AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bhagwant Mann: ಪಂಜಾಬ್ ಸಿಎಂ ಭಗವಂತ್ ಮಾನ್ ನಿವಾಸಕ್ಕೆ 10 ಸಾವಿರ ರೂ. ದಂಡ

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ನಿವಾಸಕ್ಕೆ 10 ಸಾವಿರ ರೂ. ದಂಡ ವಿಧಿಸಲಾಗಿದೆ. ನಿವಾಸದೆದುರು ಕಸ ಸುರಿದಿದ್ದಕ್ಕಾಗಿ ಚಂಡೀಗಢ ಮುನ್ಸಿಪಲ್ ಕಾರ್ಪೊರೇಷನ್ ದಂಡ ವಿಧಿಸಿದೆ.

Bhagwant Mann: ಪಂಜಾಬ್ ಸಿಎಂ ಭಗವಂತ್ ಮಾನ್ ನಿವಾಸಕ್ಕೆ 10 ಸಾವಿರ ರೂ. ದಂಡ
Bhagwant Mann
TV9 Web
| Edited By: |

Updated on: Jul 23, 2022 | 5:57 PM

Share

ಚಂಡೀಗಢ: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ನಿವಾಸಕ್ಕೆ 10 ಸಾವಿರ ರೂ. ದಂಡ ವಿಧಿಸಲಾಗಿದೆ. ನಿವಾಸದೆದುರು ಕಸ ಸುರಿದಿದ್ದಕ್ಕಾಗಿ ಚಂಡೀಗಢ ಮುನ್ಸಿಪಲ್ ಕಾರ್ಪೊರೇಷನ್ ದಂಡ ವಿಧಿಸಿದೆ. ಕೇಂದ್ರೀಯ ಮೀಸಲು ಪೊಲೀಸ್ ಪಡೆ ಬೆಟಾಲಿಯನ್‌ನ ಉಪ ಪೊಲೀಸ್ ವರಿಷ್ಠಾಧಿಕಾರಿ ಹರ್ಜಿಂದರ್ ಸಿಂಗ್ ಅವರ ಹೆಸರಿನಲ್ಲಿ ಚಲನ್ ನೀಡಲಾಗಿದೆ.

ಸ್ಥಳೀಯ ಬಿಜೆಪಿ ಪುರಸಭಾ ಸದಸ್ಯ ಮಹೇಶಿಂದರ್ ಸಿಂಗ್ ಸಿಧು ಮಾತನಾಡಿ, ಕೆಲ ದಿನಗಳಿಂದ ಮುಖ್ಯಮಂತ್ರಿ ನಿವಾಸದ ಮನೆ ಸಂಖ್ಯೆ-7ರ ಹಿಂಭಾಗದಲ್ಲಿ ಸಿಬ್ಬಂದಿಯಿಂದ ಕಸ ವಿಲೇವಾರಿ ಕುರಿತು ನಿವಾಸಿಗಳಿಂದ ದೂರುಗಳು ಬರುತ್ತಿತ್ತು. ಮನೆ ಸಂಖ್ಯೆ 44, 45, 6 ಮತ್ತು 7 ಮುಖ್ಯಮಂತ್ರಿ ನಿವಾಸದ ಭಾಗವಾಗಿದೆ ಎಂದು ಹೇಳಿದರು.

ಇನ್ನು ಸಿಎಂ ನಿವಾಸದ ಸಿಬ್ಬಂದಿಗೂ ಮನೆಯಿಂದ ಹೊರಗೆ ತ್ಯಾಜ್ಯ ಎಸೆಯದಂತೆ ಹಲವು ಬಾರಿ ಮನವಿ ಮಾಡಿದ್ದರೂ ನಿಲ್ಲಿಸಿಲ್ಲ ಎಂದರು. ಹೀಗಾಗಿ ಚಲನ್ ನೀಡಲಾಗಿದೆ ಎಂದರು. ಮನೆ ಸಂಖ್ಯೆ 44, 45, 6 ಮತ್ತು 7 ಮುಖ್ಯಮಂತ್ರಿಗಳ ನಿವಾಸದ ಭಾಗವಾಗಿದೆ ಎಂದು ಬಿಜೆಪಿ ನಾಯಕ ಹೇಳಿದರು.

ಕಸ ಹಾಕುತ್ತಿದ್ದ ಬಗ್ಗೆ ಸಾರ್ವಜನಿಕರಿಂದ ದೂರು ಕೇಳಿಬರುತ್ತಿದ್ದ ಹಿನ್ನೆಲೆ ಚಂಡೀಗಢ ನಗರ ಪಾಲಿಕೆ ಶನಿವಾರ ಬೆಳಗ್ಗೆ 10 ಸಾವಿರ ರೂ. ದಂಡದ ಚಲನ್‌ ನೀಡಿದೆ. ಅಂದಹಾಗೆ, ಈ ಚಲನ್‌ ನೀಡಿರುವುದು ಪಂಜಾಬ್‌ ಮುಖ್ಯಮಂತ್ರಿ ಭಗವಂತ ಮಾನ್‌ ಹೆಸರಿನಲ್ಲಿ ಅಲ್ಲ.

ಬದಲಾಗಿ ಕೇಂದ್ರ ಮೀಸಲು ಪೊಲೀಸ್‌ ಪಡೆ ಬೆಟಾಲಿಯನ್‌ ಡೆಪ್ಯುಟಿ ಸೂಪರಿಟೆಂಡೆಂಟ್‌ ಆಫ್‌ ಪೊಲೀಸ್‌ ಹರ್ಜಿಂದರ್‌ ಸಿಂಗ್ ಹೆಸರಿನಲ್ಲಿ ಎಂಬುದು ಗೊತ್ತಾಗಿದೆ. ಮನೆ ನಂಬರ್ – 7, ಸೆಕ್ಟರ್ – 2, ಚಂಡೀಗಢ ಎಂಬ ಮನೆಯ ವಿಳಾಸಕ್ಕೆ ಈ 10 ಸಾವಿರ ರೂ. ದಂಡ ಮೊತ್ತದ ಚಲನ್‌ ಅನ್ನು ನೀಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

Follow Us
ಕಲಬುರಗಿ ಕೇಂದ್ರ ಕಾರಾಗೃಹದ ಮೇಲೆ ಪೊಲೀಸರ ದಾಳಿ: ಕೈದಿಯಿಂದ ಮೊಬೈಲ್​​ ವಶ
ಕಲಬುರಗಿ ಕೇಂದ್ರ ಕಾರಾಗೃಹದ ಮೇಲೆ ಪೊಲೀಸರ ದಾಳಿ: ಕೈದಿಯಿಂದ ಮೊಬೈಲ್​​ ವಶ
ಮಂಡ್ಯದ ವಸತಿಶಾಲೆಯಲ್ಲಿ ಮಕ್ಕಳಿಗೆ ಫುಡ್ ಪಾಯಿಸನ್
ಮಂಡ್ಯದ ವಸತಿಶಾಲೆಯಲ್ಲಿ ಮಕ್ಕಳಿಗೆ ಫುಡ್ ಪಾಯಿಸನ್
‘ಜೈಲಿನಲ್ಲಿ ಖುದ್ದು ಹಾಜರಿ ಬೇಕು’; ಹೈಕೋರ್ಟ್​​ನಲ್ಲಿ ದರ್ಶನ್ ಅರ್ಜಿ
‘ಜೈಲಿನಲ್ಲಿ ಖುದ್ದು ಹಾಜರಿ ಬೇಕು’; ಹೈಕೋರ್ಟ್​​ನಲ್ಲಿ ದರ್ಶನ್ ಅರ್ಜಿ
ಅಸಲಿ ಮುಖ ತೋರಿಸೋಕೆ ಆರಂಭಿಸಿದ ಸೌಂದರ್ಯಾ ಶೆಟ್ಟಿ; ಅಣಕಿಸಿದ ವಿಡಿಯೋ ವೈರಲ್
ಅಸಲಿ ಮುಖ ತೋರಿಸೋಕೆ ಆರಂಭಿಸಿದ ಸೌಂದರ್ಯಾ ಶೆಟ್ಟಿ; ಅಣಕಿಸಿದ ವಿಡಿಯೋ ವೈರಲ್
ಡಿಕೆಶಿ ಸರ್ಕಾರಕ್ಕೆ 100 ದಿನ: ಕೆಆರ್​ಎಸ್ ಡ್ಯಾಂಗೆ ಕಲರ್​ಫುಲ್​ ​ಲೈಟಿಂಗ್
ಡಿಕೆಶಿ ಸರ್ಕಾರಕ್ಕೆ 100 ದಿನ: ಕೆಆರ್​ಎಸ್ ಡ್ಯಾಂಗೆ ಕಲರ್​ಫುಲ್​ ​ಲೈಟಿಂಗ್
ಸತೀಶ್ ಜಾರಕಿಹೊಳಿ ನಿವಾಸದಲ್ಲಿ ತಡರಾತ್ರಿ 2 ಗಂಟೆವರೆಗೆ ಇಡಿ ಶೋಧ
ಸತೀಶ್ ಜಾರಕಿಹೊಳಿ ನಿವಾಸದಲ್ಲಿ ತಡರಾತ್ರಿ 2 ಗಂಟೆವರೆಗೆ ಇಡಿ ಶೋಧ
ಗುರುಗಳ ಲಹರಿ ಇರುವ ಶುಭ ದಿನ: ಸೆಪ್ಟೆಂಬರ್ 10 ರ ರಾಶಿ ಭವಿಷ್ಯ
ಗುರುಗಳ ಲಹರಿ ಇರುವ ಶುಭ ದಿನ: ಸೆಪ್ಟೆಂಬರ್ 10 ರ ರಾಶಿ ಭವಿಷ್ಯ
ಬಾಂಗ್ಲಾದೇಶ ಸೇನೆಯ ಟ್ಯಾಂಕ್ ಫೈರಿಂಗ್ ಅಭ್ಯಾಸದ ವೇಳೆ ಸ್ಫೋಟ; ಇಬ್ಬರು ಸಾವು
ಬಾಂಗ್ಲಾದೇಶ ಸೇನೆಯ ಟ್ಯಾಂಕ್ ಫೈರಿಂಗ್ ಅಭ್ಯಾಸದ ವೇಳೆ ಸ್ಫೋಟ; ಇಬ್ಬರು ಸಾವು
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಬಿಜೆಪಿಎಂಎಲ್​ಎಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಬಿಜೆಪಿಎಂಎಲ್​ಎಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ