ಜಿಲ್ಲಾ ಕಾರಾಗೃಹದ ಕೈದಿಯೊಬ್ಬ ಜೈಲು ಅಧಿಕಾರಿಗಳ ಕೈಗೆ ಸಿಕ್ಕಿಬೀಳುವ ಭಯದಿಂದ ತಪಾಸಣೆ ವೇಳೆ ಮೊಬೈಲ್ ಫೋನ್ ನುಂಗಿರುವ ಘಟನೆ ಬಿಹಾರದಲ್ಲಿ ವರದಿಯಾಗಿದೆ. ಖೈಶರ್ ಅಲಿ ಎಂಬಾತ ಶನಿವಾರ ತಪಾಸಣೆ ವೇಳೆ ಫೋನ್ ನುಂಗಿದ್ದಾನೆ. ಆದರೆ, ಭಾನುವಾರ ಅಲಿ ಅವರಿಗೆ ಹೊಟ್ಟೆ ನೋವು ಕಾಣಿಸಿಕೊಂಡ ನಂತರ ವಿಷಯ ಬೆಳಕಿಗೆ ಬಂದಿದೆ. ಕೈದಿ ಜೈಲು ಅಧಿಕಾರಿಗಳಿಗೆ ಮಾಹಿತಿ ನೀಡಿ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾನೆ. ತಕ್ಷಣವೇ ಅವರನ್ನು ಗೋಪಾಲ್ಗಂಜ್ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಕೈದಿಯ ಎಕ್ಸ್-ರೇಯಲ್ಲಿ ಹೊಟ್ಟೆಯಲ್ಲಿ ಮೊಬೈಲ್ಗಳ ಬಿಡಿ ಭಾಗಗಳು ಪತ್ತೆಯಾಗಿವೆ ಎಂದು ಜೈಲು ಅಧೀಕ್ಷಕ ಮನೋಜ್ ಕುಮಾರ್ ಪಿಟಿಐಗೆ ತಿಳಿಸಿದ್ದಾರೆ.
ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ವೈದ್ಯ ಸಲಾಮ್ ಸಿದ್ದಿಕಿ ಮಾತನಾಡಿ, ‘ಹೊಟ್ಟೆ ನೋವಿನಿಂದ ಖೈದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆತನ ಹೊಟ್ಟೆಯ ಎಕ್ಸ್ ರೇ ತೆಗೆಯಲಾಗಿದೆ ಅದರಲ್ಲಿ ಮೊಬೈಲ್ನ ಭಾಗಗಳು ಕಾಣಿಸಿವೆ ಎಂದು ತಿಳಿಸಿದ್ದಾರೆ.
ಆಸ್ಪತ್ರೆಯಿಂದ ವೈದ್ಯಕೀಯ ಮಂಡಳಿಯನ್ನು ರಚಿಸಲಾಗಿದೆ ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ಖೈದಿಯನ್ನು ಪಾಟ್ನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮತ್ತಷ್ಟು ಓದಿ: ಜೈಲರ್ ನಿರ್ಲಕ್ಷ್ಯದಿಂದ ವಿಚಾರಣಾಧೀನ ಕೈದಿ ಪರಾರಿ: ಶಿರಸಿ ಪೊಲೀಸರಿಂದ ಕೈದಿಗಾಗಿ ಶೋಧ
ಅಲಿ ಅವರನ್ನು ಜನವರಿ 17, 2020 ರಂದು ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ ಆಕ್ಟ್ (ಎನ್‌ಡಿಪಿಎಸ್ ಆಕ್ಟ್) ಅಡಿಯಲ್ಲಿ ಗೋಪಾಲ್‌ಗಂಜ್ ಪೊಲೀಸರು ಬಂಧಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಜೈಲಿನಲ್ಲಿದ್ದಾನೆ. ಬಿಹಾರ ಜೈಲುಗಳ ಒಳಗೆ ಕೈದಿಗಳು ಮೊಬೈಲ್ ಫೋನ್ ಬಳಸುತ್ತಿರುವುದು ಭದ್ರತಾ ಅಧಿಕಾರಿಗಳಿಗೆ ತಿಳಿದುಬಂದಿತ್ತು.
ಮಾರ್ಚ್ 2021 ರಲ್ಲಿ ರಾಜ್ಯದಾದ್ಯಂತ ಜೈಲುಗಳಲ್ಲಿ ನಡೆಸಿದ ದಾಳಿಯಲ್ಲಿ ಸುಮಾರು 35 ಸೆಲ್‌ಫೋನ್‌ಗಳು, ಏಳು ಸಿಮ್ ಕಾರ್ಡ್‌ಗಳು ಮತ್ತು 17 ಸೆಲ್‌ಫೋನ್ ಚಾರ್ಜರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕತಿಹಾರ್, ಬಕ್ಸರ್, ಗೋಪಾಲ್‌ಗಂಜ್, ನಳಂದಾ, ಹಾಜಿಪುರ, ಆರಾ, ಜೆಹಾನಾಬಾದ್ ಮತ್ತು ರಾಜ್ಯದ ಕೆಲವು ಜೈಲುಗಳಲ್ಲಿ ದಾಳಿ ನಡೆಸಲಾಗಿದೆ. ಬಿಹಾರ ಜೈಲುಗಳಲ್ಲಿ ಕೈದಿಗಳ ಮೊಬೈಲ್ ಫೋನ್ ಬಳಕೆ ಭದ್ರತಾ ಅಧಿಕಾರಿಗಳ ಮೇಲೆ ಒತ್ತಡ ಹೆಚ್ಚಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ