AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gati Shakti Express Cargo: ಭಾರತೀಯ ರೈಲ್ವೆ, ಅಂಚೆ ಇಲಾಖೆ ಸಹಯೋಗದಲ್ಲಿ ಗತಿ ಶಕ್ತಿ ಎಕ್ಸ್ಪ್ರೆಸ್ ಕಾರ್ಗೋ ಸೇವೆ ಆರಂಭ

ಫೆಬ್ರವರಿ 16ರಂದು ನಾಲ್ಕು ವಲಯಗಳಲ್ಲಿ ಕಾರ್ಗೋ ಸೇವೆಯನ್ನು ಪ್ರಾರಂಭಿಸಲಾಯಿತು. ಯೋಜನೆಯ ಮೊದಲ ಹಂತದಲ್ಲಿ ಈ ಸೇವೆಯು 15 ವಯಲಗಳನ್ನು ಒಳಗೊಂಡಿದೆ. ಈ ವಾರದ ಆರಂಭದಲ್ಲಿ ಭಾರತೀಯ ರೈಲ್ವೆ ಮತ್ತು ಭಾರತೀಯ ಅಂಚೆ ಘಟಕದ ಜಂಟಿ ಸಹಯೋಗದಲ್ಲಿ ಗತಿಶಕ್ತಿ ಎಕ್ಸ್ಪ್ರೆಸ್ ಕಾರ್ಗೋ ಸೇವೆಯನ್ನು ಪ್ರಾರಂಭಿಸಲಾಯಿತು.

Gati Shakti Express Cargo: ಭಾರತೀಯ ರೈಲ್ವೆ, ಅಂಚೆ ಇಲಾಖೆ ಸಹಯೋಗದಲ್ಲಿ ಗತಿ ಶಕ್ತಿ ಎಕ್ಸ್ಪ್ರೆಸ್ ಕಾರ್ಗೋ ಸೇವೆ ಆರಂಭ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Feb 20, 2023 | 3:32 PM

Share

ಫೆಬ್ರವರಿ 16ರಂದು ನಾಲ್ಕು ವಲಯಗಳಲ್ಲಿ ಕಾರ್ಗೋ ಸೇವೆಯನ್ನು ಪ್ರಾರಂಭಿಸಲಾಯಿತು. ಯೋಜನೆಯ ಮೊದಲ ಹಂತದಲ್ಲಿ ಈ ಸೇವೆಯು 15 ವಯಲಗಳನ್ನು ಒಳಗೊಂಡಿದೆ. ಈ ವಾರದ ಆರಂಭದಲ್ಲಿ ಭಾರತೀಯ ರೈಲ್ವೆ ಮತ್ತು ಭಾರತೀಯ ಅಂಚೆ ಘಟಕದ ಜಂಟಿ ಸಹಯೋಗದಲ್ಲಿ ಗತಿಶಕ್ತಿ ಎಕ್ಸ್ಪ್ರೆಸ್ ಕಾರ್ಗೋ (Gati Shakti Express Cargo) ಸೇವೆಯನ್ನು ಪ್ರಾರಂಭಿಸಲಾಯಿತು. ಫೆಬ್ರವರಿ 16 ರಂದು ನಾಲ್ಕು ವಲಯಗಳಲ್ಲಿ ಏಕಕಾಲದಲ್ಲಿ ಪ್ರಾರಂಭಿಸಲಾದ ಈ ಸೇವೆಯು ಕಳೆದ ವರ್ಷದ ಬಜೆಟ್‌ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಮಾಡಿರುವ ಘೋಷಣೆಗಳಲ್ಲಿ ಒಂದಾಗಿದೆ. ಸಂಪೂರ್ಣ ಸೇವೆಗಳ ಪ್ರಾರಂಭವು ಮಾರ್ಚ್ 31ರಂದು ಸೂರತ್ ಮತ್ತು ವಾರಣಾಸಿಯ ನಡುವೆ ಪ್ರಾಯೋಗಿಕ ಸಾಪ್ತಾಹಿಕ ಸೇವೆಯನ್ನು ಆರಂಭಿಸಿದ ಬಳಿಕ ಇದರ ಸಂಪೂರ್ಣ ಸೇವೆ ಆರಂಭವಾಗಲಿದೆ.

ರೈಲು ಪೋಸ್ಟ್ ಗತಿ ಶಕ್ತಿ ಎಕ್ಸ್ಪ್ರೆಸ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಕೆಲವು ಮಾಹಿತಿಗಳು ಇಲ್ಲಿವೆ:

ಪ್ರೆಸ್ ರಿಲೀಸ್‌ನಲ್ಲಿ, ರೈಲ್ವೆ ಸಚಿವಾಲಯವು ರೈಲು ಪೋಸ್ಟ್ ಗತಿ ಶಕ್ತಿ ಎಕ್ಸ್ಪ್ರೆಸ್ ಇದು ದೇಶದ ಸೇವಾ ವಲಯಕ್ಕೆ ತಡೆರಹಿತ ಲಾಜಿಸ್ಟಿಕ್ ಒದಗಿಸಲು ಭಾರತೀಯ ರೈಲ್ವೆ ಮತ್ತು ಭಾರತೀಯ ಅಂಚೆಯ ಸಹಯೋಗದ ಉಪಕ್ರಮವಾಗಿ ವಿವರಿಸಲಾಗಿದೆ. ದೆಹಲಿ-ಕೋಲ್ಕತ್ತಾ, ಬೆಂಗಳೂರು-ಗುವಾಹಟಿ, ಸೂರತ್-ಮುಜಾಫರ್‌ಪುರ ಮತ್ತು ಹೈದರಬಾದ್-ಹಜರ್ ನಿಜಾಮುದ್ದೀನ್ ಈ ವಲಯಗಳಲ್ಲಿ ಸೇವಾ ಸೌಲಭ್ಯವನ್ನು ಪ್ರಾರಂಭಿಸಲಾಗಿದೆ.

ಭಾರತೀಯ ಅಂಚೆಯು ಗ್ರಾಹಕರ ಮನೆ ಬಾಗಿಲಿನಿಂದ ಭಾರದ ಪಾರ್ಸೆಲ್‌ಗಳ ರವಾನೆಯನ್ನು ತೆಗೆದುಕೊಂಡು ಅದನ್ನು ರೈಲು ನಿಲ್ದಾಣಕ್ಕೆ ಕೊಂಡೊಯ್ಯುತ್ತದೆ. ಮತ್ತು ಆ ಪಾರ್ಸೆಲ್‌ನ್ನು ರೈಲಿನ ಮೂಲಕ ವಿಳಾಸದಾದರರ ಮನೆ ಬಾಗಿಲಿಗೆ ತಲುಪಿಸುತ್ತದೆ. ಪಾರ್ಸೆಲ್ ಲೋಡ್ ತೂಕದ ಮೇಲೆ ಯಾವುದೇ ಮಿತಿಯಿಲ್ಲ, ಸುರಕ್ಷತೆಯ ದೃಷ್ಟಿಯಿಂದ ಇವುಗಳನ್ನು ಪೆಟ್ಟಿಗೆಯಿಂದ ಮುಚ್ಚಲಾಗುತ್ತದೆ.

ಇದನ್ನೂ ಓದಿ:ಭಾರತೀಯ ರೈಲ್ವೆ ಟಿಕೆಟ್ ದರದಲ್ಲಿ ಹಿರಿಯ ನಾಗರಿಕರಿಗೆ ರಿಯಾಯಿತಿ ಏಕಿಲ್ಲ? ಸಚಿವ ಅಶ್ವಿನಿ ವೃಷ್ಣವ್ ಹೇಳಿದ್ದೇನು?

ಈ ಯೋಜನೆಯಡಿಯಲ್ಲಿ ಕಾರ್ಯನಿರ್ವಹಿಸುವ ರೈಲುಗಳು ಮೂಲ ನಿಲ್ದಾಣದಿಂದ ನಿಗದಿತ ನಿರ್ಗಮನವನ್ನು ಹೊಂದಿರುತ್ತದೆ ಮತ್ತು ಮಧ್ಯಂತರ ಮತ್ತು ಗಮ್ಯಸ್ಥಾನದ ನಿಲ್ದಾಣಗಳಿಗೆ ನಿಗದಿತ ಪ್ರವೇಶವನ್ನು ಹೊಂದಿರುತ್ತದೆ. ಈ ಪಾರ್ಸೆಲ್ ಸೌಲಭ್ಯವನ್ನು ಪಡೆಯುವ ಗ್ರಾಹಕರಿಗೆ ಅಂಚೆ ಇಲಾಖೆಯಿಂದ ಮೂರನೇ ವ್ಯಕ್ತಿಯ ವಿಮೆಯನ್ನು ನೀಡಲಾಗುತ್ತದೆ. ಇದನ್ನು ಸರಕು ಮೌಲ್ಯದ 0.03%ನಲ್ಲಿ ನೀಡಲಾಗುತ್ತದೆ.

ಸರಕುಗಳ ರವಾನೆಯ ಪ್ರಯಾಣದುದ್ದಕ್ಕೂ, ಭಾರತೀಯ ಅಂಚೆ ಮಾತ್ರ ಗ್ರಾಹಕರಿಗೆ ಏಕೈಕ ಸಂಪಕ್ ಮಾರ್ಗವಾಗಿರುತ್ತದೆ. ಗ್ರಾಹಕರು ತಮ್ಮ ಸರಕುಗಳನ್ನು ಕಾಯ್ದಿರಿಸಲು, ಮತ್ತು ಪಾರ್ಸೆಲ್‌ಗಳ ಸ್ಥಿತಿಯನ್ನು ಟ್ಯ್ರಾಯಕ್ ಮಾಡಲು ಹಾಗೂ ಇತರ ಸೇವೆಗಳನ್ನು ಒದಗಿಸಲು ಮೊಬೈಲ್ ಅಪ್ಲಿಕೇಶನ್‌ನನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ