ಡಿಜೆಯ ಲೇಸರ್​ಲೈಟ್ ವಿಮಾನಕ್ಕೆ ತಂದಿತ್ತು ಆಪತ್ತು, ಪೈಲಟ್ 172 ಪ್ರಯಾಣಿಕರ ಜೀವ ಉಳಿಸಿದ್ಹೇಗೆ?

ವಿಮಾನ ಅಪಘಾತ(Plane Crash) ಕೂದಲೆಳೆಯಲ್ಲಿ ತಪ್ಪಿದೆ. ಡಿಜೆಯ ಲೇಸರ್​ ಲೈಟ್ ವಿಮಾನಕ್ಕೆ ಆಪತ್ತು ತಂದಿರುವ ಘಟನೆ ಬಿಹಾರದಲ್ಲಿ ನಡೆದಿದೆ. ವಿಮಾನ ಪಾಟ್ನಾ ವಿಮಾನ ನಿಲ್ದಾಣದಲ್ಲಿ ಇಳಿಯುವ ಹಂತದಲ್ಲಿದ್ದಾಗ ಈ ಘಟನೆ ಸಂಭವಿಸಿದೆ. ಪೈಲಟ್ ಬಹಳ ತಾಳ್ಮೆ ಮತ್ತು ತಿಳಿವಳಿಕೆಯಿಂದ ವಿಮಾನವನ್ನು ಸುರಕ್ಷಿತವಾಗಿ ಇಳಿಸಿದ್ದಾರೆ.

ಡಿಜೆಯ ಲೇಸರ್​ಲೈಟ್ ವಿಮಾನಕ್ಕೆ ತಂದಿತ್ತು ಆಪತ್ತು, ಪೈಲಟ್ 172 ಪ್ರಯಾಣಿಕರ ಜೀವ ಉಳಿಸಿದ್ಹೇಗೆ?
ವಿಮಾನ

Updated on: Apr 18, 2025 | 12:56 PM

ಪಾಟ್ನಾ, ಏಪ್ರಿಲ್ 18: ವಿಮಾನ ಅಪಘಾತ(Plane Crash) ಕೂದಲೆಳೆಯಲ್ಲಿ ತಪ್ಪಿದೆ. ಡಿಜೆಯ ಲೇಸರ್​ ಲೈಟ್ ವಿಮಾನಕ್ಕೆ ಆಪತ್ತು ತಂದಿರುವ ಘಟನೆ ಬಿಹಾರದಲ್ಲಿ ನಡೆದಿದೆ. ವಿಮಾನ ಪಾಟ್ನಾ ವಿಮಾನ ನಿಲ್ದಾಣದಲ್ಲಿ ಇಳಿಯುವ ಹಂತದಲ್ಲಿದ್ದಾಗ ಈ ಘಟನೆ ಸಂಭವಿಸಿದೆ. ಪೈಲಟ್ ಬಹಳ ತಾಳ್ಮೆ ಮತ್ತು ತಿಳಿವಳಿಕೆಯಿಂದ ವಿಮಾನವನ್ನು ಸುರಕ್ಷಿತವಾಗಿ ಇಳಿಸಿದ್ದಾರೆ.

ಈ ಘಟನೆ ಗುರುವಾರ ಸಂಜೆ ನಡೆದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇಂಡಿಗೋ ವಿಮಾನವು ಪುಣೆಯಿಂದ ಪಾಟ್ನಾಗೆ ಹೊರಟಿತ್ತು. ಪಾಟ್ನಾ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಾಗಿತ್ತು. ವಿಮಾನ ಕೆಳಗೆ ಬರಲು ಪ್ರಾರಂಭಿಸುತ್ತಿದ್ದಂತೆ, ನಿಲ್ದಾಣದ ಸ್ವಲ್ಪ ದೂರದಲ್ಲಿ ಮದುವೆ ಕಾರ್ಯಕ್ರಮವೊಂದರಲ್ಲಿ ಹಾಕಿದ್ದ ಡಿಜೆ ಲೇಸರ್​ ಲೈಟ್​ಗಳಿಂದಾಗಿ ವಿಮಾನ ಸಮತೋಲನ ಕಳೆದುಕೊಳ್ಳುವ ಸಾಧ್ಯತೆಹೆಚ್ಚಿತ್ತು. ಬಳಿಕ ಪೈಲಟ್ ವಿಮಾನವನ್ನು ಅಹಮದಾಬಾದ್​ಗೆ ಕೊಂಡೊಯ್ದಿದ್ದು ಅಲ್ಲಿ ಲ್ಯಾಂಡಿಂಗ್ ಮಾಡಿದ್ದರು.

ಆ ಸಮಯದಲ್ಲಿ ವಿಮಾನದಲ್ಲಿ 172 ಪ್ರಯಾಣಿಕರು ಇದ್ದರು , ಪೈಲಟ್ ಹೇಗೋ ಮಾಡಿ ವಿಮಾನವನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ. ವಿಮಾನವನ್ನು ಇಳಿಸಿದ ನಂತರ, ಪೈಲಟ್ ತಕ್ಷಣವೇ ವಿಮಾನ ನಿಲ್ದಾಣದ ಆಡಳಿತ ಮಂಡಳಿಗೆ ದೂರು ನೀಡಿದರು, ನಂತರ ವಿಮಾನ ನಿಲ್ದಾಣದ ಆಡಳಿತ ಮಂಡಳಿಯು ಕಾರ್ಯಪ್ರವೃತ್ತವಾಯಿತು.

ಇದನ್ನೂ ಓದಿ
ವಿಮಾನದಲ್ಲಿ ಸ್ಫೋಟ, 8 ತಿಂಗಳ ಮಗು ಸೇರಿ ನಾಲ್ಕು ಮಂದಿ ಕೆಳಗೆ ಬಿದ್ದಿದ್ರು
Video: ಸುಡಾನ್​ನಲ್ಲಿ ಸೇನಾ ವಿಮಾನ ಪತನ, 46 ಮಂದಿ ಸಾವು
ಬಸ್-ಕಾರು ನಡುವೆ ಅಪಘಾತ ಐವರು ಸಾವು, ಕಾರು ಕತ್ತರಿಸಿ ಶವ ಹೊರ ತೆಗೆದ್ರು
Video: ಅಮೆರಿಕದಲ್ಲಿ ಮನೆಗಳ ಮೇಲೆ ಪತನಗೊಂಡ ವಿಮಾನ

ಮತ್ತಷ್ಟು ಓದಿ: ಬ್ರೆಜಿಲ್ ವಿಮಾನ ಪತನ : ಜನವಸತಿ ಪ್ರದೇಶದಲ್ಲೇ ಅಪಘಾತ, 62 ಸಾವು

ವಿಮಾನ ನಿಲ್ದಾಣದ ಆಡಳಿತ ಮಂಡಳಿಯು ಘಟನೆಯ ಬಗ್ಗೆ ತಕ್ಷಣ ವಿಮಾನ ನಿಲ್ದಾಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿತು. ಆದರೆ, ಪೊಲೀಸರು ಕಾರ್ಯಪ್ರವೃತ್ತರಾಗುವ ಹೊತ್ತಿಗೆ, ಮೆರವಣಿಗೆ ತುಂಬಾ ಮುಂದೆ ಹೋಗಿತ್ತು.

ಡಿಜೆಯ ದೀಪಗಳು ಎಟಿಸಿಯ ದೀಪಗಳಂತೆಯೇ ಇದ್ದವು ಎಂದು ಹೇಳಲಾಗುತ್ತಿದೆ. ಇಳಿಯುವಾಗ ATC ತನ್ನ ದೀಪಗಳನ್ನು ಆನ್ ಮಾಡಿದ ಅದೇ ಸಮಯಕ್ಕೆ DJ ಯ ದೀಪಗಳು ಉರಿಯುತ್ತಿದ್ದವು. ಪೈಲಟ್​ಗೆ ಒಮ್ಮೆ ಗೊಂದಲ ಉಂಟಾದರೂ ಬಳಿಕ ಬುದ್ಧಿ ಉಪಯೋಗಿಸಿ ಸರಿಯಾದ ಜಾಗದಲ್ಲಿ ಇಳಿಸಿದ್ದಾರೆ.

ಸಂಜೆ 6.30ರ ಸುಮಾರಿಗೆ ಘಟನೆ ನಡೆದಿದೆ. ವಿಮಾನ ನಿಲ್ದಾಣದ ಆಸುಪಾಸಿನಲ್ಲಿ ಲೇಸರ್ ಲೈಟ್​ ಬಳಸುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ವಿಮಾನ ನಿಲ್ದಾಣದ ಅಧಿಕಾರಿಗಳು ಸ್ಥಳೀಯ ಪೊಲೀಸರನ್ನು ಒತ್ತಾಯಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ