ಭಾರತೀಯ ರೈಲ್ವೆ ಟಿಕೆಟ್ ದರದಲ್ಲಿ ಹಿರಿಯ ನಾಗರಿಕರಿಗೆ ರಿಯಾಯಿತಿ ಏಕಿಲ್ಲ? ಸಚಿವ ಅಶ್ವಿನಿ ವೃಷ್ಣವ್ ಹೇಳಿದ್ದೇನು?
ಹಿರಿಯ ನಾಗರಿಕರಿಗೆ ರೈಲು ದರದಲ್ಲಿ ನೀಡಲಾಗುತ್ತಿದ್ದ ರಿಯಾಯಿತಿಯನ್ನು ಮರು ಆರಂಭಿಸುವ ಆಲೋಚನೆಯಿಲ್ಲ ಎಂದು ಕೇಂದ್ರ ಸರ್ಕಾರ ಈಗಾಗಲೇ ಹೇಳಿದೆ. ಇದಕ್ಕೆ ಸಾಕಷ್ಟು ವಿರೋಧಗಳು ವ್ಯಕ್ತವಾಗಿದ್ದವು,
ಹಿರಿಯ ನಾಗರಿಕರಿಗೆ ರೈಲು ದರದಲ್ಲಿ ನೀಡಲಾಗುತ್ತಿದ್ದ ರಿಯಾಯಿತಿಯನ್ನು ಮರು ಆರಂಭಿಸುವ ಆಲೋಚನೆಯಿಲ್ಲ ಎಂದು ಕೇಂದ್ರ ಸರ್ಕಾರ ಈಗಾಗಲೇ ಹೇಳಿದೆ. ಇದಕ್ಕೆ ಸಾಕಷ್ಟು ವಿರೋಧಗಳು ವ್ಯಕ್ತವಾಗಿದ್ದವು, ಈ ಕುರಿತು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ಮಹೇಶ್ ಉತ್ತರ ನೀಡಿದ್ದಾರೆ. ಭಾರತೀಯ ರೈಲ್ವೆಯು ಪ್ರಯಾಣಿಕರ ದರಗಳು ಮತ್ತು ಅಗತ್ಯ ಸರಕುಗಳಿಗೆ ಹೆಚ್ಚು ರಿಯಾಯಿತಿ ನೀಡುತ್ತದೆ. 2019-20ರಲ್ಲಿ ಸಬ್ಸಿಡಿಯಿಂದ ರೈಲ್ವೇ ಒಟ್ಟು 64,523 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ ಎಂದರು.
ವೆಚ್ಚಕ್ಕಿಂತ ಕಡಿಮೆ ದರದ ದರಗಳು ಮತ್ತು ಇತರ ಸಾಮಾಜಿಕ ಸೇವಾ ಜವಾಬ್ದಾರಿಗಳಿಂದಾಗಿ ರೂ 45,000 ಕೋಟಿ ನಷ್ಟ ಉಂಟಾಗಿದೆ. ಸಬರ್ಬನ್ ಸೇವೆಗಳ ಕಡಿಮೆ ಬೆಲೆಯಿಂದಾಗಿ ರೂ 7,000 ಕೋಟಿ ರೂ ನಷ್ಟವಾಗಿದೆ. (ಪ್ರತಿ ಪ್ರಯಾಣಿಕರಿಗೆ 19 ಪೈಸೆ) -ಪ್ರಯಾಣಿಕರ ದರದಲ್ಲಿ ವಿವಿಧ ರಿಯಾಯಿತಿಯಿಂದಾಗಿ 2000 ಕೋಟಿ ರೂ ನಷ್ಟುಂಟಾಗಿದೆ.
– ಪಾರ್ಸೆಲ್, ಲಗೇಜ್, ಪೋಸ್ಟಲ್ ಮತ್ತು ಕೇಟರಿಂಗ್ ಸೇವೆಗಳಲ್ಲಿನ ನಷ್ಟದಿಂದಾಗಿ 5800 ಕೋಟಿ ರೂ. ನಷ್ಟ ಅನುಭವಿಸಿದೆ. ಈಗಾಗಲೇ ಸಾಕಷ್ಟು ರಿಯಾಯಿತಿ ಇರುವುದರಿಂದ ಇದೀಗ ಮತ್ತೆ ಹಿರಿಯ ನಾಗರಿಕರಿಗೆ ರಿಯಾಯಿತಿ ನೀಡಿದರೆ ಇಲಾಖೆ ಮತ್ತಷ್ಟು ಪೆಟ್ಟು ತಿನ್ನಲಿದೆ ಎಂದು ಮನದಟ್ಟು ಮಾಡಿಕೊಟ್ಟರು.
ಮಾರ್ಚ್ 2020ರಲ್ಲಿ ಕೋವಿಡ್ ಸಂದರ್ಭದಲ್ಲಿ ಹೇರಲಾಗಿದ್ದ ಲಾಕ್ಡೌನ್ಗೆ ಮುಂಚಿತವಾಗಿ ಹಿರಿಯ ನಾಗರಿಕರಿಗೆ ರೈಲು ದರಗಳಲ್ಲಿ ನೀಡಲಾಗುತ್ತಿದ್ದ ಶೇ.50ರಷ್ಟು ರಿಯಾಯಿತಿಯನ್ನು ಭಾರತೀಯ ರೈಲ್ವೆ ಅಂತ್ಯಗೊಳಿಸಿತ್ತು.
ಕಡಿಮೆ ಪ್ರಯಾಣ ದರ, ರಿಯಾಯಿತಿಗಳ ಕಾರಣ ಇಲಾಖೆ ಈಗಾಗಲೇ ಬಹಳಷ್ಟು ನಷ್ಟ ಅನುಭವಿಸಿದೆ. ವಿವಿಧ ದರ್ಜಗಳಲ್ಲಿನ ಪ್ರಯಾಣದರಗಳು ಕಡಿಮೆ ಇದೆ ಎಂದು ಸಚಿವರು ವಿವರಣೆ ನೀಡಿದರು. ಕೋವಿಡ್ ಪರಿಸ್ಥಿತಿ ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ಟಿಕೆಟ್‌ಗಳ ಆದಾಯ ಕಡಿಮೆಯಾಗಿದೆ.
ಕೊರೊನಾ ಸೋಂಕು ಹಿರಿಯ ನಾಗರಿಕರಿಗೆ ಸುಲಭವಾಗಿ ತಗುಲಬಹುದಾದ್ದರಿಂದ ಅವರನ್ನು ಪ್ರಯಾಣದಿಂದ ನಿರುತ್ತೇಜಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿತ್ತು.
2019-20ಕ್ಕೆ ಹೋಲಿಕೆ ಮಾಡಿದರೆ ಆರ್ಥಿಕ ನಷ್ಟವಾಗುತ್ತಿದೆ. ರಿಯಾಯಿತಿ ನೀಡುವುದರಿಂದ ಹೆಚ್ಚಿನ ಹೊರೆಯಾಗಲಿದೆ ಎಂದು ಸಚಿವರು ತಿಳಿಸಿದರು.
Published On - 6:39 pm, Sat, 23 July 22