ರಾಂಗ್ ಸೈಡ್ನಿಂದ ಬಂದು ಬೈಕ್ಗೆ ಡಿಕ್ಕಿ ಹೊಡೆದ ಕಾರು, ಭೀಕರ ಅಪಘಾತದ ವಿಡಿಯೋ
ಕಾರೊಂದು ರಾಂಗ್ ಸೈಡ್ನಲ್ಲಿ ಬಂದು ಬೈಕ್ ಸವಾರನ ಪ್ರಾಣ ತೆಗೆದಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ಸ್ನೇಹಿತರ ಭೇಟಿಗೆಂದು ಹೊರಟಿದ್ದ ಯುವಕ ತಿರುವಿನಲ್ಲಿ ಎದುರಿಗೆ ಬಂದ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ.
ಕಾರು ಚಾಲಕನೊಬ್ಬ ರಾಂಗ್ ಸೈಡ್ನಲ್ಲಿ ಬಂದು ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ಗುರುಗ್ರಾಮದ ಡಿಎಲ್‌ಎಫ್ 2ನೇ ಹಂತದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ನವದೆಹಲಿಯ ದ್ವಾರಕಾದ ಪೋಚನ್‌ಪುರದ ಅಕ್ಷತ್ ಗಾರ್ಗ್ ಎಂದು ಗುರುತಿಸಲಾದ ಬೈಕ್ ಸವಾರ ತನ್ನ ಬೈಕ್ನಲ್ಲಿ ಹೆಲ್ಮೆಟ್ ಮತ್ತು ಕೈಗವಸು ಸೇರಿದಂತೆ ಎಲ್ಲವನ್ನೂ ಧರಿಸಿದ್ದ.
ಆತನ ಸ್ನೇಹಿತ ಪ್ರದ್ಯುಮನ್ ಕುಮಾರ್ ಆತನ ಹಿಂದೆ ಮತ್ತೊಂದು ಮೋಟಾರ್ ಸೈಕಲ್ನಲ್ಲಿ ಹೋಗುತ್ತಿದ್ದ. ಕುಮಾರ್ ತೆಗೆದ ಗೋಪ್ರೊ ಕ್ಯಾಮೆರಾದಲ್ಲಿ ಈ ಅಪಘಾತ ಸೆರೆಯಾಗಿದೆ.
17 ಸೆಕೆಂಡ್‌ಗಳ ವೀಡಿಯೊದಲ್ಲಿ ಗಾರ್ಗ್ ಅವರು ತಿರುವಿನಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಕಾರೊಂದು ಬಂದು ಡಿಕ್ಕಿ ಹೊಡೆದಿದೆ. ಕೂಡಲೇ ಗಾರ್ಗ್ ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳದಲ್ಲಿ ಪ್ರಯಾಣಿಕರು ಜಮಾಯಿಸಿದರು ಕೂಡಲೇ ಆಂಬ್ಯುಲೆನ್ಸ್ಗೆ ಕರೆ ಮಾಡಿದರು, ಐದು ನಿಮಿಷಗಳಲ್ಲಿ ಆಂಬ್ಯುಲೆನ್ಸ್ ಆಗಮಿಸಿತು ಮತ್ತು ಗಾರ್ಗ್ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು, ಆದರೆ ವೈದ್ಯರು ಬರುವಾಗಲೇ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು.
Gurugram, Haryana: A 23-year-old motorcyclist, Akshat Garg, was killed in a wrong-way collision on Golf Course Road, DLF Phase II. The crash, captured on a GoPro by his friend, occurred around 5: 45 AM. Despite wearing safety gear, Garg succumbed to the impact. Authorities are… pic.twitter.com/ih29byhfzt
— IANS (@ians_india) September 19, 2024
ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಗಾರ್ಗ್ ಮತ್ತು ಕುಮಾರ್ ಅವರು ಡಿಎಲ್‌ಎಫ್ ಡೌನ್‌ಟೌನ್‌ನಿಂದ ಹೊರಟು ನಂತರ ಆಂಬಿಯೆನ್ಸ್ ಮಾಲ್‌ನಲ್ಲಿ ಸ್ನೇಹಿತರ ಭೇಟಿ ಮಾಡುವ ಉದ್ದೇಶದಿಂದ ದ್ವಾರಕಾದಿಂದ ಗರ್ಗ್ ಮತ್ತು ನ್ಯೂ ಪಾಲಂ ವಿಹಾರ್‌ನಿಂದ ಕುಮಾರ್ ಬೇರೆ ಬೇರೆ ಸ್ಥಳಗಳಿಂದ ಹೊರಟಿದ್ದರು.
ರಾಷ್ಟ್ರೀಯ ಹೆದ್ದಾರಿಯಲ್ಲಿ 3 ಲಾರಿಗಳು, 1 ಸ್ಲೀಪರ್ ಕೋಚ್ ಬಸ್, ಕಾರು ನಡುವೆ ಸರಣಿ ಅಪಘಾತ; ಹಲವರಿಗೆ ಗಾಯ
ಸಿಕಂದರ್‌ಪುರ-ಸೈಬರ್‌ಹಬ್ ಮೇಲ್ಸೇತುವೆಯನ್ನು ದಾಟಿದ ನಂತರ, ಅವರು ಒಂದು ತಿರುವಿನ ಬಳಿಗೆ ಬಂದಾಗ ವೇಗವಾಗಿ ಬಂದ ಕಾರು ಇದ್ದಕ್ಕಿದ್ದಂತೆ ತಪ್ಪು ದಿಕ್ಕಿನಿಂದ ಬಂದಿತು. ಕಾರು ಗಾರ್ಗ್ ಅವರ ಮೋಟಾರ್ ಸೈಕಲ್‌ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ.
ಪೊಲೀಸ್ ಅಧಿಕಾರಿ ಮಾತನಾಡಿ, ಅಪಘಾತವನ್ನು ತಪ್ಪಿಸಲು ಕಾರು ಚಾಲಕನಿಗೆ ಅಥವಾ ಬೈಕ್ ಸವಾರನಿಗೆ ಯಾವುದೇ ದಾರಿ ಇರಲಿಲ್ಲ, ಏಕಾಏಕಿ ಎದುರಿಗೆ ಬಂದ ಕಾರಿಗೆ ಬೈಕ್ ಡಿಕ್ಕಿ ಹೊಡೆದಿದೆ. ಬೈಕ್ ಗುರುತಿಸಲಾಗದಷ್ಟು ನುಜ್ಜುಗುಜ್ಜಾಗಿದೆ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ