ಲಾಕ್​ಡೌನ್​ ಕಾರಣ ಸೈಕಲ್​ ಏರಿ ಮಗಳೊಂದಿಗೆ 1,200 ಕಿ.ಮೀ ಪ್ರಯಾಣಿಸಿದ್ದ ವ್ಯಕ್ತಿ ಹೃದಯಾಘಾತದಿಂದ ನಿಧನ

|

Updated on: Jun 01, 2021 | 11:55 AM

ಮೋಹನ್ ಪಾಸ್ವಾನ್ ಅವರ ಪುತ್ರಿ ಜ್ಯೋತಿ ಕಳೆದ ವರ್ಷ ಭಾರೀ ಸುದ್ದಿಯಾಗಿದ್ದರು. ಕೊರೊನಾ ನಿಮಿತ್ತ ಲಾಕ್​ಡೌನ್​ ಹೇರಿದ್ದ ಕಾರಣ ವಾಹನ ಸಂಚಾರ ಸ್ಥಗಿತಗೊಂಡಾಗ ತನ್ನ ಅನಾರೋಗ್ಯಪೀಡಿತ ತಂದೆಯನ್ನು ಸೈಕಲ್​ನಲ್ಲಿ ಕೂರಿಸಿಕೊಂಡು 1,200 ಕಿ.ಮೀ ದೂರ ಸೈಕಲ್ ತುಳಿದು ಎಲ್ಲರೂ ಹುಬ್ಬೇರುವಂತೆ ಮಾಡಿದ್ದರು.

ಲಾಕ್​ಡೌನ್​ ಕಾರಣ ಸೈಕಲ್​ ಏರಿ ಮಗಳೊಂದಿಗೆ 1,200 ಕಿ.ಮೀ ಪ್ರಯಾಣಿಸಿದ್ದ ವ್ಯಕ್ತಿ ಹೃದಯಾಘಾತದಿಂದ ನಿಧನ
ಸೈಕಲ್ ಏರಿ 1,200 ಕಿ.ಮೀ ಪಯಣಿಸಿದ್ದ ಅಪ್ಪ, ಮಗಳು
Follow us on

ಪಾಟ್ನಾ: ಕೊರೊನಾ ಮೊದಲ ಅಲೆಯಲ್ಲಿ ರಾಷ್ಟ್ರವ್ಯಾಪಿ ಲಾಕ್​ಡೌನ್ ಹೇರಿದ್ದ ಸಂದರ್ಭ ಮಗಳೊಂದಿಗೆ ಸೈಕಲ್​ ಏರಿ ಬರೋಬ್ಬರಿ 1,200 ಕಿ.ಮೀ ಪ್ರಯಾಣಿಸಿ ಗಮನ ಸೆಳೆದಿದ್ದ ವ್ಯಕ್ತಿ ನಿಧನರಾಗಿದ್ದಾರೆ. ದರ್ಭಾಂಗ ಜಿಲ್ಲೆಯ ಮೋಹನ್ ಪಾಸ್ವಾನ್ ಎಂಬುವವರು ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಅವರ ಪುತ್ರಿ ತನ್ನ ತಂದೆಯನ್ನು ಸೈಕಲ್​ ಮೇಲೆ ಕೂರಿಸಿಕೊಂಡು ಗುರುಗ್ರಾಮದಿಂದ ಬಿಹಾರದ ತನಕ 8 ದಿನಗಳ ಅವಧಿಯಲ್ಲಿ 1,200 ಕಿ.ಮೀ ಪಯಣಿಸಿದ್ದರು. ಇಂದು (ಜೂನ್ 1) ಮೋಹನ್ ಪಾಸ್ವಾನ್ ಅವರ ನಿಧನದ ಬಗ್ಗೆ ವರದಿಯಾಗಿದ್ದು, ದರ್ಭಾಂಗ ಜಿಲ್ಲೆಯ ತಮ್ಮ ಊರಿನಲ್ಲಿ ಹೃದಯಾಘಾತದ ಕಾರಣ ಕೊನೆಯುಸಿರೆಳೆದಿದ್ದಾರೆಂದು ತಿಳಿದುಬಂದಿದೆ.

ಮೋಹನ್ ಪಾಸ್ವಾನ್ ಅವರ ಪುತ್ರಿ ಜ್ಯೋತಿ ಕಳೆದ ವರ್ಷ ಭಾರೀ ಸುದ್ದಿಯಾಗಿದ್ದರು. ಕೊರೊನಾ ನಿಮಿತ್ತ ಲಾಕ್​ಡೌನ್​ ಹೇರಿದ್ದ ಕಾರಣ ವಾಹನ ಸಂಚಾರ ಸ್ಥಗಿತಗೊಂಡಾಗ ತನ್ನ ಅನಾರೋಗ್ಯಪೀಡಿತ ತಂದೆಯನ್ನು ಸೈಕಲ್​ನಲ್ಲಿ ಕೂರಿಸಿಕೊಂಡು 1,200 ಕಿ.ಮೀ ದೂರ ಸೈಕಲ್ ತುಳಿದು ಎಲ್ಲರೂ ಹುಬ್ಬೇರುವಂತೆ ಮಾಡಿದ್ದರು.

ಗುರುಗ್ರಾಮದ ಜಮೀನೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಅವರನ್ನು ಲಾಕ್​ಡೌನ್ ಕಾರಣ ಜಮೀನಿನ ಮಾಲೀಕ ಕೆಲಸದಿಂದ ತೆಗೆಯಬಹುದು ಎಂದು ಭಯಗೊಂಡು ಊರಿಗೆ ಮರಳಲು ನಿರ್ಧರಿಸಿದ್ದರು. ಎರಡು ಹೊತ್ತಿನ ಊಟಕ್ಕೂ ಕಷ್ಟವಾಗುವಂತಹ ಪರಿಸ್ಥಿತಿ ಎದುರಾದಾಗ ಗಟ್ಟಿ ನಿರ್ಧಾರ ಮಾಡಿ ಗುರುಗ್ರಾಮದಿಂದ ಹೊರಟಿದ್ದರು. ಆದರೆ, ಲಾಕ್​ಡೌನ್ ಕಾರಣ ಯಾವುದೇ ವಾಹನ ಸೌಲಭ್ಯ ಸಿಗದೇ, ಸೈಕಲ್​ನಲ್ಲೇ ಹೊರಡಬೇಕಾದ ಅನಿವಾರ್ಯತೆ ಎದುರಾಗಿತ್ತು.

ಅಲ್ಲದೇ, ಮೋಹನ್​ ಪಾಸ್ವಾನ್​ ಅವರ ಕಾಲಿನ ಮೂಳೆಯಲ್ಲಿ ಅಪಘಾತದಿಂದ ಬಿರುಕು ಮೂಡಿದ್ದರಿಂದ ಅವರು ಸೈಕಲ್​ ತುಳಿಯುವುದು ಅಸಾಧ್ಯವಾಗಿತ್ತು. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಧೃತಿಗೆಡದ ಮಗಳು ಜ್ಯೋತಿ ತನ್ನ ತಂದೆಯನ್ನು ಕೂರಿಸಿಕೊಂಡು ಪ್ರಯಾಣ ಆರಂಭಿಸಿದ್ದರು. ಮೇ 7ರಂದು ಗುರುಗ್ರಾಮದಿಂದ ಹೊರಟಿದ್ದ ಅವರು ಮೇ 16ರಂದು ಎಂಟು ದಿನಗಳ ಪಯಣದ ನಂತರ ಊರು ತಲುಪಿದ್ದರು.

ಇದನ್ನೂ ಓದಿ:
ಮೈಸೂರು: ಮಗನ ಔಷಧಿಗೆ 280 ಕಿಲೋಮೀಟರ್ ಸೈಕಲ್ ತುಳಿದ ಅಪ್ಪ 

ಕೊವಿಡ್​​​ನಿಂದ ಮೃತಪಟ್ಟ ವೃದ್ಧೆಯ ಶವಸಂಸ್ಕಾರ ಮಾಡಲು ಬಿಡದ ಸ್ಥಳೀಯರು; ಪತ್ನಿಯ ಮೃತದೇಹವನ್ನು ಸೈಕಲ್​ ಮೇಲೆ ಹೊತ್ತು ಅಲೆದಾಡಿದ ಪತಿ