AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ ರೂಪದರ್ಶಿ; ಬಾಲಿವುಡ್​ ಪ್ರಮುಖ ನಟ ಸೇರಿ 9 ಮಂದಿ ವಿರುದ್ಧ ಎಫ್​ಐಆರ್​

ಮಹಿಳೆ ನೀಡಿದ ದೂರಿನ ಅನ್ವಯ 9 ಗಣ್ಯರ ವಿರುದ್ಧ ಪ್ರಕರಣ ದಾಖಲಾಗಿದೆ. ಇವರೆಲ್ಲ ಬಾಲಿವುಡ್ ಮನರಂಜನಾ ಕ್ಷೇತ್ರದಲ್ಲಿ ಹೆಸರು ಮಾಡಿದವರೇ ಆಗಿದ್ದಾರೆ. ಇನ್ನು ಈ ರೂಪದರ್ಶಿ ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಪೋಸ್ಟ್ ಹಾಕಿಕೊಂಡಿದ್ದಾರೆ.

ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ ರೂಪದರ್ಶಿ; ಬಾಲಿವುಡ್​ ಪ್ರಮುಖ ನಟ ಸೇರಿ 9 ಮಂದಿ ವಿರುದ್ಧ ಎಫ್​ಐಆರ್​
ಪ್ರಾತಿನಿಧಿಕ ಚಿತ್ರ
Lakshmi Hegde
|

Updated on:Jun 01, 2021 | 11:22 AM

Share

ಮುಂಬೈ: ಬಾಲಿವುಡ್​ ನಟನೊಬ್ಬ ಸೇರಿ, ಚಲನಚಿತ್ರ, ಮನರಂಜನೆ ಕ್ಷೇತ್ರದ 11 ಮಂದಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು 28ವರ್ಷದ ರೂಪದರ್ಶಿಯೊಬ್ಬರು ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ. ಈಕೆ ಗೀತರಚನೆಕಾರರೂ ಆಗಿದ್ದು, ತನಗೆ ಸುಮಾರು 11 ಜನರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ಆರೋಪಿಸಿ, ಮುಂಬೈ ಝೋನ್​ 10 ಡಿಸಿಪಿ ಮಹೇಶ್ವರ್​ ರೆಡ್ಡಿ ಅವರನ್ನು ಸಂಪರ್ಕಿಸಿದ್ದರು. ಅವರು ಅಂಧೇರಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರಿಗೆ ಈಕೆಯ ಹೇಳಿಕೆಗಳನ್ನು ದಾಖಲಿಸುವಂತೆ ನಿರ್ದೇಶಿಸಿದ್ದಾರೆ. ಇದೀಗ ಪ್ರಕರಣವನ್ನು ಬಾಂದ್ರಾದಲ್ಲಿರುವ ಝೋನ್​ 9ರ ಡಿಸಿಪಿ ಕಚೇರಿಗೆ ವರ್ಗಾಯಿಸಲಾಗಿದೆ.

ಮಹಿಳೆ ನೀಡಿದ ದೂರಿನ ಅನ್ವಯ 9 ಗಣ್ಯರ ವಿರುದ್ಧ ಪ್ರಕರಣ ದಾಖಲಾಗಿದೆ. ಇವರೆಲ್ಲ ಬಾಲಿವುಡ್ ಮನರಂಜನಾ ಕ್ಷೇತ್ರದಲ್ಲಿ ಹೆಸರು ಮಾಡಿದವರೇ ಆಗಿದ್ದಾರೆ. ಇನ್ನು ಈ ರೂಪದರ್ಶಿ ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಪೋಸ್ಟ್ ಹಾಕಿಕೊಂಡಿದ್ದಾರೆ. ಈ ಘಟನೆಗಳು ನಡೆದಿದ್ದು 2013-2019ರ ಅವಧಿಯಲ್ಲಿ. ನಾನು 11 ಮಂದಿ ವಿರುದ್ಧ ದೂರು ನೀಡಿದ್ದೇನೆ. ಆದರೆ ಪೊಲೀಸರು 9 ಜನರ ವಿರುದ್ಧ ಮಾತ್ರ ಎಫ್​ಐಆರ್​ ದಾಖಲಿಸಿದ್ದಾರೆ. ಮುಂಬೈನಿಂದ ಹೊರಗೆ ನಡೆದ ಘಟನೆಯ ಬಗ್ಗೆ ನಾವು ಕೇಸ್​ ದಾಖಲು ಮಾಡಲು ಸಾಧ್ಯವಿಲ್ಲ ಎಂದು ಪೊಲೀಸರು ಹೇಳಿ, ಎರಡು ಘಟನೆಯನ್ನು ಪರಿಗಣಿಸಿಲ್ಲ ಎಂದು ಮಾಡೆಲ್ ಆರೋಪಿಸಿದ್ದಾರೆ. ನಾನು ಡಿಸಿಪಿ ಮಹೇಶ್ವರ್ ರೆಡ್ಡಿಯವರನ್ನು ಏಪ್ರಿಲ್​ 1ರಂದು ಭೇಟಿಯಾಗಿದ್ದೆ. ಆಗಲೇ ಎಫ್​ಐಆರ್​ ದಾಖಲಾಗಬೇಕಿತ್ತು. ಆದರೆ ಪೊಲೀಸರು ಇತ್ತೀಚೆಗೆ ಮೇ 26ರಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ 9 ಮಂದಿ ವಿರುದ್ಧ ಎಫ್​ಐಆರ್ ದಾಖಲು ಮಾಡಿದ್ದಾರೆ ಎಂದೂ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಕೊರೊನಾಗೆ ನಿವೃತ್ತ ಕೆಇಬಿ ನೌಕರ ಬಲಿ; 4 ಲಕ್ಷ ಹಣ ಕಟ್ಟಿ ಬಾಡಿ ತೆಗೆದುಕೊಂಡು ಹೋಗಿ ಅಂತಿರೋ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ

Published On - 11:11 am, Tue, 1 June 21