ್ಷದ ಆರಂಭದಲ್ಲಿ ಎಂಟು ಹಂತಗಳಲ್ಲಿ ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ನಂದಿಗ್ರಾಮದಿಂದ ಸ್ಪರ್ಧಿಸಿ ತಮ್ಮ ಮಾಜಿ ಸಹಾಯಕರಾದ ಬಿಜೆಪಿಯ ಸುವೇಂದು ಅಧಿಕಾರಿಯ ವಿರುದ್ಧ ಪರಾಭವಗೊಂಡಿದ್ದರು.
ಮತ ಎಣಿಕೆ ಮತ್ತು ಫಲಿತಾಂಶ ಘೋಷಣೆಯಾದ ಮೂರು ದಿನಗಳ ನಂತರ ಮೇ 5 ರಂದು ಪ್ರಮಾಣವಚನ ಸ್ವೀಕರಿಸಿದ ಬಂಗಾಳ ಮುಖ್ಯಮಂತ್ರಿ, ನವೆಂಬರ್ 5 ರೊಳಗೆ ರಾಜ್ಯಸಭೆಗೆ ಆಯ್ಕೆಯಾಗಬೇಕಿತ್ತು. ಮಮತಾ ಅನುಪಸ್ಥಿತಿಯಲ್ಲಿ ಭವಾನಿಪುರದಿಂದ ಸ್ಪರ್ಧಿಸಿ ಗೆದ್ದ ಸೋವಂದೇಬ್ ಚಟ್ಟೋಪಾಧ್ಯಾಯ ಅವರು ತಮ್ಮ ಪಕ್ಷದ ಮುಖ್ಯಸ್ಥರಿಂದ ಉಪಚುನಾವಣೆಗೆ ಸ್ಪರ್ಧಿಸಲು ಸ್ಥಾನವನ್ನು ಖಾಲಿ ಮಾಡಿದರು.
ಸೆಪ್ಟೆಂಬರ್ 30 ರಂದು ಉಪಚುನಾವಣೆ ನಡೆಯಲಿದ್ದು, ಮತಗಳ ಎಣಿಕೆ ಮತ್ತು ಫಲಿತಾಂಶ ಘೋಷಣೆ ಅಕ್ಟೋಬರ್ 3 ರಂದು ನಡೆಯಲಿದೆ.
ಇದನ್ನೂ ಓದಿ: Bhabanipur Bypoll: ಭವಾನಿಪುರ ಉಪಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ ಮಮತಾ ಬ್ಯಾನರ್ಜಿ
(West Bengal Bhabanipur by-polls fight for justice for the people of West Bengal says BJP’s Priyanka Tibrewal)
Published On - 2:19 pm, Mon, 13 September 21