ಕೊವಿಡ್ ಮೂರನೇ ಅಲೆಯ ಸಾಧ್ಯತೆ ಕಡಿಮೆಯಿದ್ದರೂ ಶಾಲೆ ಮರು ಆರಂಭಕ್ಕೆ ಆತುರ ಬೇಡ; ವಿಜ್ಞಾನಿಗಳ ಸಲಹೆ

ಕೊರೊನಾ 3ನೇ ಅಲೆಯ ತೀವ್ರತೆ ಕಡಿಮೆ ಇರುತ್ತದೆ ಎಂದ ಮಾತ್ರಕ್ಕೆ ಶಾಲೆಗಳ ಮರು ಆರಂಭಕ್ಕೆ ಆತುರ ಬೇಡ. ಏಕೆಂದರೆ ಕೊವಿಡ್ 3ನೇ ಅಲೆಯ ತೀವ್ರತೆ ಕಡಿಮೆ ಇದ್ದರೂ ಮಕ್ಕಳ ಮೇಲೆ ವಯಸ್ಕರಿಗಿಂತಲೂ ಗಂಭೀರ ಪರಿಣಾಮ ಬೀರಲಿದೆ. ಹೀಗಾಗಿ, ಮಕ್ಕಳ ಆರೋಗ್ಯದ ವಿಷಯದಲ್ಲಿ ಆತುರ ಬೇಡ ಎಂದು ಡಾ. ರಮಣ್ ಹೇಳಿದ್ದಾರೆ.

ಕೊವಿಡ್ ಮೂರನೇ ಅಲೆಯ ಸಾಧ್ಯತೆ ಕಡಿಮೆಯಿದ್ದರೂ ಶಾಲೆ ಮರು ಆರಂಭಕ್ಕೆ ಆತುರ ಬೇಡ; ವಿಜ್ಞಾನಿಗಳ ಸಲಹೆ
ಡಾ. ರಮಣ ಗಂಗಾಖೇಡ್ಕರ್

ನವದೆಹಲಿ: ಭಾರತದಲ್ಲಿ ಕೊರೊನಾ 3ನೇ ಅಲೆ ಹರಡುವ ಸಾಧ್ಯತೆ ಬಹಳ ಕಡಿಮೆ ಇದೆ. ಒಂದುವೇಳೆ ಕೊವಿಡ್ 3ನೇ ಅಲೆ ಕಾಣಿಸಿಕೊಂಡರೂ ಅದು 2ನೇ ಅಲೆಯ ಪರಿಣಾಮಕ್ಕಿಂತಲೂ ಕಡಿಮೆ ಇರುತ್ತದೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ವಿಜ್ಞಾನಿ ಡಾ. ರಮಣ ಗಂಗಾಖೇಡ್ಕರ್ ತಿಳಿಸಿದ್ದಾರೆ.

ಕೊರೊನಾ 3ನೇ ಅಲೆಯ ತೀವ್ರತೆ ಕಡಿಮೆ ಇರುತ್ತದೆ ಎಂದ ಮಾತ್ರಕ್ಕೆ ಶಾಲೆಗಳ ಮರು ಆರಂಭಕ್ಕೆ ಆತುರ ಬೇಡ. ಏಕೆಂದರೆ ಕೊವಿಡ್ 3ನೇ ಅಲೆಯ ತೀವ್ರತೆ ಕಡಿಮೆ ಇದ್ದರೂ ಮಕ್ಕಳ ಮೇಲೆ ವಯಸ್ಕರಿಗಿಂತಲೂ ಗಂಭೀರ ಪರಿಣಾಮ ಬೀರಲಿದೆ. ಹೀಗಾಗಿ, ಮಕ್ಕಳ ಆರೋಗ್ಯದ ವಿಷಯದಲ್ಲಿ ಆತುರ ಬೇಡ ಎಂದು ಡಾ. ರಮಣ್ ಹೇಳಿದ್ದಾರೆ.

ಆಯಾ ಏರಿಯಾಗಳಲ್ಲಿ ಕೊರೊನಾ ಕೇಸುಗಳು ಎಷ್ಟಿವೆ ಎಂಬುದರ ಆಧಾರದ ಮೇಲೆ ಶಾಲೆಗಳನ್ನು ತೆರೆಯಬೇಕೋ ಬೇಡವೋ ಎಂಬುದನ್ನು ಸ್ಥಳೀಯ ಅಧಿಕಾರಿಗಳು ನಿರ್ಧಾರ ಮಾಡಬೇಕು. ಈ ಕೊರೊನಾವೈರಸ್ ಸಂಪೂರ್ಣವಾಗಿ ನಾಶವಾಗುವಂಥದ್ದಲ್ಲ. ಇದು ವೈರಲ್ ಜ್ವರದ ರೀತಿ ಇನ್ನು ನಮ್ಮ ಜೊತೆಗೇ ಇರುತ್ತದೆ. ಈಗ ಕೊವಿಡ್ ಲಸಿಕೆಗಳನ್ನು ತೆಗೆದುಕೊಳ್ಳುತ್ತಿರುವುದರಿಂದ ಜನರಿಗೆ ಕೊರೊನಾ ರೋಗದ ಲಕ್ಷಣಗಳು ಗೋಚರಿಸದೆ ಇರಬಹುದು. ಹಾಗೆಂದು ಅವರಿಗೆ ಕೊರೊನಾ ಇಲ್ಲವೇ ಇಲ್ಲ ಎಂದು ಅರ್ಥವಲ್ಲ. ಅಸಿಂಪ್ಟಮ್ಯಾಟಿಕ್ ಆಗಿಯೇ ಜನರಲ್ಲಿ ಕೊರೊನಾ ಸೋಂಕು ಇರುವ ಸಾಧ್ಯತೆಗಳಿರುತ್ತವೆ. ರೋಗ ಲಕ್ಷಣಗಳಿಲ್ಲದ ಹಿನ್ನೆಲೆಯಲ್ಲಿ ಅವರು ವೈದ್ಯಕೀಯ ತಪಾಸಣೆಗೂ ಹೋಗುವುದಿಲ್ಲ. ಇದರಿಂದ ಕೊರೊನಾ ಕೇಸುಗಳ ಸಂಖ್ಯೆ ಇಳಿಮುಖವಾಗುವ ಸಾಧ್ಯತೆಯೂ ಇರುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಒಂದುವೇಳೆ ಕೊವಿಡ್ ಕೇಸುಗಳ ಸಂಖ್ಯೆ ಹೆಚ್ಚಾದರೂ ಜಾಸ್ತಿಯೇನೂ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಹೊಸ ರೂಪಾಂತರಿ ವೈರಸ್ ಕಾಣಿಸಿಕೊಂಡರೆ ಮಾತ್ರ ಕೊಂಚ ಭಯಪಡಬೇಕಾದೀತು. ಏಕೆಂದರೆ ರೂಪಾಂತರಿ ಸೋಂಕಿನ ಮೇಲೆ ಕೊರೊನಾ ಲಸಿಕೆ ಕೆಲಸ ಮಾಡುವುದಿಲ್ಲ. ಕೊರೊನಾ ಸೋಂಕಿನಿಂದ ಪಾರಾಗಲು ಪ್ರತಿಯೊಬ್ಬರೂ ಲಸಿಕೆ ಪಡೆಯುವುದು ಅತ್ಯಗತ್ಯ ಎಂದು ಡಾ. ರಮಣ ಹೇಳಿದ್ದಾರೆ.

ಕರ್ನಾಟಕದಲ್ಲಿ ಕೊರೊನಾ ಕೇಸುಗಳ ಸಂಖ್ಯೆ ಕೊಂಚ ಕಡಿಮೆಯಾಗುತ್ತಿದೆ. ಕಳೆದೊಂದು ವಾರದಿಂದ ಕೊವಿಡ್ ಕೇಸುಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಮೂರು ಜಿಲ್ಲೆಗಳಲ್ಲಿ ಜಾರಿಯಲ್ಲಿದ್ದ ವೀಕೆಂಡ್ ಕರ್ಫ್ಯೂವನ್ನು ಕೂಡ ತೆರವುಗೊಳಿಸಲಾಗಿದೆ. ಆದರೂ ಮುಂದಿನ ತಿಂಗಳು ಅಂದರೆ ಅಕ್ಟೋಬರ್​ನಲ್ಲಿ ಕರ್ನಾಟಕದಲ್ಲಿ ಕೊವಿಡ್ ಮೂರನೇ ಅಲೆ ಶುರುವಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ತಾಂತ್ರಿಕ ಸಲಹಾ ಸಮಿತಿ ಎಚ್ಚರಿಕೆ ನೀಡಿದೆ.

ಕರ್ನಾಟಕದಲ್ಲಿ ಅಕ್ಟೋಬರ್​- ನವೆಂಬರ್ ತಿಂಗಳಲ್ಲಿ ಕೊರೊನಾ ಮೂರನೇ ಅಲೆ ವಿಪರೀತವಾಗಲಿದೆ ಎಂದು ತಿಳಿಸಿರುವ ತಾಂತ್ರಿಕ ಸಲಹಾ ಸಮಿತಿ ಕರ್ನಾಟಕದಲ್ಲಿ ಕೊವಿಡ್ ನಿಯಮಾವಳಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿತ್ತು. ಒಂದುವೇಳೆ ರಾಜ್ಯದಲ್ಲಿ ಕೊರೊನಾ ಮಾರ್ಗಸೂಚಿಗಳನ್ನು ಸರಿಯಾಗಿ ಜಾರಿಗೆ ತರದಿದ್ದರೆ ಮುಂದೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಕೆ ನೀಡಿತ್ತು.

ಕೊರೊನಾ ಮೂರನೇ ಅಲೆ ಮಕ್ಕಳಿಗೆ ಕಂಟಕವಾಗುವ ಸಾಧ್ಯತೆ ಇದ್ದು, ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳಿಗೆ ಸೋಂಕು ಹರಡಲಿದೆ ಎಂದು ತಜ್ಞರು ಈ ಹಿಂದೆ ಎಚ್ಚರಿಕೆ ನೀಡಿದ್ದರು. ಎರಡನೇ ಅಲೆಯ ಸಂದರ್ಭದಲ್ಲಿ ಸೋಂಕಿತರಾದ ಮಕ್ಕಳ ಸಂಖ್ಯೆಗಿಂತಲೂ 7 ಪಟ್ಟು ಈ ಬಾರಿ ಸೋಂಕಿತರ ಮಕ್ಕಳ ಪ್ರಮಾಣ ಹೆಚ್ಚಾಗಲಿದೆ ಎಂದು ತಜ್ಞರು ಸುಳಿವು ನೀಡಿದ್ದರು.

ಇದನ್ನೂ ಓದಿ: Covid 19 Karnataka Update: ಕರ್ನಾಟಕದ 803 ಮಂದಿಗೆ ಕೊರೊನಾ ಸೋಂಕು, 17 ಸಾವು

Karnataka Coronavirus: ಕರ್ನಾಟಕದಲ್ಲಿ ಮುಂದಿನ ತಿಂಗಳು ಕೊವಿಡ್ ಮೂರನೇ ಅಲೆ ಶುರು; ತಾಂತ್ರಿಕ ಸಲಹಾ ಸಮಿತಿ ಎಚ್ಚರಿಕೆ

(COVID-19 Cases Chances of 3rd Wave Very Low Yet Reopening Schools Should not be Rushed says Top Scientist)

Click on your DTH Provider to Add TV9 Kannada