AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀನ್ಯಾಕೆ ಸಾಯ್ಬಾರ್ದು ಎಂದು ಗಂಡ ಕೇಳಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಮಹಿಳೆ

ಗಂಡ ನೀನ್ಯಾಕೆ ಸಾಯ್ಬಾರ್ದು ಎಂದು ಕೇಳಿದ್ದಕ್ಕೆ ಮನನೊಂದು ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್​ನಲ್ಲಿ ನಡೆದಿದೆ. ನಾಲ್ಕು ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಎಲ್ಲವನ್ನೂ ಫೋನ್​ನಲ್ಲಿ ರೆಕಾರ್ಟ್​ ಮಾಡಿದ್ದಾಳೆ, ತನ್ನ ಪತಿ, ಮಾವ ಮತ್ತು ಅತ್ತಿಗೆ ವಿರುದ್ಧ ಆರೋಪಿಸಿದ್ದಾಳೆ.

ನೀನ್ಯಾಕೆ ಸಾಯ್ಬಾರ್ದು ಎಂದು ಗಂಡ ಕೇಳಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಮಹಿಳೆ
ಮಹಿಳೆ ಸಾವುImage Credit source: NDTV
ನಯನಾ ರಾಜೀವ್
|

Updated on: May 25, 2025 | 12:47 PM

Share

ಮೊರಾದಾಬಾದ್, ಮೇ 25: ಗಂಡ ನೀನ್ಯಾಕೆ ಸಾಯ್ಬಾರ್ದು ಎಂದು ಕೇಳಿದ್ದಕ್ಕೆ ಮನನೊಂದು ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್​ನಲ್ಲಿ ನಡೆದಿದೆ. ನಾಲ್ಕು ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಎಲ್ಲವನ್ನೂ ಫೋನ್​ನಲ್ಲಿ ರೆಕಾರ್ಟ್​ ಮಾಡಿದ್ದಾಳೆ, ತನ್ನ ಪತಿ, ಮಾವ ಮತ್ತು ಅತ್ತಿಗೆ ವಿರುದ್ಧ ಆರೋಪಿಸಿದ್ದಾಳೆ.

ಅಮ್ರೀನ್ ಜಹಾನ್ ಸುಮಾರು ನಾಲ್ಕು ತಿಂಗಳ ಹಿಂದೆ ಪ್ರೇಮ ವಿವಾಹವಾಗಿದ್ದರು. ಅವರ ಪತಿ ಬೆಂಗಳೂರಿನಲ್ಲಿ ವೆಲ್ಡರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅಮ್ರೀನ್ ತನ್ನ ಕುಟುಂಬದೊಂದಿಗೆ ಮೊರಾದಾಬಾದ್‌ನಲ್ಲಿ ವಾಸಿಸುತ್ತಿದ್ದರು. ಗರ್ಭಪಾತವಾದ ನಂತರ ತನ್ನ ಅತ್ತೆ-ಮಾವ ಕಿರುಕುಳ ನೀಡುತ್ತಿದ್ದರು ಎಂದು ಆಕೆ ಆರೋಪಿಸಿದ್ದಾಳೆ.

ಮಾಡುವ ಪ್ರತಿ ಕೆಲಸದಲ್ಲೂ ತಪ್ಪು ಹುಡುಕುತ್ತಾರೆ, ನಾನು ಮಲಗುವ ಕೋಣೆಯ ವಿದ್ಯುತ್ ಸಂಪರ್ಕವನ್ನೇ ಕಡಿತಗೊಳಿಸುತ್ತಾರೆ.ನನ್ನ ಅತ್ತಿಗೆ ಖತೀಜಾ, ನನ್ನ ಮಾವ ಶಾಹಿದ್ ನನ್ನ ಸಾವಿಗೆ ಕಾರಣ.ನನ್ನ ಗಂಡ ಕೂಡ ಭಾಗಶಃ ಜವಾಬ್ದಾರ. ಅವನು ನನ್ನನ್ನು ಅರ್ಥಮಾಡಿಕೊಳ್ಳುವುದಿಲ್ಲ. ಎಲ್ಲವೂ ನನ್ನ ತಪ್ಪು ಎಂದು ಅವನು ಕೂಡ ಭಾವಿಸುತ್ತಾನೆ.

ಅವನ ತಂದೆ ಮತ್ತು ಸಹೋದರಿ ಆತನಿಗೆ ಹೇಳಿದ್ದನ್ನು ಮಾತ್ರ ಆತ ಕೇಳುತ್ತಾನೆ ಇದೆಲ್ಲವನ್ನೂ ನನಗೆ ಸಹಿಸಿಕೊಂಡಿರಲಾಗದು ಎಂದು ಹೇಳಿದ್ದಾಳೆ. ಪತಿ ಮತ್ತು ಅತ್ತೆ ,ಮಾವ ನನಗೆ ಸಾಯುವಂತೆ ಒತ್ತಡ ಹೇರಿದ್ದರು. ನನ್ನ ಗಂಡ ನನ್ನ ಬಳಿ ನೀನು ಯಾಕೆ ಸಾಯಬಾರದು ಎಂದು ಕೇಳಿದ್ದ.

ಮತ್ತಷ್ಟು ಓದಿ: ಮಕ್ಕಳಾಗಲಿಲ್ಲವೆಂದು ಸೊಸೆಯನ್ನ ಕೊಂದ ಅತ್ತೆ-ಮಾವ: ಕೊಲೆಗೆ ಮಾಸ್ಟರ್​ ಪ್ಲ್ಯಾನ್​ ಮಾಡಿದ್ದ ಗಂಡ

ತಾನು ಅಸ್ವಸ್ಥಳಾಗಿದ್ದಾಗ ಚಿಕಿತ್ಸೆಗೆ ಹಣ ನೀಡುವ ಮೂಲಕ ತಪ್ಪು ಮಾಡಿದ್ದೇವೆ ಎಂದು ತನ್ನ ಅತ್ತೆ-ಮಾವ ಹೇಳಿದ್ದರು. ಅವರು ಖರ್ಚು ಮಾಡಿದ ಹಣವನ್ನು ಹಿಂದಿರುಗಿಸಲು ನನ್ನನ್ನು ಕೇಳಿದ್ದರು.ಆದರೆ ನನ್ನ ಬಳಿಯಾಗಲಿ ಗಂಡನ ಬಳಿಯಾಗಲೀ ಅಷ್ಟು ಹಣವಿಲ್ಲ, ಇದ್ದಿದ್ದರೆ ನಿಮ್ಮ ಬಳಿ ಏಕೆ ಕೇಳುತ್ತಿದ್ದೆ ಎಂದು ಮಹಿಳೆ ಉತ್ತರ ಕೊಟ್ಟಿದ್ದಾಗಿ ಬರೆದಿದ್ದಾಳೆ.

ಪೊಲೀಸರು ಅಮ್ರೀನ್ ಅವರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಆಕೆಯ ತಂದೆ ಸಲೀಂ ಪೊಲೀಸ್ ದೂರು ದಾಖಲಿಸಿದ್ದಾರೆ. ಅಮ್ರೀನ್ ನಿನ್ನೆ ತನಗೆ ಕರೆ ಮಾಡಿ ಅಳುತ್ತಿದ್ದಳು ಎಂದು ಅವರು ಹೇಳಿದ್ದಾರೆ.ತನ್ನ ಮೇಲೆ ಹಲ್ಲೆ ನಡೆಸಲಾಗುತ್ತಿದೆ ಎಂದು ಆಕೆ ಹೇಳಿಕೊಂಡಿದ್ದಾಳೆ ಮತ್ತು ತನ್ನನ್ನು ರಕ್ಷಿಸುವಂತೆ ಬೇಡಿಕೊಂಡಿದ್ದಾಳೆ ಎಂದು ಹೇಳಿದ್ದಾರೆ.ಅಮ್ರೀನ್ ತಂದೆ ಆಕೆ ಮನೆಗೆ ಬರುವಷ್ಟರಲ್ಲಿ ಆಕೆ ತಪ್ಪು ಹೆಜ್ಜೆ ಇಟ್ಟಿದ್ದಳು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ