ಜಗನ್ ರೆಡ್ಡಿಗೆ ದೊಡ್ಡ ಆಘಾತ; ವೈಎಸ್‌ಆರ್‌ಸಿಪಿಯ ಇಬ್ಬರು ರಾಜ್ಯಸಭಾ ಸದಸ್ಯರು ರಾಜೀನಾಮೆ, ಟಿಡಿಪಿ ಸೇರ್ಪಡೆ ಸಾಧ್ಯತೆ

ವೈಎಸ್‌ಆರ್‌ಸಿಪಿ ಸಂಸದರಾದ ಡಾ. ಬೀಡಾ ಮಸ್ತಾನ್ ರಾವ್ ಜಾಧವ್ ಮತ್ತು ವೆಂಕಟರಮಣ ರಾವ್ ಮೋಪಿದೇವಿ ಇಂದು ರಾಜ್ಯಸಭೆಗೆ ರಾಜೀನಾಮೆ ನೀಡಿದ್ದಾರೆ. ಇವರಿಬ್ಬರೂ ತೆಲುಗು ದೇಶಂ ಪಕ್ಷ ಸೇರುವ ವದಂತಿಗಳು ಹಬ್ಬಿವೆ. ಇದರಿಂದ ಜಗನ್ ರೆಡ್ಡಿಗೆ ಭಾರೀ ಹಿನ್ನಡೆಯಾಗಿದೆ.

ಜಗನ್ ರೆಡ್ಡಿಗೆ ದೊಡ್ಡ ಆಘಾತ; ವೈಎಸ್‌ಆರ್‌ಸಿಪಿಯ ಇಬ್ಬರು ರಾಜ್ಯಸಭಾ ಸದಸ್ಯರು ರಾಜೀನಾಮೆ, ಟಿಡಿಪಿ ಸೇರ್ಪಡೆ ಸಾಧ್ಯತೆ
ಜಗನ್ ರೆಡ್ಡಿ
Follow us
ಸುಷ್ಮಾ ಚಕ್ರೆ
|

Updated on: Aug 29, 2024 | 10:38 PM

ಹೈದರಾಬಾದ್: ಇಬ್ಬರು YSRCP ರಾಜ್ಯಸಭೆ ಸದಸ್ಯರಾದ ಡಾ. ಬೀಡಾ ಮಸ್ತಾನ್ ರಾವ್ ಜಾಧವ್ ಮತ್ತು ವೆಂಕಟರಮಣ ರಾವ್ ಮೋಪಿದೇವಿ ರಾಜ್ಯಸಭೆಯ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಮೂಲಗಳ ಪ್ರಕಾರ, ಉಪರಾಷ್ಟ್ರಪತಿ ಮತ್ತು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧಂಖರ್ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ಮಸ್ತಾನ್ ರಾವ್ ಅವರ ಅವಧಿ ಜೂನ್ 2028ರಲ್ಲಿ ಕೊನೆಗೊಳ್ಳಲಿದೆ. ಈ ಮೊದಲು ಟಿಡಿಪಿಯಲ್ಲಿದ್ದ ಅವರು ಮತ್ತೆ ಟಿಡಿಪಿಗೆ ಮರಳುವ ಸಾಧ್ಯತೆಯಿದೆ. ಜೂನ್ 2026ರವರೆಗೆ ಅಧಿಕಾರಾವಧಿ ಇದ್ದ ಮೋಪಿದೇವಿ ಅವರು ಕೂಡ ಟಿಡಿಪಿಗೆ ಸೇರಬಹುದು ಎನ್ನಲಾಗಿದೆ.

ಈ ಎರಡು ರಾಜೀನಾಮೆಗಳ ನಂತರ ರಾಜ್ಯಸಭೆಯಲ್ಲಿ YSRCP ಬಲ 11ರಿಂದ 9ಕ್ಕೆ ಇಳಿದಿದೆ. ಪ್ರಮುಖ ಎನ್‌ಡಿಎ ಮಿತ್ರ ಪಕ್ಷವಾದ ಟಿಡಿಪಿಗೆ ಪ್ರಸ್ತುತ ಮೇಲ್ಮನೆಯಲ್ಲಿ ಯಾವುದೇ ಪ್ರಾತಿನಿಧ್ಯವಿಲ್ಲ. ವರದಿಗಳ ಪ್ರಕಾರ, ಮುಂಬರುವ ಉಪಚುನಾವಣೆಯಲ್ಲಿ ಟಿಡಿಪಿ ಮಸ್ತಾನ್ ರಾವ್ ಅವರನ್ನು ಕಣಕ್ಕಿಳಿಸಬಹುದು. ಆದರೂ ಮೋಪಿದೇವಿ ವೆಂಕಟ ರಮಣ ಅವರು ರಾಜ್ಯಸಭೆಗೆ ಮರಳಲು ಆಸಕ್ತಿ ಹೊಂದಿಲ್ಲ ಎಂದು ವರದಿಯಾಗಿದೆ.

ಇದನ್ನೂ ಓದಿ: ಬಾಂಗ್ಲಾ ರೀತಿ ಪ್ರಧಾನಿ ಮೋದಿ ಮನೆಗೆ ಜನ ನುಗ್ಗುವ ದಿನ ದೂರವಿಲ್ಲ: ಕಾಂಗ್ರೆಸ್ ಶಾಸಕ ಜಿಎಸ್ ಪಾಟೀಲ್

ಈ ಉಪಚುನಾವಣೆಗಳಲ್ಲಿ ಟಿಡಿಪಿ ಗೆದ್ದರೆ, ಆಡಳಿತಾರೂಢ ಎನ್‌ಡಿಎ ರಾಜ್ಯಸಭೆಯಲ್ಲಿ ಇಬ್ಬರು ಹೆಚ್ಚುವರಿ ಸದಸ್ಯರನ್ನು ಗಳಿಸಲಿದೆ. ಮೇಲ್ಮನೆಯಲ್ಲಿ ಬಿಜೆಪಿಯ ಮಿತ್ರಪಕ್ಷಗಳಲ್ಲಿ JD(U), NCP, JD(S), RPI(A), ಶಿವಸೇನೆ, RLD, RLM, NPP, PMK, ತಮಿಳು ಮನಿಲಾ ಕಾಂಗ್ರೆಸ್, ಮತ್ತು UPPL ಸೇರಿವೆ.

ಇದು ಬಿಜೆಪಿಗೆ ಒಳ್ಳೆಯ ಸುದ್ದಿಯಾಗಿದೆ. ಎನ್‌ಡಿಎ ಇತ್ತೀಚೆಗೆ ಮೇಲ್ಮನೆಯಲ್ಲಿ ಬಹುಮತದ ಅಂಕವನ್ನು ಮುಟ್ಟಿದೆ ಮತ್ತು ಇದು ಪ್ರಮುಖ ಶಾಸನದ ಅಂಗೀಕಾರವನ್ನು ಖಚಿತಪಡಿಸಿಕೊಳ್ಳಲು ಅವರಿಗೆ ಸಹಾಯ ಮಾಡುತ್ತದೆ. ಈ ಇಬ್ಬರು ಸಂಸದರು ಟಿಡಿಪಿಗೆ ಬದಲಾದರೆ ಎನ್‌ಡಿಎ ಸಂಖ್ಯಾಬಲ ಮತ್ತಷ್ಟು ಬಲಗೊಳ್ಳಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ