ಗಣರಾಜ್ಯೋತ್ಸವ ದಿನದಂದು ಬಿಹಾರ್ ಬೆಟಾಲಿಯನ್​ನ ಹುತಾತ್ಮ ಯೋಧರಿಗೆ ಗೌರವ?

| Updated By: ಸಾಧು ಶ್ರೀನಾಥ್​

Updated on: Jan 12, 2021 | 12:40 PM

ಉಭಯ ದೇಶಗಳ ನಡುವಿನ ಒಪ್ಪಂದಕ್ಕೆ ಅನುಗುಣವಾಗಿ ಚೀನಾದ ಪಡೆಗಳು ಪೆಟ್ರೋಲಿಂಗ್ ಪಾಯಿಂಟ್ 14 ರ ಸಮೀಪವಿರುವ ಸ್ಥಳದಿಂದ ಹಿಂದೆ ಸರಿಯಲು ನಿರಾಕರಿಸಿದಾಗ ಭಾರತೀಯ ಸೈನಿಕರು ಪೂರ್ಣ ಪ್ರಮಾಣದಲ್ಲಿ ಪ್ರತೀಕಾರ ತೀರಿಸಿಕೊಂಡರು. ಏಳು ಗಂಟೆಗಳ ಘರ್ಷಣೆಯಲ್ಲಿ ಚೀನಾದ ಸೈನಿಕರನ್ನು ಹೊರಹಾಕುವಲ್ಲಿ ಯಶಸ್ವಿಯಾದರು.

ಗಣರಾಜ್ಯೋತ್ಸವ ದಿನದಂದು ಬಿಹಾರ್ ಬೆಟಾಲಿಯನ್​ನ ಹುತಾತ್ಮ ಯೋಧರಿಗೆ ಗೌರವ?
ಕರ್ನಲ್ ಬಿ.ಸಂತೋಷ್ ಬಾಬು
Follow us on

ದೆಹಲಿ: ಕಳೆದ ವರ್ಷ ಜೂನ್ 15 ರಂದು ಪೂರ್ವ ಲಡಾಕ್‌ನ ಗಾಲ್ವಾನ್ ಕಣಿವೆಯ ಭೂಪ್ರದೇಶವನ್ನು ವಶಪಡಿಸಿಕೊಳ್ಳಲು ಜೀವದ ಹಂಗು ತೊರೆದು, ಚೀನಾ ಸೈನ್ಯದ ಆಕ್ರಮಣವನ್ನು ತಡೆದು ಹುತಾತ್ಮರಾದ ಆಂಧ್ರದ ಕರ್ನಲ್ ಬಿ. ಸಂತೋಷ್ ಬಾಬು ಸೇರಿದಂತೆ ಐದು ಭಾರತೀಯ ಸೈನಿಕರನ್ನು ಜನವರಿ 26ರ ಗಣರಾಜ್ಯೋತ್ಸವ ದಿನದಂದು  ಮರಣೋತ್ತರ  ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಉಭಯ ದೇಶಗಳ ನಡುವಿನ ಒಪ್ಪಂದಕ್ಕೆ ಅನುಗುಣವಾಗಿ ಚೀನಾದ ಪಡೆಗಳು ಪೆಟ್ರೋಲಿಂಗ್ ಪಾಯಿಂಟ್ 14 ರ ಸಮೀಪವಿರುವ ಸ್ಥಳದಿಂದ ಹಿಂದೆ ಸರಿಯಲು ನಿರಾಕರಿಸಿದಾಗ ಭಾರತೀಯ ಸೈನಿಕರು ಪೂರ್ಣ ಪ್ರಮಾಣದಲ್ಲಿ ಪ್ರತೀಕಾರ ತೀರಿಸಿಕೊಂಡರು. ಏಳು ಗಂಟೆಗಳ ಘರ್ಷಣೆಯಲ್ಲಿ ಚೀನಾದ ಸೈನಿಕರನ್ನು ಹೊರಹಾಕುವಲ್ಲಿ ಯಶಸ್ವಿಯಾದರು. ಇವರ ದಿಟ್ಟತನಕ್ಕೆ ಗಣರಾಜ್ಯೋತ್ಸವ ದಿನದಂದು ಗೌರವ ಸಮರ್ಪಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಜೂನ್ 15 ರಂದು ಗಾಲ್ವಾನ್ ಕಣಿವೆಯಲ್ಲಿ ತಮ್ಮ ಪ್ರಾಣವನ್ನು ಅರ್ಪಿಸಿದ 20 ಭಾರತೀಯ ಸೈನಿಕರಲ್ಲಿ 16 ಬಿಹಾರ ರೆಜಿಮೆಂಟಿನ ಕಮಾಂಡಿಂಗ್ ಆಫೀಸರ್ ಕರ್ನಲ್ ಬಿ ಸಂತೋಷ್ ಬಾಬು ಒಬ್ಬರು. ಸಂಘರ್ಷದಲ್ಲಿ ಚೀನಾ ಸೈನಿಕರ ಸಾವಿನ ಸಂಖ್ಯೆಯ ಬಗ್ಗೆ ಪಿಎಲ್‌ಎ (people liberation army) ಬಹಿರಂಗಪಡಿಸದಿದ್ದರೂ ಗುಪ್ತಚರ ವರದಿಯ ಪ್ರಕಾರ ಬೆಟಾಲಿಯನ್‌ನ ಕಮಾಂಡಿಂಗ್ ಆಫೀಸರ್ ಸೇರಿದಂತೆ 50 ಕ್ಕೂ ಹೆಚ್ಚು ಚೀನಾದ ಸೈನಿಕರು ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.

ಜನವರಿ 26 ರ ಟ್ರಾಕ್ಟರ್ ಮೆರವಣಿಗೆಯನ್ನು ತಡೆಯಲು ಸುಪ್ರೀಂ ಕೋರ್ಟ್​ಗೆ ಕೇಂದ್ರ ಮನವಿ