ಬಸ್ವೊಂದು ಪಲ್ಟಿಯಾಗಿದ್ದು ಇಬ್ಬರು ಮಹಿಳಾ ಪ್ರಯಾಣಿಕರು ಮೃತಪಟ್ಟು, ಅನೇಕ ಮಂದಿ ಗಾಯಗೊಂಡಿರುವ ಘಟನೆ ಬಿಹಾರದ ಕತಿಹಾರ್ನಲ್ಲಿ ನಡೆದಿದೆ. ಶಿವಂ ಡಿಲಕ್ಸ್ ಹೆಸರಿನ ಬಸ್ ರಸ್ತೆ ಬದಿಯ ಗುಂಡಿಗೆ ಪಲ್ಟಿಯಾಗಿ ಇಬ್ಬರು ಮಹಿಳಾ ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದಾರೆ. ಅಪಘಾತದಲ್ಲಿ ಸುಮಾರು 48ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಮಾಹಿತಿ ಪಡೆದ ಸ್ಥಳೀಯರು, ಪೊಲೀಸರು ತಕ್ಷಣವೇ ಸ್ಥಳಕ್ಕೆ ಆಗಮಿಸಿದ್ದಾರೆ. ರಾಂಚಿಯಿಂದ ಸಿಲಿಗುರಿಗೆ ತೆರಳುತ್ತಿದ್ದ ಕಬೀರ್ ಮಠದ ಬಳಿ ಪಲ್ಟಿಯಾಗಿತ್ತು. ಕತಿಹಾರ್ ಡಿಎಸ್ಪಿ ಇಬ್ಬರ ಸಾವನ್ನು ಖಚಿತಪಡಿಸಿದ್ದಾರೆ. ಗಾಯಾಳುಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಮುಂದುವರೆದಿದೆ.
ಅಪಘಾತಕ್ಕೆ ಸ್ಪಷ್ಟ ಕಾರಣ ಇನ್ನೂ ತಿಳಿದುಬಂದಿಲ್ಲ, ಆದರೆ ಸಿಲಿಗುರಿಗೆ ಹೋಗುತ್ತಿದ್ದ ಪ್ರಯಾಣಿಕರ ಪ್ರಕಾರ ಚಾಲಕ ನಿದ್ರೆಗೆ ಜಾರಿದ್ದ ಎಂದಿದ್ದಾರೆ. ಕೊಡೆರ್ಮಾದಲ್ಲಿ ರಾತ್ರಿ ಊಟ ಮಾಡಿದ ಬಳಿಕ ಬಸ್ ಮುಂದೆ ಸಾಗಿದ್ದರಿಂದ ಬೆಳಗಿನ ಜಾವ 3.30ರ ಸುಮಾರಿಗೆ ಬಸ್ ಪಲ್ಟಿಯಾಗಿದೆ ಎಂದು ಪ್ರಯಾಣಿಕ ರಾಹುಲ್ ತಿಳಿಸಿದ್ದಾರೆ.
ಮತ್ತಷ್ಟು ಓದಿ: ಅಪಘಾತ ಪ್ರಕರಣಗಳಿಂದ ಹೆಚ್ಚು ಸುದ್ದಿಯಾದ ಚಾಮರಾಜನಗರ! ಒಂದೇ ತಿಂಗಳಲ್ಲಿ 19 ಅಪಘಾತ; 26 ಮಂದಿ ಸಾವು
ಅಪಘಾತದ ಬಳಿಕ ಅನೇಕರು ಬಸ್ನಲ್ಲಿ ಸಿಲುಕಿದ್ದಾರೆ, ಪೊಲೀಸರು ಅವರನ್ನು ಹೊರತೆಗೆಯಲು ಪ್ರಯತ್ನಿಸಿದರು ಬಳಿಕ ಕ್ರೇನ್ ಸಹಾಯದಿಂದ ರಕ್ಷಿಸಿದ್ದಾರೆ. ಇಬ್ಬರು ಮಹಿಳಾ ಪ್ರಯಾಣಿಕರನ್ನು ಬಸ್ನಿಂದ ಹೊರಗೆ ತೆಗೆಯಲಾಗಿದೆ.
ಘಟನಾ ಸ್ಥಳದ ವಿಡಿಯೋ
VIDEO | Two killed, several injured as Siliguri-bound bus overturns in Bihar’s Katihar. More details are awaited. pic.twitter.com/jY7GKmLX3z
— Press Trust of India (@PTI_News) February 12, 2024
ಈ ಘಟನೆ ಬಗ್ಗೆ ಕತಿಹಾರ್ ಉಪ ವಿಭಾಗದ ಪೊಲೀಸ್ ಅಧಿಕಾರಿ ಶಶಿ ಶೇಖರ್ ಮಾತನಾಡಿ, ರಾಂಚಿಯಿಂದ ಸಿಲಿಗುರಿಗೆ ಹೋಗುತ್ತಿದ್ದ ಬಸ್ ಅಪಘಾತಕ್ಕೀಡಾಗಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ಕಳುಹಿಸಲಾಗಿದೆ, ಘಟನೆಗೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ