ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಸಂಪುಟದಲ್ಲಿ ಕಟ್ಟಡ ನಿರ್ಮಾಣ ಸಚಿವ ಅಶೋಕ್ ಚೌಧರಿ ಅವರು ಮುಸ್ಲಿಮರಿಗೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮುಸ್ಲಿಮರು ಲಂಡನ್, ಅಮೆರಿಕದಿಂದ ಬಂದವರಲ್ಲ ಶೇ.90ರಷ್ಟು ಮಂದಿ ಮತಾಂತರಗೊಂಡವರು ಎನ್ನುವ ಮಾತುಗಳನ್ನಾಡಿದ್ದಾರೆ. ಭಾರತದಲ್ಲಿ ಶೇ.90ರಷ್ಟು ಮುಸ್ಲಿಮರು ಮತಾಂತರಗೊಂಡಿದ್ದಾರೆ, ದಲಿತರು ಮತಾಂತರಗೊಂಡು ಮುಸ್ಲಿಮರಾಗಿರುವುದು ಬ್ರಾಹ್ಮಣಶಾಹಿ ವ್ಯವಸ್ಥೆಯಿಂದಾಗಿ, ಇವರ್ಯಾರೂ ಹೊರಗಿನಿಂದ ಬಂದವರಲ್ಲ ಎಂದರು.
ವಾಸ್ತವವಾಗಿ, ಅಶೋಕ್ ಚೌಧರಿ ಅವರು ನಳಂದಾ ಜಿಲ್ಲಾ ಕೇಂದ್ರ ಬಿಹಾರ ಷರೀಫ್‌ನಲ್ಲಿ ಭೀಮ್ ಚೌಪಾಲ್ ಸಂದರ್ಭದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಪತ್ರಕರ್ತರು ರಂಜಾನ್ ಹಬ್ಬದಂದು ಮುಸ್ಲಿಂ ಸಿಬ್ಬಂದಿ ಒಂದು ಗಂಟೆ ಮುಂಚಿತವಾಗಿ ಕಚೇರಿಗೆ ಬರುವಂತೆ ಮತ್ತು ಒಂದು ಗಂಟೆ ಮುಂಚಿತವಾಗಿ ಕಚೇರಿಯಿಂದ ಹೊರಡುವಂತೆ ಬಿಹಾರ ಸರ್ಕಾರದ ಆದೇಶದ ಬಗ್ಗೆ ಅವರನ್ನು ಪ್ರಶ್ನಿಸಿದರು.
ಮತ್ತಷ್ಟು ಓದಿ: ನಿತೀಶ್ ಕುಮಾರ್ ಜತೆ ಮೈತ್ರಿ ಇಲ್ಲ, ಅವರನ್ನು ಮತ್ತೊಮ್ಮೆ ನಂಬಿ ಮೋಸ ಹೋಗುವುದಿಲ್ಲ: ಬಿಹಾರದ ಬಿಜೆಪಿ ನಾಯಕ
ಇದಕ್ಕೆ ಪ್ರತಿಕ್ರಿಯಿಸಿದ ಅವರು, ಭಾರತದಲ್ಲಿ ಶೇ.90ರಷ್ಟು ಮುಸ್ಲಿಮರು ಮತಾಂತರಗೊಂಡ ಮುಸ್ಲಿಮರು. ಅವರೆಲ್ಲರೂ ದಲಿತರು, ಬ್ರಾಹ್ಮಣ ವ್ಯವಸ್ಥೆಯಲ್ಲಿ ಅಸ್ಪೃಶ್ಯತೆಯಲ್ಲಿ ಸಿಕ್ಕಿಬಿದ್ದವರು, ನಂತರ ಕೆಲವರು ಮುಸ್ಲಿಮರಾದರು ಮತ್ತು ಕೆಲವರು ಬೌದ್ಧರಾದರು.
ಅಫ್ಘಾನಿಸ್ತಾನದಿಂದ ಯಾವುದೇ ಮುಸ್ಲಿಮರು ಬಂದಿಲ್ಲ ಎಂದರು. ಬಿಜೆಪಿಯು ಎಲ್ಲಾ ವಿಚಾರದಲ್ಲೂ ಹಿಂದೂ-ಮುಸ್ಲಿಂ ಕೋನವನ್ನು ಹುಡುಕುತ್ತದೆ ಎಂದಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ