ಬಿಹಾರ ಚುನಾವಣೆ: ಸಮಾನ ಕ್ಷೇತ್ರಗಳಲ್ಲಿ ಬಿಜೆಪಿ – ಜೆಡಿಯು ಸ್ಪರ್ಧೆ

ಬಿಹಾರ ವಿಧಾನಸಭಾ ಚುನಾವಣೆಗೆ ಎನ್‌ಡಿಎ ಮೈತ್ರಿಕೂಟದ ಸೀಟುಗಳ ಹಂಚಿಕೆ ಅಂತಿಮವಾಗಿದೆ. ಬಿಜೆಪಿ ಹಾಗೂ ಜೆಡಿಯು ಎರಡೂ ಪಕ್ಷಗಳು ಸಮಾನ ಕ್ಷೇತ್ರಗಳಲ್ಲಿ ಸ್ಪರ್ಧೆ ನಡೆಸಲಿದ್ದು, 41 ಕ್ಷೇತ್ರಗಳನ್ನು ಮೈತ್ರಿಯ ಉಳಿದ ಪಕ್ಷಗಳಿಗೆ ಬಿಟ್ಟುಕೊಡಲಾಗಿದೆ. ಯಾವ ಯಾವ ಪಕ್ಷ ಎಷ್ಟು ಕ್ಷೇತ್ರಗಳಲ್ಲಿ ಸ್ಪರ್ಧೆ ಎಂಬ ಮಾಹಿತಿ ಇಲ್ಲಿದೆ.

ಬಿಹಾರ ಚುನಾವಣೆ: ಸಮಾನ ಕ್ಷೇತ್ರಗಳಲ್ಲಿ ಬಿಜೆಪಿ - ಜೆಡಿಯು ಸ್ಪರ್ಧೆ
ಬಿಹಾರ ಚುನಾವಣೆ: NDA ಸೀಟು ಹಂಚಿಕೆ
Updated By: Digi Tech Desk

Updated on: Oct 14, 2025 | 5:27 PM

ಬಿಹಾರ, ಅಕ್ಟೋಬರ್​ 12: 2025ರ ಬಿಹಾರ ವಿಧಾನ ಸಭಾ ಚುನಾವಣೆಗೆ ಎನ್‌ಡಿಎ ಮೈತ್ರಿಕೂಟದಲ್ಲಿ ಸೀಟು ಹಂಚಿಕೆ ಅಂತಿಮವಾಗಿದ್ದು, ಬಿಜೆಪಿ ಹಾಗೂ ಜೆಡಿಯು ತಲಾ 101 ಕ್ಷೇತ್ರಗಳಲ್ಲಿ ಸಮಾನವಾಗಿ ಸ್ಪರ್ಧಿಸಲಿವೆ. ಒಟ್ಟು 243 ಕ್ಷೇತ್ರಗಳ ಪೈಕಿ 202 ಕ್ಷೇತ್ರಗಳು ಪ್ರಮುಖ 2 ಪಕ್ಷಗಳ ಪಾಲಾಗಿದ್ದು, ಉಳಿದ ಕ್ಷೇತ್ರಗಳನ್ನ ಎಲ್‌ಜೆಪಿ , ಹೆಚ್‌ಎಎಂ, ಆರ್‌ಎಲ್ಎಂಗೆ ಹಂಚಿಕೆ ಮಾಡಲಾಗಿದೆ.

ಯಾವ ಪಕ್ಷಕ್ಕೆ ಎಷ್ಟು ಸೀಟು?

  • ಜೆಡಿಯು (JDU): 101
  • ಭಾರತೀಯ ಜನತಾ ಪಕ್ಷ (BJP): 101
  • ಎಲ್‌ಜೆಪಿ (ಆರ್‌ವಿ): 29
  • ರಾಷ್ಟ್ರೀಯ ಲೋಕ ಮೋರ್ಚಾ (RLM): 6
  • ಹೆಚ್​ಎಎಮ್​(ಎಸ್): 6

ಬಿಹಾರ ಬಿಜೆಪಿಯಿಂದ ಮಾಹಿತಿ

ಚುನಾವಣೆಗೆ ಸೀಟು ಹಂಚಿಕೆ ಬೆನ್ನಲ್ಲೇ ಮಹಾಘಟಬಂದನ್​ ಕಾಲು ಎಳೆದಿರೋ ಬಿಹಾರ ಬಿಜೆಪಿ, ಎನ್​ಡಿಎಯದ್ದು ಏಕಮತ, ಆದರೆ ಮಹಾಘಟಬಂದನ್​ದು ಭಿನ್ನಮತ ಎಂದು ವ್ಯಂಗ್ಯವಾಡಿದೆ. ಎನ್‌ಡಿಎ ಮೈತ್ರಿಕೂಟದಲ್ಲಿನ ಎಲ್ಲ ಪಕ್ಷಗಳ ನಡುವೆ ಸೀಟು ಹಂಚಿಕೆ ಪೂರ್ಣಗೊಂಡಿದೆ. ಎಲ್ಲ ಪಕ್ಷಗಳು ಒಟ್ಟಿಗೆ ಏಕತೆಯೊಂದಿಗೆ ಚುನಾವಣಾಕ್ಷೇತ್ರಕ್ಕೆ ಇಳಿದಿದ್ದೇವೆ. ಆದರೆ ಮಹಾಘಟಬಂದನ್​ನ ಪಕ್ಷಗಳು ಪರಸ್ಪರ ಕಿತ್ತಾಡಿಕೊಳ್ಳುತ್ತಿವೆ. ನಾಮಪತ್ರ ಸಲ್ಲಿಸುವ ಮುಂಚೆ ಇವರಲ್ಲಿ ಮಾತುಕತೆ ನಡೆಯಬಹುದೇ ಎಂದು ಜನ ಕೇಳುತ್ತಿದ್ದಾರೆ ಎಂದು ಬಿಹಾರ ಬಿಜೆಪಿ ಹೇಳಿದೆ.

ಬಿಹಾರ ಚುನಾವಣೆ ಎರಡು ಹಂತಗಳಲ್ಲಿ ನಡೆಯಲಿದ್ದು, ಮೊದಲ ಹಂತ ನವೆಂಬರ್ 6ರಂದು ಮತ್ತು ಎರಡನೇ ಹಂತ ನವೆಂಬರ್ 11ರಂದು ನಡೆಯಲಿದೆ. ಮತ ಎಣಿಕೆ ನವೆಂಬರ್ 14ರಂದು ನಡೆಯಲಿದೆ. ವಿರೋಧ ಪಕ್ಷಗಳ ಮೈತ್ರಿಕೂಟ ಮಹಾಘಟಬಂದನ್​​ ಅಥವಾ ಇಂಡಿಯಾ ಬ್ಲಾಕ್ (ಆರ್‌ಜಿಡಿ, ಕಾಂಗ್ರೆಸ್ ಮತ್ತು ಇತರ ಕೆಲವು ಪಕ್ಷಗಳು) ಇನ್ನು ತಮ್ಮ ಸೀಟು ಹಂಚಿಕೆ ಬಗ್ಗೆ ಪ್ರಕಟಿಸಿಲ್ಲ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:16 pm, Sun, 12 October 25