JDU ಅಧ್ಯಕ್ಷ ಸ್ಥಾನಕ್ಕೆ ಬಿಹಾರ ಸಿಎಂ ನಿತೀಶ್ ಕುಮಾರ್ ರಾಜೀನಾಮೆ

| Updated By: ರಶ್ಮಿ ಕಲ್ಲಕಟ್ಟ

Updated on: Dec 27, 2020 | 5:32 PM

ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ಜೆಡಿಯು ಅಧ್ಯಕ್ಷ ಸ್ಥಾನಕ್ಕೆ ಬಿಹಾರ ಮುಖ್ಯಮಂತ್ರಿ ನಿತೀಶ್​ ಕುಮಾರ್​ ರಾಜೀನಾಮೆ ನೀಡಿದ್ದಾರೆ. ನೂತನ ಅಧ್ಯಕ್ಷರಾಗಿ ರಾಜ್ಯಸಭಾ ಸಂಸದ R.C.P ಸಿಂಗ್​ ನೇಮಕವಾಗಿದ್ದಾರೆ.

JDU ಅಧ್ಯಕ್ಷ ಸ್ಥಾನಕ್ಕೆ ಬಿಹಾರ ಸಿಎಂ ನಿತೀಶ್ ಕುಮಾರ್ ರಾಜೀನಾಮೆ
ಬಿಹಾರ ಸಿಎಂ ನಿತೀಶ್​ ಕುಮಾರ್
Follow us on

ಪಾಟ್ನಾ: ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ಜೆಡಿಯು ಅಧ್ಯಕ್ಷ ಸ್ಥಾನಕ್ಕೆ ಬಿಹಾರ ಮುಖ್ಯಮಂತ್ರಿ ನಿತೀಶ್​ ಕುಮಾರ್​ ರಾಜೀನಾಮೆ ನೀಡಿದ್ದಾರೆ. ನೂತನ ಅಧ್ಯಕ್ಷರಾಗಿ ರಾಜ್ಯಸಭಾ ಸಂಸದ R.C.P ಸಿಂಗ್​ ನೇಮಕವಾಗಿದ್ದಾರೆ.

ಇಂದು ಬೆಳಗ್ಗೆ ಕರೆದಿದ್ದ ಜೆಡಿಯು ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ನಿತೀಶ್​ ಕುಮಾರ್​ ರಾಜೀನಾಮೆ ಸಲ್ಲಿಸಿದ್ದಾರೆ. ನಿತೀಶ್ ಕುಮಾರ್ R.C.P ಸಿಂಗ್ ಹೆಸರನ್ನು ಅಧ್ಯಕ್ಷ ಸ್ಥಾನಕ್ಕೆ ಸೂಚಿಸುತ್ತಿದ್ದಂತೆ, ಕಾರ್ಯಕಾರಿಣಿ ಸಭೆಯಲ್ಲಿ ಉಪಸ್ಥಿತರಿದ್ದ ಇತರ ಸದಸ್ಯರು ಸಿಂಗ್ ಹೆಸರನ್ನು ಅನುಮೋದಿಸಿದರು. ಅರುಣಾಚಲ ಪ್ರದೇಶದಲ್ಲಿ ಪಕ್ಷದ 6 ಶಾಸಕರು ಬಿಜೆಪಿಗೆ ಸೇರ್ಪಡೆಗೊಂಡ ನಂತರ ಈ ಸಭೆಯನ್ನು ಕರೆಯಲಾಗಿತ್ತು.

ಪಾಟ್ನಾದ JDU ಕಚೇರಿಯ ಎದುರು ನೆರೆದ ಪಕ್ಷದ ಕಾರ್ಯಕರ್ತರು ನೂತನ ಅಧ್ಯಕ್ಷರ ಆಯ್ಕೆಯನ್ನು ಸಂಭ್ರಮಿಸಿದರು. ನಿತೀಶ್ ಕುಮಾರ್​ರಿಗೆ ಜಯವಾಗಲಿ ಎಂದು ಘೋಷಣೆ ಕೂಗುತ್ತಾ ಸಂಭ್ರಮಿಸಿದರು.

ಹೊಸ ಅಧ್ಯಕ್ಷರ ನೇಮಕದ ನಂತರ ಸಂಭ್ರಮಿಸಿದ ಕಾರ್ಯಕರ್ತರು

ಪ್ರಧಾನ ಕಾರ್ಯದರ್ಶಿಯಿಂದ ಜೆಡಿಯು ಅಧ್ಯಕ್ಷ ಸ್ಥಾನದವರೆಗೆ; ನಿತೀಶ್ ಆಪ್ತ ಆರ್​ಸಿಪಿ ಸಿಂಗ್ ರಾಜಕೀಯ ಪಯಣ

 

ಜೆಡಿಯುನಿಂದ ಬಿಜೆಪಿಗೆ ಆರು ಶಾಸಕರು; ನಿತೀಶ್​ ಕುಮಾರ್​ಗೆ ಭಾರಿ ಮುಖಭಂಗ

Published On - 4:45 pm, Sun, 27 December 20