ಮಾನವೀಯತೆ ತೋರಬೇಕಾದ ಪೊಲೀಸರೇ ಹೀಗೆ ಅಮಾನವೀಯವಾಗಿ ನಡೆದುಕೊಂಡರೆ ಹೇಗೆ, ಅಪಘಾತದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು, ಅಂತಿಮವಾಗಿ ಅವರ ಕುಟುಂಬದವರಿಗೆ ವ್ಯಕ್ತಿಯ ಮುಖವನ್ನು ನೋಡಲು ಅವಕಾಶಮಾಡಿಕೊಡದೆ ಪೊಲೀಸರು ಮೃತದೇಹವನ್ನು ಕಾಲುವೆಗೆ ಎಸೆದಿದ್ದರು.
ಬಿಹಾರದ ಮುಜಾಫರ್‌ಪುರ ಜಿಲ್ಲೆಯ ಫಕುಲಿ ಔಟ್‌ಪೋಸ್ಟ್ ಪ್ರದೇಶದ ಧೋಧಿ ಕಾಲುವೆ ಸೇತುವೆಯ ಬಳಿ ಅಪಘಾತಕ್ಕೀಡಾದ ವ್ಯಕ್ತಿಯ ಮೃತದೇಹವನ್ನು ಕಾಲುವೆಗೆ ಎಸೆಯುವಾಗ ಕ್ಯಾಮೆರಾದಲ್ಲಿ ಸೆರೆಯಾದ ಮೂವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ವಿಡಿಯೋವೊಂದು ಮುಂಜಾನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಮುಜಾಫರ್‌ಪುರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಕಚೇರಿಯ ಹೇಳಿಕೆಯ ಪ್ರಕಾರ, ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಲಾಗಿದೆ ಮತ್ತು ಅದು ನಿಜವೆಂದು ತಿಳಿದುಬಂದಿದೆ. ಇದು ದುರದೃಷ್ಟಕರ ಘಟನೆ ಮತ್ತು ಅಲ್ಲಿದ್ದ ಪೊಲೀಸರು ಅದನ್ನು ನಿರ್ವಹಿಸಲು ವಿಫಲರಾಗಿದ್ದಾರೆ. ಸರಿಯಾಗಿ ಕರ್ತವ್ಯ ಮಾಡಲಿಲ್ಲ ಎಂದಿದ್ದಾರೆ.
ಘಟನೆಯಲ್ಲಿ ಭಾಗಿಯಾಗಿರುವ ಚಾಲಕ ಕಾನ್ಸ್‌ಟೇಬಲ್‌ನನ್ನು ಅಮಾನತುಗೊಳಿಸಲಾಗಿದ್ದು, ಇಬ್ಬರು ಗೃಹ ರಕ್ಷಕ ಯೋಧರ ಗುತ್ತಿಗೆಯನ್ನು ರದ್ದುಗೊಳಿಸಲಾಗಿದೆ.
ಮತ್ತಷ್ಟು ಓದಿ: ಉತ್ತರಾಖಂಡ: ನೈನಿತಾಲ್ನಲ್ಲಿ ಕಂದಕಕ್ಕೆ ಬಿದ್ದ ಬಸ್, 6 ಮಂದಿ ಸಾವು, 27 ಜನರಿಗೆ ಗಾಯ
ರಕ್ಷಿಸಬಹುದಾದ ದೇಹದ ಭಾಗಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ, ಮೃತರ ಗುರುತನ್ನು ಇಲ್ಲಿಯವರೆಗೆ ಪತ್ತೆಹಚ್ಚಲು ಸಾಧ್ಯವಾಗಿಲ್ಲ.
ದಾರಿಹೋಕರಿಂದ ಸೆರೆಹಿಡಿಯಲಾದ ದೃಶ್ಯಗಳು, ಇಬ್ಬರು ಪೊಲೀಸ್ ಅಧಿಕಾರಿಗಳು ವ್ಯಕ್ತಿಯ ರಕ್ತದಿಂದ ತೊಯ್ದ ದೇಹವನ್ನು ಎಳೆದುಕೊಂಡು ಹೋಗುವುದನ್ನು ಕಂಡಿದ್ದಾರೆ. ದೇಹವನ್ನು ಕಾಲುವೆಗೆ ತಳ್ಳಲು ಅವರು ತಮ್ಮ ಲಾಠಿಗಳನ್ನು ಬಳಸುತ್ತಿದ್ದರು ಎಂದು ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ