Bhagwant Mann: ಅನಾರೋಗ್ಯದಿಂದ ರಾತ್ರೋರಾತ್ರಿ ಪಂಜಾಬ್ ಸಿಎಂ ಭಗವಂತ್ ಮಾನ್ ಆಸ್ಪತ್ರೆಗೆ ದಾಖಲು
ದೆಹಲಿಯ ಸರಿತಾ ವಿಹಾರ್ ಪ್ರದೇಶದ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಯಲ್ಲಿ ಭಗವಂತ್ ಮಾನ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಹೊಟ್ಟೆಗೆ ಸೋಂಕು ತಗುಲಿದೆ.
ನವದೆಹಲಿ: ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ (Bhagwant Mann) ಅವರನ್ನು ಬುಧವಾರ ತಡರಾತ್ರಿ ದೆಹಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಜಧಾನಿ ದೆಹಲಿಯ ಸರಿತಾ ವಿಹಾರ್ ಪ್ರದೇಶದ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಯಲ್ಲಿ ಭಗವಂತ್ ಮಾನ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಹೊಟ್ಟೆಗೆ ಸೋಂಕು ತಗುಲಿದೆ ಎಂದು ವೈದ್ಯಕೀಯ ಪರೀಕ್ಷೆ ವೇಳೆ ಪತ್ತೆಯಾಗಿದೆ.
ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗುವ ಮುನ್ನ ರಾಜ್ಯದಲ್ಲಿ ಇಬ್ಬರು ದರೋಡೆಕೋರರ ವಿರುದ್ಧ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿದ ಪಂಜಾಬ್ ಪೊಲೀಸರು ಮತ್ತು ದರೋಡೆಕೋರರ ನಿಗ್ರಹ ಕಾರ್ಯಪಡೆಯನ್ನು ಪಂಜಾಬ್ ಸಿಎಂ ಭಗವಂತ್ ಮಾನ್ ಅಭಿನಂದಿಸಿದ್ದರು. ಅಮೃತಸರದ ಭಕ್ನಾ ಗ್ರಾಮದಲ್ಲಿ ಪಂಜಾಬ್ ಪೊಲೀಸರೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ದರೋಡೆಕೋರರಾದ ಜಗ್ರೂಪ್ ಸಿಂಗ್ ರೂಪ ಮತ್ತು ಮನ್‌ಪ್ರೀತ್ ಸಿಂಗ್, ಅಲಿಯಾಸ್ ಮಣ್ಣು ಕುಸಾ ಹತ್ಯೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Punjab CM Bhagwant Mann admitted to hospital in Delhi
Read @ANI Story | https://t.co/VSMw7uQJJM#BhagwantMann #PunjabCM pic.twitter.com/FEloBfBkmJ
— ANI Digital (@ani_digital) July 21, 2022
ಇದನ್ನೂ ಓದಿ: Amritsar Encounter ಪಂಜಾಬ್ ಪೊಲೀಸರಿಂದ ಸಿಧು ಮೂಸೆವಾಲ ಹತ್ಯೆ ಪ್ರಕರಣದ ಶಂಕಿತ 4 ಗ್ಯಾಂಗ್ಸ್ಟರ್ಗಳ ಹತ್ಯೆ
ಈ ತಿಂಗಳ ಆರಂಭದಲ್ಲಿ ಭಗವಂತ್ ಮಾನ್ ಅವರು ಡಾ. ಗುರುಪ್ರೀತ್ ಕೌರ್ ಅವರೊಂದಿಗೆ ಸಿಖ್ ಸಂಪ್ರದಾಯದಂತೆ ವಿವಾಹವಾಗಿದ್ದರು. ಆಮ್ ಆದ್ಮಿ ಪಕ್ಷದ ನಾಯಕ ಭಗವಂತ್ ಮಾನ್ ಮಾರ್ಚ್ 16ರಂದು ಪಂಜಾಬ್ ಅಸೆಂಬ್ಲಿ ಚುನಾವಣೆಯಲ್ಲಿ 92 ಸ್ಥಾನಗಳನ್ನು ಗೆದ್ದಿದ್ದರು. ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಭಗವಂತ್ ಮಾನ್ ಪಂಜಾಬ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. 117 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ 18 ಸ್ಥಾನಗಳನ್ನು ಗೆದ್ದಿದೆ.
Published On - 9:58 am, Thu, 21 July 22