ನೂತನ ಸಂಸದ ಪಪ್ಪು ಯಾದವ್ ವಿರುದ್ಧ ಸುಲಿಗೆ ಪ್ರಕರಣ ದಾಖಲು

|

Updated on: Jun 11, 2024 | 8:05 AM

ನೂತನ ಸಂಸದ ಪಪ್ಪು ಯಾದವ್ ವಿರುದ್ಧ ಸುಲಿಗೆ ಪ್ರಕರಣ ದಾಖಲಾಗಿದೆ. ಉದ್ಯಮಿಯೊಬ್ಬರು ತಮ್ಮಿಂದ ಹಣ ವಸೂಲಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಸೋಮವಾರ ಪ್ರಕರಣ ದಾಖಲಿಸಲಾಗಿದೆ. ಪೂರ್ಣಿಯಾ ಜಿಲ್ಲೆಯ ಪೊಲೀಸರು ನೀಡಿದ ಹೇಳಿಕೆಯ ಪ್ರಕಾರ, ದೂರುದಾರರು ಅವರ ಕ್ಷೇತ್ರದಲ್ಲಿ ಫರ್ನಿಶಿಂಗ್​ ವ್ಯವಹಾರ ನಡೆಸುತ್ತಿದ್ದು, ಮತ ಎಣಿಕೆ ದಿನದಂದು ಉದ್ಯಮಿ ಬಳಿ 1 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದರು ಎಂದು ಹೇಳಲಾಗಿದೆ.

ನೂತನ ಸಂಸದ ಪಪ್ಪು ಯಾದವ್ ವಿರುದ್ಧ ಸುಲಿಗೆ ಪ್ರಕರಣ ದಾಖಲು
ಪಪ್ಪು ಯಾದವ್
Follow us on

ಬಿಹಾರದ ನೂತನ ಕಾಂಗ್ರೆಸ್​ ಸಂಸದ ಪಪ್ಪು ಯಾದವ್(Pappu Yadav) ವಿರುದ್ಧ ಸುಲಿಗೆ ಪ್ರಕರಣ ದಾಖಲಾಗಿದೆ. ಉದ್ಯಮಿಯೊಬ್ಬರು ತಮ್ಮಿಂದ ಹಣ ವಸೂಲಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಸೋಮವಾರ ಪ್ರಕರಣ ದಾಖಲಿಸಲಾಗಿದೆ. ಪೂರ್ಣಿಯಾ ಜಿಲ್ಲೆಯ ಪೊಲೀಸರು ನೀಡಿದ ಹೇಳಿಕೆಯ ಪ್ರಕಾರ, ದೂರುದಾರರು ಅವರ ಕ್ಷೇತ್ರದಲ್ಲಿ ಫರ್ನಿಶಿಂಗ್​ ವ್ಯವಹಾರ ನಡೆಸುತ್ತಿದ್ದು, ಮತ ಎಣಿಕೆ ದಿನದಂದು ಉದ್ಯಮಿ ಬಳಿ 1 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದರು ಎಂದು ಹೇಳಲಾಗಿದೆ.

ಈ ಮೊದಲು 2021 ಹಾಗೂ 2023ರಲ್ಲಿ ಕೂಡ ಇದೇ ರೀತಿಯ ಬೇಡಿಕೆ ಇಟ್ಟಿದ್ದರು, ತಮಗೆ ಹಣ ಕೊಡದಿದ್ದರೆ ಕೊಲ್ಲುವುದಾಗಿ ಬೆದರಿಕೆಯನ್ನೂ ಹಾಕಿದ್ದರು. ಮುಂದಿನ ಐದು ವರ್ಷ ಇದೇ ಸಂಸದರೊಂದಿಗೆ ವ್ಯವಹರಿಸಬೇಕಾಗುತ್ತದೆ ಎಚ್ಚರವಿರಲಿ ಎಂದು ಬೆದರಿಕೆ ಹಾಕಿದ್ದರು.

ದೂರಿನ ಆಧಾರದ ಮೇಲೆ ಸಂಸದ ಮತ್ತು ಅವರ ಆಪ್ತ ಅಮಿತ್ ಯಾದವ್ ವಿರುದ್ಧ ಮೊಫುಸಿಲ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತನಿಖೆ ನಡೆಯುತ್ತಿದೆ. ಮತ್ತೊಂದೆಡೆ ಪಪ್ಪು ಯಾದವ್ ಮಾತನಾಡಿ, ತಾನು ರಾಜಕೀಯದಲ್ಲಿ ಬೆಳೆಯುತ್ತಿದ್ದೇನೆ ಎನ್ನುವ ಹೊಟ್ಟೆಕಿಚ್ಚಿನಿಂದ ಕೆಲವರು ಪಿತೂರಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಮತ್ತಷ್ಟು ಓದಿ: Lok Sabha Election: ಪಪ್ಪು ಯಾದವ್, ಡ್ಯಾನಿಶ್ ಅಲಿ, ಲಾಲ್​ಸಿಂಗ್​ ಕಾಂಗ್ರೆಸ್​ಗೆ ಸೇರ್ಪಡೆ

ಸುಪ್ರೀಂ ಕೋರ್ಟ್‌ನ ಮೇಲ್ವಿಚಾರಣೆಯಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಮತ್ತು ತಪ್ಪಿತಸ್ಥರು ಯಾರೇ ಆಗಿದ್ದರೂ ಅವರನ್ನು ಗಲ್ಲಿಗೇರಿಸಬೇಕು”ಎಂದು ಅವರು ಹೇಳಿದರು. ಇತ್ತೀಚೆಗಷ್ಟೇ ನಡೆದ ಲೋಕಸಭಾ ಚುನಾವಣೆಯಲ್ಲಿ ಪಪ್ಪು ಯಾದವ್ ಅವರು ಬಿಹಾರದ ಪೂರ್ಣಿಯಾ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದರು.

ಅವರು ಎರಡು ಅವಧಿಯ ಜೆಡಿ (ಯು) ಸಂಸದ ಸಂತೋಷ್ ಕುಶ್ವಾಹಾ ಅವರಿಗಿಂತ 23,847 ಮತಗಳ ಅಂತರದಿಂದ ಪೂರ್ಣಿಯಾ ಸ್ಥಾನವನ್ನು ಗೆದ್ದರು. ಸ್ವತಂತ್ರ ಅಭ್ಯರ್ಥಿ 5.67 ಲಕ್ಷ ಮತಗಳನ್ನು ಪಡೆದರೆ, ಜೆಡಿ (ಯು) ಅಭ್ಯರ್ಥಿ 5.43 ಲಕ್ಷ ಮತಗಳನ್ನು ಪಡೆದಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ