AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಹಾರ: ತರಗತಿಯನ್ನೇ ಬೆಡ್​ ರೂಂ ಆಗಿ ಪರಿವರ್ತಿಸಿಕೊಂಡ ಪ್ರಾಂಶುಪಾಲರು

ಬಿಹಾರದ ಶಾಲೆಯೊಂದರಲ್ಲಿ ಪ್ರಾಂಶುಪಾಲರು ಮತ್ತು ಅವರ ಕುಟುಂಬದವರು ಕಟ್ಟಡದ ಒಂದು ಭಾಗವನ್ನು ತಮ್ಮ ಮನೆಯನ್ನಾಗಿ ಮಾಡಿಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ. ಒಂದು ಕಾಲದಲ್ಲಿ ಚಾಕ್‌ಬೋರ್ಡ್‌ಗಳು, ಡೆಸ್ಕ್‌ಗಳು ಮತ್ತು ಶೈಕ್ಷಣಿಕ ಸಾಮಗ್ರಿಗಳನ್ನು ಇರಿಸಿದ್ದನ್ನು ಈಗ ಹಾಸಿಗೆಗಳು, ಹೊದಿಕೆಗಳು ಮತ್ತು ಅಡುಗೆ ಸಲಕರಣೆಗಳೊಂದಿಗೆ ತಾತ್ಕಾಲಿಕ ಮನೆಯಾಗಿ ಮರುರೂಪಿಸಲಾಗಿದೆ.

ಬಿಹಾರ: ತರಗತಿಯನ್ನೇ ಬೆಡ್​ ರೂಂ ಆಗಿ ಪರಿವರ್ತಿಸಿಕೊಂಡ ಪ್ರಾಂಶುಪಾಲರು
ತರಗತಿ
ನಯನಾ ರಾಜೀವ್
|

Updated on: Mar 11, 2024 | 9:41 AM

Share

ಬಿಹಾರದಲ್ಲಿ ಪ್ರಾಂಶುಪಾಲರೊಬ್ಬರು ಶಾಲೆಯ ತರಗತಿಯನ್ನೇ ಬೆಡ್​ ರೂಂ ಆಗಿ ಪತಿವರ್ತಿಸಿಕೊಂಡಿರುವ ವಿಚಾರ ಬಹಿರಂಗಗೊಂಡಿದೆ. ಕೆ.ಕೆ.ಪಾಠಕ್ ಅವರಂತಹ ಅಧಿಕಾರಿಗಳು ಬಿಹಾರದಲ್ಲಿ ಶಿಕ್ಷಣ ಇಲಾಖೆ ಮತ್ತು ಶಿಕ್ಷಕರನ್ನು ಸುಧಾರಿಸಲು ನಿರಂತರ ಪ್ರಯತ್ನಗಳನ್ನು ಮಾಡುತ್ತಿದ್ದರೂ, ಪರಿಸ್ಥಿತಿ ಹೆಚ್ಚು ಕಡಿಮೆ ಮೊದಲಿನಂತೆಯೇ ಇದೆ.

ಜಮುಯಿ ಜಿಲ್ಲೆಯಲ್ಲಿರುವ ಶಾಲೆಯೊಂದರಲ್ಲಿ ಪ್ರಾಂಶುಪಾಲರು ತರಗತಿಯನ್ನೇ ಬಡ್​ ರೂಂ ಮಾಡಿಕೊಂಡಿದ್ದಾರೆ, ಅಷ್ಟೇ ಅಲ್ಲದೆ ಪತಿಯೊಂದಿಗೆ ಅಲ್ಲಿ ವಾಸವಿದ್ದಾರೆ. ಈ ಶಾಲೆಯು ಜಮುಯಿ ಜಿಲ್ಲೆಯ ಖೈರಾ ಬ್ಲಾಕ್‌ನ ದೂರದ ಬರ್ದೌನ್ ಗ್ರಾಮದಲ್ಲಿದೆ.

ಮೇಲ್ದರ್ಜೆಗೇರಿದ ಮಿಡ್ಲ್ ಸ್ಕೂಲ್‌ನ ಕೊಠಡಿಯೊಂದರಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಶೀಲಾ ಹೆಂಬ್ರಾಮ್ ಅವರು ಶಾಲಾ ಕೊಠಡಿಯಲ್ಲಿ ಮಲಗುವ ಹಾಸಿಗೆಯಿಂದ ಹಿಡಿದು ಫ್ರಿಡ್ಜ್, ಅಲ್ಮೆರಾ, ಟಿವಿ, ಟೇಬಲ್ ಸೇರಿದಂತೆ ಎಲ್ಲಾ ಅಡುಗೆ ಸಾಮಗ್ರಿಗಳನ್ನು ಇರಿಸಿದ್ದಾರೆ.

ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಶಾಲೆಯನ್ನು ಶಿಕ್ಷಕಿ ತಮ್ಮ ವೈಯಕ್ತಿಕ ಉದ್ದೇಶಗಳಿಗೆ ಬಳಸಿಕೊಳ್ಳುತ್ತಿದ್ದಾರೆ ಎನ್ನುವ ದೂರು ಕೂಡ ಇದೆ.ಈ ತರಗತಿಗೆ ಮಕ್ಕಳು ಮನೆಯ ಸಾಮಗ್ರಿಗಳನ್ನು ಸಾಗಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಮುಖ್ಯ ಶಿಕ್ಷಕಿ ಶಾಲೆಯನ್ನೇ ಮನೆ ಮಾಡಿಕೊಂಡಿರುವುದು ಅಚ್ಚರಿ ಮೂಡಿಸಿದೆ.

ಮತ್ತಷ್ಟು ಓದಿ: ಶಿವಮೊಗ್ಗ: ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲಿಯೇ ಶಾಲೆಗೆ ಹೋಗಲು ವಿದ್ಯಾರ್ಥಿಗಳ ಪರದಾಟ; ರಸ್ತೆಗಾಗಿ ಮಕ್ಕಳ ಒತ್ತಾಯ

ಶಾಲೆಯ ಮುಖ್ಯ ಶಿಕ್ಷಕಿ ಶೀಲಾ ಹೆಂಬ್ರಾಮ್ ಅವರು ತಮ್ಮ ಪತಿಯೊಂದಿಗೆ ಇಲ್ಲಿ ವಾಸಿಸುತ್ತಿದ್ದಾರೆ.ಮಕ್ಕಳು ಓದಬೇಕಾದ ಶಾಲಾ ಕೊಠಡಿಯನ್ನು ಮುಖ್ಯ ಶಿಕ್ಷಕರು ತಮ್ಮ ವೈಯಕ್ತಿಕ ಕೆಲಸಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಮೇಲ್ದರ್ಜೆಗೇರಿದ ಮಧ್ಯಮ ಶಾಲೆ ಬರ್ದೌನ್‌ನಲ್ಲಿ 1 ರಿಂದ 8 ನೇ ತರಗತಿಯವರೆಗೆ ಶಿಕ್ಷಣವನ್ನು ನೀಡಲಾಗುತ್ತದೆ ಮತ್ತು 130 ಮಕ್ಕಳು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ನಿತ್ಯ ಸುಮಾರು 4ರಿಂದ 5 ಡಜನ್ ಮಕ್ಕಳು ಶಾಲೆಗೆ ಬರುತ್ತಾರೆ. ಈ ಶಾಲೆಯಲ್ಲಿ ಮೂರು ಕೊಠಡಿಗಳಿವೆ. ಮೊದಲ ಕೊಠಡಿಯಲ್ಲಿ 1ರಿಂದ 3ನೇ ತರಗತಿ, ಎರಡನೇ ಕೊಠಡಿಯಲ್ಲಿ 4ರಿಂದ 5ನೇ ತರಗತಿ ಹಾಗೂ ಮೂರನೇ ಕೊಠಡಿಯಲ್ಲಿ 6ರಿಂದ 8ನೇ ತರಗತಿವರೆಗೆ ಪಾಠ ಮಾಡಲಾಗುತ್ತಿದ್ದು, ಒಂದು ಕೊಠಡಿಯಲ್ಲಿ ಮುಖ್ಯ ಶಿಕ್ಷಕರ ವಸತಿ ಗೃಹ ನಿರ್ಮಿಸಲಾಗಿದೆ.

ಮಾಹಿತಿಯ ಪ್ರಕಾರ, ಶಾಲಾ ಮುಖ್ಯ ಶಿಕ್ಷಕಿ ಶೀಲಾ ಹೆಂಬ್ರಾಮ್ ಅವರ ತಾಯಿಯ ಮನೆ ಬರ್ದೌನ್‌ನಲ್ಲಿದ್ದು, ಅವರು ತಮ್ಮ ಮನೆಯನ್ನು ಸಮೀಪದಲ್ಲಿ ನಿರ್ಮಿಸುತ್ತಿದ್ದಾರೆ. ಇದೀಗ ಮನೆ ನಿರ್ಮಾಣವಾಗುತ್ತಿದ್ದು, ಮುಖ್ಯ ಶಿಕ್ಷಕಿ ಕಳೆದ ಹಲವು ತಿಂಗಳಿಂದ ಪತಿಯೊಂದಿಗೆ ಶಾಲೆಯಲ್ಲಿ ಮೊಕ್ಕಾಂ ಹೂಡಿದ್ದಾರೆ.

ಶೀಲಾ ಹೆಂಬ್ರಾಮ್ ಅವರು ಮೊದಲು ಜಮುಯಿಯಿಂದ ಬಂದು ಹೋಗುತ್ತಿದ್ದರು ಆದರೆ ಪ್ರಯಾಣಿಸಲು ಕಷ್ಟವಾಗುತ್ತಿತ್ತು, ಆದ್ದರಿಂದ ಶಾಲೆಯ ಪಕ್ಕದಲ್ಲಿ ತನ್ನ ಮನೆಯನ್ನು ನಿರ್ಮಿಸುತ್ತಿದ್ದೇನೆ, ಉಳಿದುಕೊಳ್ಳಲು ಸ್ಥಳವಿಲ್ಲ ಎಂದುರು. ಆದ್ದರಿಂದ ಅವಳು ತನ್ನ ಮನೆಯ ವಸ್ತುಗಳನ್ನು ಶಾಲೆಯ ಕಚೇರಿಯಲ್ಲಿ ಇರಿಸಿದ್ದೇವೆ ಎಂದರು, ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರು ಶಾಲೆಯಲ್ಲಿ ಮೊಕ್ಕಾಂ ಹೂಡಿದ್ದು, ಇಲಾಖಾ ಅಧಿಕಾರಿಗಳಿಗೆ ಮಾಹಿತಿ ಇಲ್ಲದಿರುವುದು ಅಚ್ಚರಿ ಮೂಡಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ