
ಬಿಹಾರ, ಮೇ 25: ಮದುವೆ(Marriage)ಯಲ್ಲಿ ಮನರಂಜನೆ ನೀಡಲೆಂದು ಕರೆಸಲಾಗಿದ್ದ ನೃತ್ಯಗಾತರ್ತಯರೇ, ವರನನ್ನೇ ಮಂಟಪದಿಂದ ಅಪಹರಿಸಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಆತನ ಮದುವೆಗೆಂದು ಡ್ಯಾನ್ಸರ್ಗಳನ್ನು ನೇಮಿಸಲಾಗಿತ್ತು. ಬಿಹಾರದ ಗೋಪಾಲ್‌ಗಂಜ್ ಜಿಲ್ಲೆಯಲ್ಲಿ ಶನಿವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಘಟನಾ ಸ್ಥಳದಲ್ಲಿದ್ದ ಜನರ ಪ್ರಕಾರ, ಮದುವೆಗಾಗಿ ನೇಮಿಸಿಕೊಳ್ಳುವ ನೃತ್ಯ ತಂಡವಾದ ಲೌಂಡಾ ನಾಚ್ನ ಸದಸ್ಯರು ಕುಟುಂಬ ಸದಸ್ಯರ ಮೇಲೆ ಹಲ್ಲೆ ನಡೆಸಿ ವರನನ್ನು ಅಪಹರಿಸಿದೆ ಎಂದು ಆರೋಪಿಸಲಾಗಿದೆ.
ನೃತ್ಯ ಮಾಡುತ್ತಿದ್ದ ಸಂದರ್ಭದಲ್ಲಿ ಯಾವುದೋ ವಿಚಾರಕ್ಕೆ ವಿವಾದ ಶುರುವಾಗಿತ್ತು, ಅದು ಹಿಂಸಾತ್ಮಕ ಘರ್ಷಣೆಯಾಗಿ ಮಾರ್ಪಟ್ಟಿತ್ತು. ಪರಿಸ್ಥಿತಿ ನಿಯಂತ್ರಣ ತಪ್ಪಿ, ಆ ತಂಡದವರು ಮದುವೆ ಮಂಟಪದೊಳಗೆ ನುಗ್ಗಿ, ವಧು ಮತ್ತು ಆಕೆಯ ಕುಟುಂಬ ಸೇರಿದಂತೆ ಅತಿಥಿಗಳ ಮೇಲೆ ದಾಳಿ ಮಾಡಿದರು.ನಾವು ಮದುವೆ ಸಮಾರಂಭದಲ್ಲಿ ನಿರತರಾಗಿದ್ದಾಗ, ಇದ್ದಕ್ಕಿದ್ದಂತೆ ಅವರು ಮನೆಗೆ ನುಗ್ಗಿ ವರನನ್ನು ಹೊಡೆಯಲು ಪ್ರಾರಂಭಿಸಿದರು. ಅವರು ವರನನ್ನು ಅಪಹರಿಸಿದರು.
ಮನೆಯೊಳಗಿನಿಂದ ಆಭರಣಗಳು ಮತ್ತು ಬೆಲೆಬಾಳುವ ವಸ್ತುಗಳನ್ನು ಸಹ ದೋಚಿದರು ಎಂದು ವಧುವಿನ ತಾಯಿ ವಿದ್ಯಾವತಿ ದೇವಿ ಹೇಳಿದ್ದಾರೆ. ಹೊರಗಿನ ಕುರ್ಚಿಗಳನ್ನು ತುಂಡರಿಸಿ, ವರನನ್ನು ಥಳಿಸಿ ವಾಹನದಲ್ಲಿ ಕರೆದೊಯ್ದರು ಎಂದು ಸ್ಥಳೀಯ ಸುನಿಲ್ ಕುಮಾರ್ ಹೇಳಿದರು. ದಾಳಿಕೋರರು ಇಡೀ ಕುಟುಂಬವನ್ನು ಭಯಭೀತರನ್ನಾಗಿ ಮಾಡಿದ್ದಾರೆ ಎಂದು ಕುಟುಂಬದ ಮತ್ತೊಬ್ಬ ಸದಸ್ಯೆ ಹೇಳಿದ್ದಾರೆ.
ಮತ್ತಷ್ಟು ಓದಿ: ಊಟ ಮಾಡ್ಕೊಂಡು ಬರ್ತೇವೆ, ವಧುವಿನ ಕೈಗೆ ಮಗು ಕೊಟ್ಟು ಹೋದ ಕಿಲಾಡಿ ಜೋಡಿ
ಮಾಹಿತಿ ಪಡೆದ ನಂತರ ಪೊಲೀಸರು ಸ್ಥಳಕ್ಕೆ ಬಂದರು ಆದರೆ ಅಪಹರಣಕಾರರು ಆ ವೇಳೆಗೆ ಪರಾರಿಯಾಗಿದ್ದರು. ಆದಾಗ್ಯೂ, ಪೊಲೀಸರು ತೀವ್ರ ಹುಡುಕಾಟ ನಡೆಸಿ 7 ಗಂಟೆಗಳಲ್ಲಿ ವರನನ್ನು ಪತ್ತೆಹಚ್ಚಿದರು. ಅಪಹರಣಕಾರರನ್ನು ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆತರಲಾಯಿತು.
ಪೊಲೀಸ್ ವರಿಷ್ಠಾಧಿಕಾರಿ ಅವಧೇಶ್ ದೀಕ್ಷಿತ್ ಮಾತನಾಡಿ, ಹಣಕಾಸಿನ ವಿವಾದವೇ ಈ ಕೃತ್ಯಕ್ಕೆ ಕಾರಣವೆಂದು ಮೇಲ್ನೋಟಕ್ಕೆ ತೋರುತ್ತದೆ ಎಂದಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ