ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮದುವೆ ನಾಳೆ; ಇದು ಎರಡನೇ ವಿವಾಹ
ಭಗವಂತ್ ಮಾನ್ ಸಾಹೇಬ್ ಅವರು ಖಾಸಗಿ ಸಮಾರಂಭದಲ್ಲಿ ನಾಳೆ ಮದುವೆಯಾಗಲಿದ್ದಾರೆ. ಡಾ.ಗುರುಪ್ರೀತ್ ಕೌರ್ ಅವರನ್ನು ಮಾನ್ ಮದುವೆಯಾಗಲಿದ್ದಾರೆ ಎಂದು ಎಎಪಿ ಹಿರಿಯ ನಾಯಕ, ವರ್ಕಾರ ಮಲ್ವಿಂದರ್ ಸಿಂಗ್ ಕಾಂಗ್ ಹೇಳಿದ್ದಾರೆ.
ಚಂಡೀಗಢ: ಪಂಜಾಬ್ (Punjab) ಮುಖ್ಯಮಂತ್ರಿ ಭಗವಂತ್ ಮಾನ್ (Bhagwant Mann) ನಾಳೆ ಚಂಡೀಗಢದಲ್ಲಿ ವಿವಾಹವಾಗಲಿದ್ದಾರೆ. 48ರ ಹರೆಯದ ಮಾನ್ ಗುರುಪ್ರೀತ್ ಕೌರ್ ಎಂಬವರನ್ನು ವರಿಸಲಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ. ಸರಳವಾಗಿ ನಡೆಯುವ ವಿವಾಹದಲ್ಲಿ ಕುಟುಂಬ ಮತ್ತು ಆಪ್ತರು ಮಾತ್ರ ಭಾಗವಹಿಸಲಿದ್ದಾರೆ. ದೆಹಲಿ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ (Arvind Kejriwal) ಅವರು ಮದುವೆಯಲ್ಲಿ ಭಾಗಿಯಾಗುವ ಸಾಧ್ಯತೆ ಇದೆ . ಮಾನ್ ಸಾಹೇಬ್ ಅವರು ಖಾಸಗಿ ಸಮಾರಂಭದಲ್ಲಿ ನಾಳೆ ಮದುವೆಯಾಗಲಿದ್ದಾರೆ. ಡಾ.ಗುರುಪ್ರೀತ್ ಕೌರ್ ಅವರನ್ನು ಮಾನ್ ಮದುವೆಯಾಗಲಿದ್ದಾರೆ ಎಂದು ಎಎಪಿ ಹಿರಿಯ ನಾಯಕ, ವರ್ಕಾರ ಮಲ್ವಿಂದರ್ ಸಿಂಗ್ ಕಾಂಗ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ. ಈ ಹಿಂದೆ ಸ್ಟ್ಯಾಂಡಪ್ ಕಾಮಿಡಿಯನ್ ಆಗಿದ್ದ ಮಾನ್ ಆರು ವರ್ಷಗಳ ಹಿಂದೆ ವಿವಾಹ ವಿಚ್ಛೇದನ ಪಡೆದಿದ್ದರು. ಹಿಂದಿನ ವೈವಾಹಿಕ ಸಂಬಂಧದಲ್ಲಿ ಅವರಿಗೆ ಇಬ್ಬರು ಮಕ್ಕಳಿವೆ. ಅವರ ಮಕ್ಕಳು ಅಮೆರಿಕದಲ್ಲಿ ಅವರ ಅಮ್ಮನ ಜತೆ ವಾಸವಾಗಿದ್ದಾರೆ. ಮಾರ್ಚ್ 16ರಂದು ಮಾನ್ ಅವರ ಪ್ರಮಾಣವಚನ ಸಮಾರಂಭದಲ್ಲಿ ಮಕ್ಕಳು ಭಾಗವಹಿಸಿದ್ದರು .
Punjab CM Bhagwant Mann will get married in a close private ceremony at his house in Chandigarh tomorrow with Dr Gurpreet Kaur. CM Delhi & AAP National convener Arvind Kejriwal will be in attendance. CM Mann was divorced from his earlier marriage almost 6 years back.
(file pic) pic.twitter.com/tC3Zd2LGfv
— ANI (@ANI) July 6, 2022
ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಜಯಭೇರಿ ಬಾರಿಸಿ ಕಾಂಗ್ರೆಸ್ ಸರ್ಕಾರವನ್ನು ಕೆಳಗಿಳಿಸಿತ್ತು.