ಉಗ್ರನ ದಾಳಿಗೆ ಬಲಿಯಾದ ಪೊಲೀಸ್​ ಅಧಿಕಾರಿಯ ಅಂತ್ಯಕ್ರಿಯೆಯಲ್ಲಿ ಸಾವಿರಾರು ಜನ ಭಾಗಿ; ಡಿಪಿ ಚೇಂಜ್​ ಮಾಡಿದ ಪೊಲೀಸ್ ಸಿಬ್ಬಂದಿ

TV9 Digital Desk

| Edited By: Lakshmi Hegde

Updated on: Sep 13, 2021 | 1:31 PM

Arshid Ashraf Mir: ಅರ್ಷಿದ್​ ಅವರು ಸಸ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದಾರೆ. ತುಂಬ ಪ್ರತಿಭಾವಂತ, ಬುದ್ಧಿವಂತರಾಗಿದ್ದ ಅವರು ವಿದ್ಯಾಭ್ಯಾಸದಲ್ಲೂ ಕೂಡ ಮುಂದಿದ್ದರು. ಎರಡೇ ವರ್ಷಗಳ ಹಿಂದೆ ಪೊಲೀಸ್ ಹುದ್ದೆಗೆ ನೇಮಕಗೊಂಡಿದ್ದರು.

ಉಗ್ರನ ದಾಳಿಗೆ ಬಲಿಯಾದ ಪೊಲೀಸ್​ ಅಧಿಕಾರಿಯ ಅಂತ್ಯಕ್ರಿಯೆಯಲ್ಲಿ ಸಾವಿರಾರು ಜನ ಭಾಗಿ; ಡಿಪಿ ಚೇಂಜ್​ ಮಾಡಿದ ಪೊಲೀಸ್ ಸಿಬ್ಬಂದಿ
ಹುತಾತ್ಮರಾದ ಅರ್ಷಿದ್​ ಅಶ್ರಫ್​
Follow us

ಜಮ್ಮು-ಕಾಶ್ಮಿರದ ಶ್ರೀನಗರದಲ್ಲಿ ನಿನ್ನೆ (ಭಾನುವಾರ) ಉಗ್ರರ ದಾಳಿಗೆ ಹುತಾತ್ಮರಾದ 25ವರ್ಷ ಪೊಲೀಸ್​ ಅಧಿಕಾರಿ ಅರ್ಷಿದ್​ ಅಶ್ರಫ್​ ಮಿರ್(Arshid Ashraf Mir)​​ ಅಂತ್ಯಕ್ರಿಯೆ (Funerals) ಸಾವಿರಾರು ಜನರು ಪಾಲ್ಗೊಂಡು, ಕೊನೇ ಗೌರವ ಸಲ್ಲಿಸಿದ್ದಾರೆ. ಅರ್ಷಿದ್​ ​ ಅವರ ಸ್ವಗ್ರಾಮವಾದ, ಕುಪ್ವಾರಾ ಜಿಲ್ಲೆಯ ಕಲ್ಮೂನಾಕ್ಕೆ ಮೃತದೇಹ ತೆಗೆದುಕೊಂಡು ಹೋಗಿ ಅಲ್ಲಿಯೇ ಅಂತ್ಯಕ್ರಿಯೆ (Arshid Ashraf Mir Funeral) ಮಾಡಲಾಗಿದೆ.  ಪೊಲೀಸರು ವಶಪಡಿಸಿಕೊಂಡಿದ್ದ ವ್ಯಕ್ತಿಯೊಬ್ಬನನ್ನು ನಿನ್ನೆ ವೈದ್ಯಕೀಯ ತಪಾಸಣೆಗಾಗಿ ಅರ್ಷಿದ್​ ಅಶ್ರಫ್​ ನಿನ್ನೆ ಖನ್ಯಾರಕ್ಕೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಪಿಸ್ತೂಲ್​ ಹಿಡಿದು ಬಂದಿದ್ದ ಉಗ್ರನೊಬ್ಬ ಅರ್ಷಿದ್​ರಿಗೆ ಶೂಟ್ ಮಾಡಿದ್ದ. ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.  

ನಾವು ಒಬ್ಬ ಧೈರ್ಯಶಾಲಿ, ಕಿರಿಯ ಅಧಿಕಾರಿಯನ್ನು ಕಳೆದುಕೊಂಡಿದ್ದೇವೆ. ಆರೋಪಿಯೊಬ್ಬನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆತನ ತಪಾಸಣೆ ಮುಗಿದ ಬಳಿಕ ಅರ್ಷಿದ್​ ಹೊರಗೆ ಬಂದಿದ್ದಾರೆ. ಅದೇ ಹೊತ್ತಿಗೆ ಅವರ ಮೇಲೆ ಗುಂಡಿನ ದಾಳಿ ನಡೆದಿದೆ ಎಂದು ಡಿಜಿಪಿ ದಿಲ್​ಬಗ್​ ಸಿಂಗ್​ ವಿಷಾದ ವ್ಯಕ್ತಪಡಿಸಿದ್ದಾರೆ. ದಾಳಿ ನಡೆಸಿದ ಉಗ್ರನ ಗುರುತು ಸ್ಪಷ್ಟವಾಗಿದೆ. ಖಂಡಿತ ಶೀಘ್ರದಲ್ಲೇ ಹಿಡಿಯುತ್ತೇವೆ ಎಂದೂ ಹೇಳಿದ್ದಾರೆ.

ಗ್ರಾಮದಲ್ಲಿ ಮಡುಗಟ್ಟಿದ ದುಃಖ ಅರ್ಷಿದ್​ ಅಶ್ರಫ್​ ಮೃತದೇಹವನ್ನು ಅವರ ಗ್ರಾಮಕ್ಕೆ ತೆಗೆದುಕೊಂಡು ಹೋಗುತ್ತಿದ್ದಂತೆ ಅಲ್ಲಿನ ಜನರೆಲ್ಲ ಅಕ್ಷರಶಃ ಶಾಕ್​ ಆದರು. ಅಲ್ಲಿನ ಪ್ರತಿಯೊಬ್ಬರೂ ಕಣ್ಣೀರು ಹಾಕಿದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾಗಿ ಡೆಕ್ಕನ್​ ಹೆರಾಲ್ಡ್​ ವರದಿ ಮಾಡಿದೆ. ‘ಅರ್ಷಿದ್ ಈ ಮಣ್ಣಿನ ಮಗ, ಅವರನ್ನು ಉಗ್ರ ಕೊಂದಿದ್ದಾನೆಂದರೆ ನಂಬಲು ಆಗುತ್ತಿಲ್ಲ..ನಮಗೆಲ್ಲ ತುಂಬ ಶಾಕ್​ ಆಗಿದೆ’ ಎಂದೇ ಗ್ರಾಮಸ್ಥರು ಆಕ್ರಂದಿಸುತ್ತಿದ್ದಾರೆ ಎಂದು ಹಲವು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಅರ್ಷಿದ್​ ಅವರು ಸಸ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದಾರೆ. ತುಂಬ ಪ್ರತಿಭಾವಂತ, ಬುದ್ಧಿವಂತರಾಗಿದ್ದ ಅವರು ವಿದ್ಯಾಭ್ಯಾಸದಲ್ಲೂ ಕೂಡ ಮುಂದಿದ್ದರು. ಎರಡೇ ವರ್ಷಗಳ ಹಿಂದೆ ಪೊಲೀಸ್ ಹುದ್ದೆಗೆ ನೇಮಕಗೊಂಡಿದ್ದರು. ವೃತ್ತಿಯಲ್ಲೂ ಸಹ ಹಿರಿಯ ಅಧಿಕಾರಿಗಳಿಂದ ಶಹಬ್ಬಾಸ್​ ಎನ್ನಿಸಿಕೊಂಡಿದ್ದರು. ಇಂದು ಅವರ ಮೃತದೇಹವನ್ನು ಹೊತ್ತು ಹೋದ ಪೊಲೀಸ್ ಸಿಬ್ಬಂದಿಯ ಕಣ್ಣಲ್ಲೂ ನೀರು ಜಿನುಗಿತ್ತು. ಹಾಗೇ, ಮೃತ ಅಧಿಕಾರಿಯ ತಂದೆ, ಮೊಹಮ್ಮದ್​ ಅಶ್ರಫ್​ ಮಿರ್​ ಕೂಡ ಗೋಳಾಡಿದ್ದಾರೆ. ‘ನನ್ನ ಮಗನ ತಪ್ಪು ಏನಿತ್ತು? ಈ ಎರಡು ವರ್ಷದ ಸೇವೆಯಲ್ಲಿ ಅವನು ಮಾಡಿದ ತಪ್ಪೇನು’ ಎಂದು ಕಣ್ಣೀರು ಹಾಕಿದ್ದಾರೆ.

ಟ್ವಿಟರ್​​ನಲ್ಲಿ ಟ್ರೆಂಡ್ ಆಯ್ತು  WeAreAllArshid ಹ್ಯಾಷ್​ಟ್ಯಾಗ್​ ಅರ್ಷಿದ್​ ಹತ್ಯೆಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರವಾಗಿ ಖಂಡಿಸಲಾಗುತ್ತಿದೆ. ಈ ಮೂಲಕ ಉಗ್ರ ದಾಳಿಯನ್ನು ವಿರೋಧಿಸಲಾಗುತ್ತಿದೆ. WeAreAllArshid ಹ್ಯಾಷ್​ಟ್ಯಾಗ್​ ಟ್ವಿಟರ್​​ನಲ್ಲಿ ಟ್ರೆಂಡ್ ಆಗುತ್ತಿದೆ. ಸ್ಥಳೀಯ ಹಿರಿಯ ಪೊಲೀಸ್​ ಅಧಿಕಾರಿಗಳು ಅನೇಕರು ತಮ್ಮ ಟ್ವಿಟರ್​ ಡಿಸ್​ಪ್ಲೇ ನಲ್ಲಿ ಅರ್ಷಿದ್ ಅಶ್ರಫ್​ ಫೋಟೋ ಹಾಕಿಕೊಂಡಿದ್ದಾರೆ. ಅನೇಕರು ಯುವ ಅಧಿಕಾರಿಯ ಫೋಟೋವನ್ನೂ ಶೇರ್ ಮಾಡಿಕೊಂಡಿದ್ದಾರೆ.  ಇನ್ನು ಕೊವಿಡ್​ 19 ನಿಯಮಗಳನ್ನೆಲ್ಲ ಬದಿಗೊತ್ತಿ ಸಾವಿರಾರು ಜನರು ಅರ್ಷಿದ್​ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಅವರೆಷ್ಟು ಜನಪ್ರಿಯರಾಗಿದ್ದರು ಎಂಬುದನ್ನು ತೋರಿಸಿದ್ದಾರೆ. ಅದಕ್ಕೂ ಮೊದಲು ಜಿಲ್ಲಾ ಪೊಲಿಸ್​ ಕಚೇರಿಯಲ್ಲಿ ಮೃತ ಅಧಿಕಾರಿಗೆ ಪುಷ್ಪ ನಮನವನ್ನೂ ಸಲ್ಲಿಸಲಾಯಿತು. ಅದರಲ್ಲಿ ನಾಗರಿಕ ಆಡಳಿತ, ಪೊಲೀಸ್​ ಮತ್ತು ಇತರ ರಕ್ಷಣಾ ಸಿಬ್ಬಂದಿ, ಜಮ್ಮು-ಕಾಶ್ಮೀರ ಡಿಜಿಪಿ ಪಾಲ್ಗೊಂಡು ಅರ್ಷಿದ್​ಗೆ ಗೌರವ ಸಲ್ಲಿಸಿದರು.

ಇದನ್ನೂ ಓದಿ: ಈಶ್ವರಪ್ಪಗೂ, ನನಗೂ ಲವ್ ಆ್ಯಂಡ್ ಹೇಟ್ ಫ್ರೆಂಡ್​ಶಿಪ್​ ಇದೆ ಎಂದ ವಿಪಕ್ಷ ನಾಯಕ ಸಿದ್ದರಾಮಯ್ಯ

PAN Card: ಕೇವಲ 10 ನಿಮಿಷದಲ್ಲಿ ಉಚಿತವಾಗಿ ಪ್ಯಾನ್ ಕಾರ್ಡ್ ಪಡೆಯಬಹುದು; ವಿವರ ಇಲ್ಲಿದೆ

ತಾಜಾ ಸುದ್ದಿ

Click on your DTH Provider to Add TV9 Kannada