ಸುಪ್ರೀಂ ಕೋರ್ಟ್ ರಚಿಸಿದ ಸಮಿತಿಯ ಸದಸ್ಯತ್ವ ನಿರಾಕರಿಸಿದ ಭೂಪೇಂದರ್ ಸಿಂಗ್ ಮನ್

ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಡಿಸೆಂಬರ್ ನಲ್ಲಿ ರಚಿಸಿದ್ದ ಕೃಷಿ ಕಾಯ್ದೆ ಪರ ಸಮಿತಿಯಲ್ಲಿ ಭೂಪೇಂದರ್ ಸಿಂಗ್ ಮನ್ ಅವರು ಸಹ ಸದಸ್ಯರಾಗಿದ್ದರು. ಹೀಗಾಗಿ, ಭೂಪೇಂದರ್ ಸಿಂಗ್ ಮನ್ ಅವರನ್ನೂ ಸೇರಿ ಸಮಿತಿ ಸದಸ್ಯರ ಬಗ್ಗೆ ರೈತ ಒಕ್ಕೂಟಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಈ ಬೆನ್ನಲ್ಲೇ ಭೂಪೇಂದರ್ ಸಿಂಗ್ ಮನ್ ಪ್ರತಿಕ್ರಿಯೆ ನೀಡಿದ್ದಾರೆ.

ಸುಪ್ರೀಂ ಕೋರ್ಟ್ ರಚಿಸಿದ ಸಮಿತಿಯ ಸದಸ್ಯತ್ವ ನಿರಾಕರಿಸಿದ ಭೂಪೇಂದರ್ ಸಿಂಗ್ ಮನ್
ಭೂಪೇಂದರ್ ಸಿಂಗ್ ಮನ್ ( ಟ್ವಿಟ್ಟರ್)
Follow us
guruganesh bhat
|

Updated on:Jan 14, 2021 | 5:21 PM

ದೆಹಲಿ:  ಕೃಷಿ ಕಾಯ್ದೆಗಳ ಪರ ಒಲವು ವ್ಯಕ್ತಪಡಿಸಿದ್ದ  ಮಾಜಿ ಸಂಸದ ಮತ್ತು ಭಾರತೀಯ ಕಿಸಾನ್ ಯೂನಿಯನ್​ನ ಅಧ್ಯಕ್ಷರೂ ಆಗಿರುವ ಭೂಪೇಂದರ್ ಸಿಂಗ್ ಮನ್ , ಸುಪ್ರೀಂ ಕೋರ್ಟ್ ನೇಮಿಸಿರುವ ತಜ್ಞರ ಸಮಿತಿಯ ಸದಸ್ಯತ್ವ ನಿರಾಕರಿಸಿದ್ದಾರೆ.  ತಮ್ಮನ್ನು ಆಯ್ಕೆಮಾಡಿರುವ ಸುಪ್ರೀಂಕೋರ್ಟ್​ಗೆ ಧನ್ಯವಾದ ತಿಳಿಸಿರುವ ಅವರು, ಈ ಸಮಿತಿಯಿಂದ ನಿರ್ಗಮಿಸುವುದಾಗಿ ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಮತ್ತು ದೆಹಲಿ ಚಲೋ ಚಳುವಳಿಕಾರರ ನಡುವೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ತಜ್ಞರ ಸಮಿತಿ ರಚಿಸಿತ್ತು. ರೈತ ಒಕ್ಕೂಟಗಳು ಮತ್ತು ಕೇಂದ್ರ ಸರ್ಕಾರ ತಜ್ಞರ ಸಮಿತಿಯಿಂದ ಒಮ್ಮತ ಪಡೆಯಲಿ ಎಂದು ನ್ಯಾಯಪೀಠ ತಿಳಿಸಿತ್ತು. ರೈತನೂ ಆಗಿರುವ ನಾನು, ಸಾರ್ವಜನಿಕರ ಭಾವನೆ ಮತ್ತು ಆತಂಕಗಳನ್ನು ಗಮನಿಸಿ ಪಂಜಾಬ್ ಮತ್ತು ರೈತರ ಹಿತಾಸಕ್ತಿಗಳಿಗೆ ಧಕ್ಕೆಯಾಗದಂತೆ ಯಾವುದೇ ಸ್ಥಾನವನ್ನು ತ್ಯಾಗಮಾಡಲು  ಸಿದ್ಧನಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಭೂಪೇಂದರ್ ಸಿಂಗ್ ಮನ್ ಬರೆದ ಪತ್ರ

ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಡಿಸೆಂಬರ್ ನಲ್ಲಿ ರಚಿಸಿದ್ದ ಕೃಷಿ ಕಾಯ್ದೆ ಪರ ಸಮಿತಿಯಲ್ಲಿ ಭೂಪೇಂದರ್ ಸಿಂಗ್ ಮನ್ ಅವರು ಸಹ ಸದಸ್ಯರಾಗಿದ್ದರು. ಹೀಗಾಗಿ, ಭೂಪೇಂದರ್ ಸಿಂಗ್ ಮನ್ ಅವರನ್ನೂ ಸೇರಿ ಸಮಿತಿ ಸದಸ್ಯರ ಬಗ್ಗೆ ರೈತ ಒಕ್ಕೂಟಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಈ ಬೆನ್ನಲ್ಲೇ ಭೂಪೇಂದರ್ ಸಿಂಗ್ ಮನ್ ಪ್ರತಿಕ್ರಿಯೆ ನೀಡಿದ್ದಾರೆ.

1990 ರಿಂದ 96 ರ ಅವಧಿಗೆ ರಾಜ್ಯಸಭಾ ಸಂಸದರಾಗಿ ಸೇವೆ ಸಲ್ಲಿಸಿದ್ದ ಭೂಪೇಂದರ್ ಸಿಂಗ್ ಮನ್, 2012, 2017 ಮತ್ತು 2019 ರ ಲೋಕಸಭಾ ಚುನಾವಣೆಗಳಲ್ಲಿ ಪಂಜಾಬ್​ನಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದರು. ಅಲ್ಲದೇ, ಕೃಷಿ ಕಾಯ್ದೆಗಳ ಪರ ಒಲವು ವ್ಯಕ್ತಪಡಿಸಿದ್ದರು. 81 ರ ವಯೋಮಾನದ ಅವರು, 1980 ರ ದಶಕದಲ್ಲಿ ಆಲ್ ಇಂಡಿಯಾ ಕಿಸಾನ್ ಕೋರ್ಡಿನೇಶನ್ ಕಮಿಟಿಯ ಸ್ಥಾಪಕ ಅಧ್ಯಕ್ಷರಾಗಿದ್ದಾರೆ. ಜತೆಗೆ ಹಾಲಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

Delhi Chalo ಕೃಷಿ ಕಾಯ್ದೆಗಳಿಗೆ ತಾತ್ಕಾಲಿಕ ತಡೆ ನೀಡಿ ಸಮಿತಿ ನೇಮಿಸಿದ ಸುಪ್ರೀಂ ಕೋರ್ಟ್; ಸಮಿತಿ ಸದಸ್ಯರ ಹಿನ್ನೆಲೆ ಏನು?

Published On - 4:48 pm, Thu, 14 January 21

ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ