ತಮ್ಮದೇ ಸರ್ಕಾರವನ್ನು ಟೀಕಿಸಿದ್ದ ಬಿಹಾರದ ಕೃಷಿ ಸಚಿವ ಸುಧಾಕರ್ ಸಿಂಗ್ ರಾಜೀನಾಮೆ

ಮಹಾಮೈತ್ರಿ  ರಚನೆಯಾದ ನಂತರವೂ ಆಡಳಿತದಲ್ಲಿ ಎಷ್ಟು ಬದಲಾವಣೆಯಾಗಿದೆ ಎಂಬುದನ್ನು ಹೇಳಿದ ಅವರು ಇದು ಸಂಪೂರ್ಣವಾಗಿ ನಮ್ಮ ಸರ್ಕಾರವಲ್ಲ. ನಾವು ಸಮ್ಮಿಶ್ರದಲ್ಲಿದ್ದೇವೆ. ಅದೇ ಹಳೆಯ ಸರ್ಕಾರ

ತಮ್ಮದೇ ಸರ್ಕಾರವನ್ನು ಟೀಕಿಸಿದ್ದ ಬಿಹಾರದ ಕೃಷಿ ಸಚಿವ  ಸುಧಾಕರ್ ಸಿಂಗ್ ರಾಜೀನಾಮೆ
ಸುಧಾಕರ್ ಸಿಂಗ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Oct 02, 2022 | 6:41 PM

ಇತ್ತೀಚೆಗೆ ತಮ್ಮ ಇಲಾಖೆಯಲ್ಲಿನ ಭ್ರಷ್ಟಾಚಾರದ ವಿಷಯವನ್ನು ಪ್ರಸ್ತಾಪಿಸಿದ ಬಿಹಾರದ ನೂತನ ಕೃಷಿ ಸಚಿವ ಮತ್ತು ಆರ್‌ಜೆಡಿ ಶಾಸಕ ಸುಧಾಕರ್ ಸಿಂಗ್ (Sudhakar Singh) ಅವರು ಭಾನುವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.  ರಾಜ್ಯ ಸರ್ಕಾರಕ್ಕೆ ಅವರು  ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ ಎಂದು ರಾಷ್ಟ್ರೀಯ ಜನತಾ ದಳದ ಬಿಹಾರ ಅಧ್ಯಕ್ಷ ಮತ್ತು ಸುಧಾಕರ್ ಅವರ ತಂದೆ ಜಗದಾನಂದ್ ಸಿಂಗ್ (Jagdanand Singh) ಹೇಳಿರುವುದಾಗಿ  ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. ಈ ಬಗ್ಗೆ ಮಾತನಾಡಿದ ಆರ್‌ಜೆಡಿ ನಾಯಕ ಜಗದಾನಂದ್ ಸಿಂಗ್, ಮಂಡಿ ಕಾನೂನನ್ನು ರದ್ದುಪಡಿಸುವುದರಿಂದ ರಾಜ್ಯದ ರೈತರಿಗೆ ದೊಡ್ಡ ಹಾನಿಯಾಗಿರುವುದರಿಂದ ರೈತರಿಗೆ ಆಗುತ್ತಿರುವ ಅನ್ಯಾಯದ ಪರವಾಗಿ ಯಾರಾದರೂ ನಿಲ್ಲಬೇಕು. ಕೃಷಿ ಸಚಿವರು ರೈತರ ಪರವಾಗಿ ನಿಂತಿದ್ದಾರೆ. ಮಂಡಿ ಕಾನೂನನ್ನು (ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾಯ್ದೆ ) ಕೊಲ್ಲುವ ಮೂಲಕ ರಾಜ್ಯದ ರೈತರನ್ನು ನಾಶ ಮಾಡಲಾಗಿದೆ ಎಂದು  ಹೇಳಿದರು. ಕಳೆದ ತಿಂಗಳು ಸಿಂಗ್ ಅವರ ಸ್ವಂತ ಸರ್ಕಾರದಲ್ಲಿ ಕೆಳಮಟ್ಟದ ಅಧಿಕಾರಶಾಹಿ ಮತ್ತು ಅಧಿಕಾರ ವಲಯಗಳಲ್ಲಿನ ಭ್ರಷ್ಟಾಚಾರವನ್ನು ಎತ್ತಿ ತೋರಿಸಿದರು. ನನ್ನ ಇಲಾಖೆಯಲ್ಲಿ ಭ್ರಷ್ಟಾಚಾರದಲ್ಲಿ ತೊಡಗದ ಒಬ್ಬ ವ್ಯಕ್ತಿಯೂ ಇಲ್ಲ.ಔರ್ ಹಮ್ ಚೋರೋನ್ ಕೆ ಸರ್ದಾರ್ ಹೈಂ (ನಾನು ಕಳ್ಳರ ಮುಖ್ಯಸ್ಥ) ಎಂದು ಹೇಳಿರುವ ವಿಡಿಯೊ ವೈರಲ್ ಆಗಿತ್ತು.

ಬಿಹಾರ ಸಿಎಂ ವಿರುದ್ಧ ಮುಸುಕಿನ ದಾಳಿ ನಡೆಸಿದ ಸಿಂಗ್, “ಭತ್ತ ಖರೀದಿಸಲು ಹಲವು ಏಜೆನ್ಸಿಗಳನ್ನು ತೊಡಗಿಸಿಕೊಳ್ಳುವಂತೆ ನಾನು ಸರ್ಕಾರವನ್ನು ಕೇಳುತ್ತಿದ್ದೇನೆ, ಆದರೆ ಯಾವುದೇ ಪ್ರತಿಕ್ರಿಯೆ ಇಲ್ಲ. ನಾನು ಅಧಿಕಾರಶಾಹಿಗಳ ಬಗ್ಗೆ ಮಾತನಾಡುವುದಿಲ್ಲ. ಆದರೆ ದೊಡ್ಡ ರಾಜಕಾರಣಿಗಳ ಬಗ್ಗೆ ಮಾತನಾಡುತ್ತೇನೆ. ನಾನು ರೈತರಿಂದ ಧಾನ್ಯಗಳನ್ನು ಖರೀದಿಸಲು ಮಂಡಿಗಳು ಬೇಕೆಂದಾಗ ಅದನ್ನು ಪರಿಗಣಿಸಲಿಲ್ಲ … ಐಸೆ ಲಗಾ ಜೈಸೇ ಸಾಮ್ನೇವಾಲೆ ಕೊ ಬುಖಾರ್ ಹೋ ಗಯಾ ಹೋ (ನನ್ನ ಸಲಹೆಗಳನ್ನು ಕೇಳಿದ ನಂತರ ನನ್ನ ಎದುರಿಗಿದ್ದ ವ್ಯಕ್ತಿಗೆ ಜ್ವರ ಬಂದಂತೆ ತೋರುತ್ತಿದೆ) ಎಂದು ಅವರು ಹೇಳಿದ್ದಾರೆ.

ಮಹಾಮೈತ್ರಿ  ರಚನೆಯಾದ ನಂತರವೂ ಆಡಳಿತದಲ್ಲಿ ಎಷ್ಟು ಬದಲಾವಣೆಯಾಗಿದೆ ಎಂಬುದನ್ನು ಹೇಳಿದ ಅವರು ಇದು ಸಂಪೂರ್ಣವಾಗಿ ನಮ್ಮ ಸರ್ಕಾರವಲ್ಲ. ನಾವು ಸಮ್ಮಿಶ್ರದಲ್ಲಿದ್ದೇವೆ. ಅದೇ ಹಳೆಯ ಸರ್ಕಾರ. ಇಸ್ಕೆ ಚಾಲ್-ಚಲನ್ ಭಿ ಪುರಾನೇ ಹೈಂ ( ಅದರ ಕಾರ್ಯಚಟುವಟಿಕೆಗಳ ವಿಧಾನಗಳು ಹಿಂದಿನದ್ದೇ) ಎಂದಿದ್ದಾರೆ.

ರೈತರು ತಮ್ಮ ಆಕ್ರೋಶದ ಸಂಕೇತವಾಗಿ ಸರ್ಕಾರದ ಪ್ರತಿಕೃತಿಗಳನ್ನು ಸುಡುವುದನ್ನು ಮುಂದುವರಿಸಬೇಕು ಎಂದ ಸಿಂಗ್ ನನಗಿಂತ ಮೇಲಿರುವವರು ಇದ್ದಾರೆ, ನಾನು ಕ್ಯಾಬಿನೆಟ್ ಸಭೆಗಳಲ್ಲಿ (ಈ ಬಗ್ಗೆ) ಮಾತನಾಡುವಾಗ, ಇದು ನನ್ನ ಸಮಸ್ಯೆ ಎಂದು ಅವರು ಭಾವಿಸುತ್ತಾರೆ. ನೀವು ಧ್ವನಿ ಎತ್ತಿದಾಗ ಅದು ಕೇಳುತ್ತದೆ ಎಂದು ಅವರು ಹೇಳಿದರು. ಅವರ ಭ್ರಷ್ಟಾಚಾರದ ಟೀಕೆಗಳ ಬಗ್ಗೆ ಕೇಳಿದಾಗ, ಸಿಂಗ್ “ದಾಖಿಲ್ ಖರಿಜ್‌ನಿಂದ (ಭೂಮಿಯ ರೂಪಾಂತರ) ಹಿಡಿದು ಸಬ್ಸಿಡಿ ರಸಗೊಬ್ಬರಗಳನ್ನು ಮಾರಾಟವರೆಗೆ ಪ್ರತಿ ಹಂತದಲ್ಲೂ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ರೈತರು ಎತ್ತಿರುವ ಸಮಸ್ಯೆಗಳಿಗೆ ನಾನು ಪ್ರತಿಕ್ರಿಯಿಸುತ್ತಿದ್ದೆ ಎಂದು ಅವರು ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಆರ್‌ಜೆಡಿ ಮತ್ತು ಜೆಡಿಯು ನಡುವೆ ಸಮನ್ವಯದ ಕೊರತೆ ಇದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಎತ್ತುತ್ತಿರುವ ಕಾಳಜಿ ಆರ್‌ಜೆಡಿಗೆ ತಿಳಿದಿದೆ, ಶಾಸಕ ಮತ್ತು ಸಚಿವನಾಗಿ ನಾನು ನನ್ನ ಜನರಿಗೆ ಸ್ಪಂದಿಸಬೇಕು. ಆದರೆ, ಸಚಿವರ ಹೇಳಿಕೆಗೆ ಯಾವುದೇ ಪ್ರತಿಕ್ರಿಯೆ ನೀಡಲು ಜೆಡಿಯು ನಿರಾಕರಿಸಿದೆ. ಆರ್‌ಜೆಡಿ ನಾಯಕ ಮತ್ತು ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಕೆಳಮಟ್ಟದ ಅಧಿಕಾರಶಾಹಿಯಲ್ಲಿನ ಭ್ರಷ್ಟಾಚಾರದ ವಿಷಯವನ್ನು ಪ್ರಸ್ತಾಪಿಸಿದ್ದಾರೆ ಎಂದು ಸಿಂಗ್ ಬಹಿರಂಗಪಡಿಸಿದ್ದಾರೆ. ಸಿಂಗ್ ರಾಮಗಢದಿಂದ ಮೊದಲ ಬಾರಿಗೆ ಶಾಸಕರಾಗಿದ್ದಾರೆ, ಈ ಹಿಂದೆ ಅವರ ತಂದೆ ಜಗದಾನಂದ್ ಅವರು ಮೂರೂವರೆ ದಶಕಗಳಿಂದ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರ  ನಿಕಟವರ್ತಿಯಾಗಿದ್ದಾರೆ.