50 ಕೇಂದ್ರಗಳಲ್ಲಿ ಸ್ಪೋಕನ್ ಇಂಗ್ಲಿಷ್ ಕೋರ್ಸ್ ಆರಂಭ: ಅರವಿಂದ್ ಕೇಜ್ರಿವಾಲ್

50 ಕೇಂದ್ರಗಳಲ್ಲಿ ಸ್ಪೋಕನ್ ಇಂಗ್ಲಿಷ್ ಕೋರ್ಸ್ ಅನ್ನು ಪ್ರಾರಂಭಿಸಲಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶನಿವಾರ ಘೋಷಿಸಿದ್ದಾರೆ. ಆನ್‌ ಲೈನ್ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅರವಿಂದ್ ಕೇಜ್ರಿವಾಲ್, 12ನೇ ತರಗತಿಯನ್ನು ಪೂರ್ಣಗೊಳಿಸಿದ ಮತ್ತು 18-35 ವರ್ಷದೊಳಗಿನ ಯಾವುದೇ ವ್ಯಕ್ತಿ ಕಾರ್ಯಕ್ರಮದ ಭಾಗವಾಗಬಹುದು.

50 ಕೇಂದ್ರಗಳಲ್ಲಿ ಸ್ಪೋಕನ್ ಇಂಗ್ಲಿಷ್ ಕೋರ್ಸ್ ಆರಂಭ: ಅರವಿಂದ್ ಕೇಜ್ರಿವಾಲ್
Arvind Kejriwal
TV9kannada Web Team

| Edited By: ಅಕ್ಷಯ್​ ಕುಮಾರ್​​

Jul 23, 2022 | 5:59 PM

ದೆಹಲಿ: ದೆಹಲಿ ಸರ್ಕಾರವು ನಗರದಾದ್ಯಂತ 50 ಕೇಂದ್ರಗಳಲ್ಲಿ ಸ್ಪೋಕನ್ ಇಂಗ್ಲಿಷ್ ಕೋರ್ಸ್ ಅನ್ನು ಪ್ರಾರಂಭಿಸಲಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶನಿವಾರ ಘೋಷಿಸಿದ್ದಾರೆ. ಆನ್‌ ಲೈನ್ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅರವಿಂದ್ ಕೇಜ್ರಿವಾಲ್, 12ನೇ ತರಗತಿಯನ್ನು ಪೂರ್ಣಗೊಳಿಸಿದ ಮತ್ತು 18-35 ವರ್ಷದೊಳಗಿನ ಯಾವುದೇ ವ್ಯಕ್ತಿ ಕಾರ್ಯಕ್ರಮದ ಭಾಗವಾಗಬಹುದು. ಮೊದಲ ಹಂತದಲ್ಲಿ 1 ಲಕ್ಷ ಮಕ್ಕಳಿಗೆ ತರಬೇತಿ ನೀಡುವ ಮೂಲಕ ಇಂಗ್ಲಿಷ್ ಸಂವಹನ ಕೌಶಲ್ಯವನ್ನು ಸುಧಾರಿಸುವ ಕಾರ್ಯಕ್ರಮದಲ್ಲಿ ಪ್ರವೇಶ ನೀಡಲಾಗುವುದು ಎಂದರು.

ಸ್ಪೋಕನ್ ಇಂಗ್ಲಿಷ್ ಕಾರ್ಯಕ್ರಮದ ಮೊದಲ ಹಂತದಲ್ಲಿ, ನಾವು ಈ ಕೋರ್ಸ್ ಅನ್ನು 50 ಕೇಂದ್ರಗಳಲ್ಲಿ ಪ್ರಾರಂಭಿಸುತ್ತೇವೆ, ಅಲ್ಲಿ 1 ಲಕ್ಷ ಮಕ್ಕಳು ದಾಖಲಾಗುತ್ತಾರೆ. 18-35 ವರ್ಷ ವಯಸ್ಸಿನ ಯಾವುದೇ 12 ನೇ ತರಗತಿ ತೇರ್ಗಡೆಯಾದ ವಿದ್ಯಾರ್ಥಿಗಳು ಇದರ ಭಾಗವಾಗಬಹುದು. ಈ ಕೋರ್ಸ್ ಉದ್ಯೋಗ ಪಡೆಯಲು ಮತ್ತು ಅವರ ವ್ಯಕ್ತಿತ್ವವನ್ನು ಅಭಿವೃದ್ಧಿಪಡಿಸಲು ಅವರಿಗೆ ಸಹಾಯ ಮಾಡಿ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಕೋರ್ಸ್‌ಗೆ ಯಾವುದೇ ಶುಲ್ಕವಿರುವುದಿಲ್ಲ ಆದರೆ ಆರಂಭದಲ್ಲಿ ಜನರು ₹ 950 ಅನ್ನು ಭದ್ರತಾ ಹಣವಾಗಿ ಠೇವಣಿ ಮಾಡಬೇಕಾಗುತ್ತದೆ ಎಂದು ಅವರು ಹೇಳಿದರು. ಸಂಪೂರ್ಣ ಹಾಜರಾತಿಯೊಂದಿಗೆ ಕೋರ್ಸ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಈ ಭದ್ರತಾ ಹಣವನ್ನು ಮರುಪಾವತಿಸಲಾಗುತ್ತದೆ. ಇದು 3-4 ತಿಂಗಳ ಕೋರ್ಸ್ ಆಗಿರುತ್ತದೆ ಮತ್ತು ಕೆಲಸ ಮಾಡುವ ಯುವಕರಿಗೆ ವಾರಾಂತ್ಯ ಮತ್ತು ಸಂಜೆ ಪಾಳಿಗಳ ಆಯ್ಕೆಗಳು ಸಹ ಇರುತ್ತವೆ ಹೇಳಿದ್ದಾರೆ.

ಇದನ್ನೂ ಓದಿ

ಪ್ರವೇಶ ಪಡೆಯಲು ಇಂಗ್ಲಿಷ್‌ನ ಮೂಲಭೂತ ತಿಳುವಳಿಕೆ ಅಗತ್ಯವಿದ್ದು, ಮಕ್ಕಳು 8ನೇ ತರಗತಿವರೆಗೆ ಇಂಗ್ಲಿಷ್ ಭಾಷೆಯನ್ನು ಕಲಿತಿರಬೇಕು ಎಂದು ಹೇಳಿದರು. ಸರ್ಕಾರದ ದೆಹಲಿ ಕೌಶಲ್ಯ ವಾಣಿಜ್ಯೋದ್ಯಮ ವಿಶ್ವವಿದ್ಯಾಲಯವು ಕೋರ್ಸ್ ನಡೆಸಲಿದೆ, ಇದು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಮೌಲ್ಯಮಾಪನ ಮಾಡುವುದರಿಂದ ಇದು ಅಂತರರಾಷ್ಟ್ರೀಯ ಗುಣಮಟ್ಟದ ಕಾರ್ಯಕ್ರಮವಾಗಲಿದೆ ಎಂದು ಹೇಳಿದರು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada