ದೆಹಲಿಯಲ್ಲಿ 4 ಅಂತಸ್ತಿನ ಕಟ್ಟಡ ಕುಸಿತ; ಇಬ್ಬರು ಮಕ್ಕಳು ಸೇರಿ ಮೂವರ ರಕ್ಷಣೆ; ರಕ್ಷಣಾ ಕಾರ್ಯಾಚರಣೆ ಮುಂದುವರಿಕೆ
ಘಟನೆ ನಡೆದ ಸ್ಥಳಕ್ಕೆ 5 ಅಗ್ನಿಶಾಮಕ ದಳದ ವಾಹನಗಳು ಬಂದಿವೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಸದ್ಯಕ್ಕೆ ಓರ್ವ ವೃದ್ಧ, ಇಬ್ಬರು ಮಕ್ಕಳನ್ನು ರಕ್ಷಣೆ ಮಾಡಲಾಗಿದೆ.
ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 4 ಅಂತಸ್ತಿನ ಕಟ್ಟಡವೊಂದು ಕುಸಿದ ಪರಿಣಾಮ ಮಕ್ಕಳು ಸೇರಿದಂತೆ ಹಲವು ಜನರು ಕಟ್ಟಡದ ಅವಶೇಷಗಳಡಿ ಸಿಲುಕಿದ್ದರು. ಉತ್ತರ ದೆಹಲಿಯ ಸಬ್ಜಿ ಮಂಡಿ ಪ್ರದೇಶದಲ್ಲಿ ಉಂಟಾಗಿರುವ ಈ ದುರಂತದಲ್ಲಿ ಈಗಾಗಲೇ ಮೂವರನ್ನು ರಕ್ಷಣೆ ಮಾಡಲಾಗಿದೆ. ಎನ್ಡಿಆರ್ಎಫ್ ಸಿಬ್ಬಂದಿ ಸೇರಿದಂತೆ ದೆಹಲಿ ಪೊಲೀಸರು, ಅಗ್ನಿಶಾಮಕ ದಳದವರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ 5 ಅಗ್ನಿಶಾಮಕ ದಳದ ವಾಹನಗಳು ಬಂದಿವೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಸದ್ಯಕ್ಕೆ ಓರ್ವ ವೃದ್ಧ, ಇಬ್ಬರು ಮಕ್ಕಳನ್ನು ರಕ್ಷಣೆ ಮಾಡಲಾಗಿದೆ. ಈ ಘಟನೆ ನಡೆದಾಗ ಕಟ್ಟಡದಲ್ಲಿ 4ರಿಂದ 5 ಜನರು ಇದ್ದರು ಎನ್ನಲಾಗಿದೆ. ಅವರು ಕಟ್ಟಡದ ಕೆಳಗೆ ಸಿಲುಕಿದ್ದಾರೆ ಎನ್ನಲಾಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಇದೇ ವೇಳೆ ಕಟ್ಟಡದ ಬಳಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಮಕ್ಕಳು ಕೂಡ ಕಟ್ಟಡದ ಅವಶೇಷಗಳಡಿ ಸಿಲುಕಿದ್ದರು. ಹಾಗೇ, ಕಟ್ಟಡದ ಕೆಳಗೆ ನಿಲ್ಲಿಸಿದ್ದ ಕಾರು ಕೂಡ ಕಟ್ಟಡದ ಕೆಳಗೆ ಸಿಲುಕಿದೆ.
A four-storey building collapsed in the Sabzi Mandi area. One person has been rescued and taken to the hospital. More details awaited: Delhi Police
— ANI (@ANI) September 13, 2021
ಪ್ರತ್ಯಕ್ಷದರ್ಶಿಯ ಪ್ರಕಾರ, ಇದ್ದಕ್ಕಿದ್ದಂತೆ ಕಟ್ಟಡ ಶೇಕ್ ಆಗಿದ್ದು, ಆಗ ಕರೆಂಟ್ ಕೂಡ ಹೋಯಿತು. ನಂತರ ಕಟ್ಟಡ ನೆಲಸಮವಾಯಿತು. ಕಟ್ಟಡದ ಬಳಿ ಹೋಗುತ್ತಿದ್ದ ಮಕ್ಕಳ ಮೇಲೆ ಕೂಡ ಕಟ್ಟಡದ ಭಾಗಗಳು ಸಿಲುಕಿವೆ ಎಂದಿದ್ದಾರೆ.
#UPDATE | A total of 3 persons including 2 children have been rescued till now from under the debris after a four-storey building collapsed in Delhi’s Sabzi Mandi area: Fire Department, Delhi.
Rescue operation underway pic.twitter.com/BsSgtAq7k8
— ANI (@ANI) September 13, 2021
ಸಬ್ಜಿ ಮಂಡಿ ಪ್ರದೇಶದಲ್ಲಿ ಕಟ್ಟಡ ಕುಸಿದಿರುವ ಘಟನೆ ಬಹಳ ಬೇಸರದ ಸಂಗತಿ. ರಕ್ಷಣಾ ಕಾರ್ಯಾಚರಣೆಗೆ ದೆಹಲಿ ಆಡಳಿತಾಧಿಕಾರಿಗಳು ಬಹಳ ಪ್ರಯತ್ನಿಸುತ್ತಿದ್ದಾರೆ. ನಾನೇ ಖುದ್ದಾಗಿ ಪರಿಸ್ಥಿತಿಯ ಬಗ್ಗೆ ಗಮನ ಹರಿಸುತ್ತಿದ್ದೇನೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
#UPDATE | Teams of local police, MCD, NDRF among others are present to undertake rescue operation. We need time to assess number of people stuck under debris. One person rescued so far. He sustained head injury &has been sent to hospital: NS Bundela, Joint CP, Central Range,Delhi pic.twitter.com/pUxqzOYT4L
— ANI (@ANI) September 13, 2021
ಇದನ್ನೂ ಓದಿ: 9 ಹರೆಯದ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ; ಮೆಜಿಸ್ಟೀರಿಯಲ್ ತನಿಖೆಗೆ ಅರವಿಂದ್ ಕೇಜ್ರಿವಾಲ್ ಆದೇಶ
‘ಉತ್ತರಾಖಂಡ ರಾಜ್ಯದ ಜನರಿಗಾಗಿ ನಾಳೆ ಬಹುದೊಡ್ಡ ಘೋಷಣೆ ಮಾಡಲಿದ್ದೇನೆ’ -ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಟ್ವೀಟ್
(Building collapses in North Delhi including 2 children 3 People have been Rescued)
Published On - 2:44 pm, Mon, 13 September 21